ಕ್ಯಾಸ್ಟ್ರೊ ತಲೆಮಾರುಗಳಿಗೆ ಸ್ಫೂರ್ತಿಯಾಗಿದ್ದರು: ಸಿಪಿಐ
ಹೈದರಾಬಾದ್, ನ.26: ಕ್ಯೂಬದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೊಗೆ ಭಾರತದ ಕಮ್ಯುನಿಸ್ಟ್ ಪಕ್ಷವು(ಸಿಪಿಐ)ಇಂದು ಶ್ರದ್ಧಾಂಜಲಿ ಸಲ್ಲಿಸಿದೆ. ಅವರನ್ನು ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ಮಹಾನ್ ನಾಯಕನೆಂದು ಬಣ್ಣಿಸಿದ ಪಕ್ಷವು ಅವರು ತಲೆಮಾರುಗಳಿಗೆ ಸ್ಫೂರ್ತಿಯಾಗಿದ್ದಾರೆಂದು ಹೇಳಿದೆ.
ತಾನು ಫಿಡೆಲ್ ಕಾಸ್ಟ್ರೊ ನಿಧನರಾದ ದುಃಖದ ಸುದ್ದಿಯನ್ನು ಕೇಳಿದೆ. ಮುಖ್ಯವಾಗಿ ತೃತೀಯ ಜಗತ್ತಿನಲ್ಲಿ ಸಾಮ್ರಾಜ್ಯಶಾಹಿ - ವಿರೋಧಿ ಹೋರಾಟದಲ್ಲಿ ಅವರು ಮಹಾನ್ ನಾಯಕರಾಗಿದ್ದರು ಹಾಗೂ ಸಾಮ್ರಾಜ್ಯಶಾಹಿ ದಬ್ಬಾಳಿಕೆಯನ್ನು ಯಶಸ್ವಿಯಾಗಿ ಸಹಿಸಿಕೊಂಡು, ಅದನ್ನೆದುರಿಸಿದ್ದ ವ್ಯಕ್ತಿಯಾಗಿದ್ದರೆಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಸುರವರಂ ಸುಧಾಕರ ರೆಡ್ಡಿ ಶ್ಲಾಘಿಸಿದ್ದಾರೆ.
ತಾವು ಕಾಸ್ಟ್ರೊಗೆ ತಮ್ಮ ಅತ್ಯಂತ ಗೌರವದ ಕ್ರಾಂತಿಗಾಗಿ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇವೆಂದು ಅವರು ಹೇಳಿದ್ದಾರೆ.
Next Story





