ಬಿಎಸ್‌ಎಫ್ ವಾಹನಗಳ ಮೇಲೆ ಉಗ್ರರ ದಾಳಿ
ಶ್ರೀನಗರ,ನ.26: ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರಾ ಪ್ರದೇಶದಲ್ಲಿಂದು ಬೆಳಗ್ಗೆ ಬಿಎಸ್‌ಎಫ್ ವಾಹನಗಳ ಸಾಲಿನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಓರ್ವ ಯೋಧ ಗಾಯಗೊಂಡಿದ್ದಾನೆ.
ಗಾಯಾಳು ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ದೇಹಸ್ಥಿತಿ ಸ್ಥಿರವಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಯೋರ್ವರು ಇಂದಿಲ್ಲಿ ತಿಳಿಸಿದರು.
ಇದು ಹಂದ್ವಾರಾದಲ್ಲಿ ಕಳೆದ 36 ಗಂಟೆಗಳಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರು ನಡೆಸಿರುವ ಎರಡನೆ ದಾಳಿಯಾಗಿದೆ. ಉಗ್ರರು ಗುರುವಾರ ರಾತ್ರಿ ಹಂದ್ವಾರಾದಲ್ಲಿಯ ಪೊಲೀಸ್ ಠಾಣೆಯ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಪೊಲೀಸರು ಪ್ರತಿದಾಳಿ ನಡೆಸಿದಾಗ ಉಗ್ರರು ಪರಾರಿಯಾಗಿದ್ದರು. ಈ ಘಟನೆಯಲ್ಲಿ ಯಾವುದೇ ಹಾನಿಯುಂಟಾಗಿರಲಿಲ್ಲ.
Next Story





