ನೋಟು ನಿಷೇಧ: ಕೊನೆತನಕ ಹೋರಾಡುವೆ-ಮಮತಾ
.jpg)
ಕೊಲ್ಕತಾ, ನ. 27: ನೋಟು ಅಮಾನ್ಯಗೊಳಿಸಿದ ವಿಷಯದಲ್ಲಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೊಮ್ಮೆ ಸೆಡ್ಡು ಹೊಡೆದಿದ್ದಾರೆ. ಅಘೋಷಿತ ಆರ್ಥಿ ಕ ತುರ್ತುಪರಿಸ್ಥಿತಿಯನ್ನು ನಿರ್ಮಿಸಿರುವ ಜನವಿರೋಧಿ ನೋಟು ಅಮಾನ್ಯ ತೀರ್ಮಾನದ ವಿರುದ್ಧ ಕೊನೆವರೆಗೂ ಹೋರಾಡುವೆ ಎಂದು ಅವರು ಹೇಳಿದ್ದಾರೆಂದು ವರದಿಯಾಗಿದೆ.
ಮೋದಿ ಸರಕಾರ ಮತ್ತು ಬಿಜೆಪಿ ದೇಶವನ್ನು ಆರ್ಥಿಕ ಅರಾಜಕತೆಯೆಡೆಗೆ ಒಯ್ದಿದೆ ಎಂದು ತನ್ನ ಪಕ್ಷದ ನಾಯಕರ ಸಭೆಯಲ್ಲಿ ಅವರು ಹೇಳಿದ್ದಾರೆಂದು ಹಿರಿಯ ಟಿಎಂಸಿ ನಾಯಕರೊಬ್ಬರು ತಿಳಿಸಿದ್ದಾರೆ.
Next Story





