Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮೂರು ವಾರಗಳಾದರೂ ಬಿಡುಗಡೆಯಾಗಿದ್ದು ...

ಮೂರು ವಾರಗಳಾದರೂ ಬಿಡುಗಡೆಯಾಗಿದ್ದು ರದ್ದಾದ ನೋಟುಗಳ ಮೌಲ್ಯದ ಶೇ.10ರಷ್ಟು ಹೊಸನೋಟುಗಳು ಮಾತ್ರ

ನೋಟು ನಿಷೇಧ

ವಾರ್ತಾಭಾರತಿವಾರ್ತಾಭಾರತಿ27 Nov 2016 3:05 PM IST
share
ಮೂರು ವಾರಗಳಾದರೂ ಬಿಡುಗಡೆಯಾಗಿದ್ದು  ರದ್ದಾದ ನೋಟುಗಳ ಮೌಲ್ಯದ ಶೇ.10ರಷ್ಟು ಹೊಸನೋಟುಗಳು ಮಾತ್ರ

ಹೊಸದಿಲ್ಲಿ,ನ.27: 500 ಮತ್ತು 1,000 ನೋಟುಗಳು ನಿಷೇಧಗೊಂಡು ಮೂರು ವಾರಗಳಾಗುತ್ತಿವೆ. ಈ ಅವಧಿಯಲ್ಲಿ ಚಲಾವಣೆ ರದ್ದುಗೊಂಡಿರುವ ನೋಟುಗಳ ವೌಲ್ಯದ ಕೇವಲ ಶೇ.10ರಷ್ಟು ಅಥವಾ 1.5 ಲಕ್ಷ ಕೋ.ರೂಗಳ ಹೊಸನೋಟುಗಳು ಬಿಡುಗಡೆಯಾಗಿವೆ. ಸರಕಾರದ ಕ್ರಮದಿಂದಾಗಿ ಸುಮಾರು 14.18 ಲಕ್ಷ ಕೋಟಿ ರೂ.ವೌಲ್ಯದ ಹಳೆಯ 500 ಮತ್ತು 1,000 ರೂ.ನೋಟುಗಳು ಅಸ್ತಿತ್ವವನ್ನು ಕಳೆದುಕೊಂಡಿವೆ.

ಕ್ರೆಡಿಟ್ ಸುಯಿಸ್ಸೆಯ ಇತ್ತೀಚಿನ ವರದಿಯೊಂದು ಈ ಅಂಶವನ್ನು ಬೆಟ್ಟು ಮಾಡಿದೆ. ಚಲಾವಣೆಯಿಂದ ಹಿಂದೆಗೆದುಕೊಳ್ಳಲಾಗಿರುವ ಅಷ್ಟೂ ನೋಟುಗಳ ಬದಲು ಹೊಸನೋಟುಗಳನ್ನು ದೇಶದ ಆರ್ಥಿಕತೆಯಲ್ಲಿ ಸೇರ್ಪಡೆಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕಿಗೆ ಹಲವಾರು ತಿಂಗಳುಗಳೇ ಬೇಕಾಗಬಹುದು ಎಂದು ಕ್ರೆಡಿಟ್ ಸುಯಿಸ್ಸೆ ವರದಿಯನ್ನು ಉಲ್ಲೇಖಿಸಿ ಆಂಗ್ಲ ದೈನಿಕವೊಂದು ವರದಿ ಮಾಡಿದೆ.

ಬಿಡುಗಡೆಯಾಗಿರುವ ಹೊಸನೋಟುಗಳ ಪೈಕಿ ಸಿಂಹಪಾಲು 2000 ರೂ.ನೋಟಿ ನದಾಗಿದ್ದು, ಚಿಲ್ಲರೆ ಕೊರತೆಯಿಂದಾಗಿ ವಹಿವಾಟು ನಡೆಸುವುದೇ ಕಷ್ಟವಾಗಿದೆ. ಕಡಿಮೆ ಮುಖಬೆಲೆಗಳ ನೋಟುಗಳ ಕೊರತೆ ಹಣದ ಕೊರತೆ ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.

ನ.8ರಂದು ನೋಟು  ನಿಷೇಧವನ್ನು ಘೋಷಿಸುವ ಮುನ್ನ ಭಾರತದಲ್ಲಿ ಚಲಾವಣೆ ಯಲ್ಲಿದ್ದ ಒಟ್ಟು ನೋಟುಗಳ ಪೈಕಿ ಶೇ.86ರಷ್ಟು 500 ಮತ್ತು 1,000 ರೂ.ನೋಟು ಗಳಾಗಿದ್ದು, ಕಡಿಮೆ ಮುಖಬೆಲೆಗಳ ನೋಟುಗಳ ಪ್ರಮಾಣ ಕೇವಲ ಶೇ.14ರಷ್ಟಿತ್ತು. ಈಗಲೂ ಕಡಿಮೆ ಮುಖಬೆಲೆಯ ಇಷ್ಟೇ ನೋಟುಗಳು ಚಲಾವಣೆಯಲ್ಲಿವೆ.

ಆರ್‌ಬಿಐಗೆ ಈವರೆಗೆ 150 ಕೋಟಿ ನೋಟುಗಳನ್ನು ಮುದ್ರಿಸಲು ಸಾಧ್ಯವಾಗಿದ್ದು, ಹೆಚ್ಚಿನವು 2,000 ರೂ.ನೋಟುಗಳಾಗಿವೆ. ವಹಿವಾಟು ಸಹಜ ಸ್ಥಿತಿಗೆ ಮರಳಬೇಕಾದರೆ ಆರ್‌ಬಿಐನ ನೋಟು ಮುದ್ರಣ ಘಟಕಗಳು ಹೊಸ 500 ರೂ.ಗಳ ಕನಿಷ್ಠ ಒಂದರಿಂದ ಎರಡು ಸಾವಿರ ಕೋಟಿ ನೋಟುಗಳನ್ನು ಮುದ್ರಿಸುವ ಅಗತ್ಯವಿದೆ ಎಂದು ವರದಿಯು ಹೇಳಿದೆ.

ಜನವರಿಗೆ ಮೊದಲು ನಗದು ಕೊರತೆಯು ನೀಗಬೇಕಾದರೆ ಆರ್‌ಬಿಐ ಮುದ್ರಣ ಘಟಕಗಳು ತಮ್ಮ ಶೇ.150ರಷ್ಟು ಮುದ್ರಣ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸ ಬೇಕಾಗುತ್ತದೆ ಎಂದು ಐಸಿಐಸಿಐ ಸೆಕ್ಯೂರಿಟೀಸ್‌ನ ಸಂಶೋಧನಾ ವರದಿಯು ಹೇಳಿದೆ. ಮುದ್ರಣ ಘಟಕಗಳು ತಮ್ಮ ಈಗಿನ ಶೇ.100 ಸಾಮರ್ಥ್ಯದೊಂದಿಗೆ ಕೆಲಸ ಮಾಡಿದರೆ ಹಣಕಾಸು ಸ್ಥಿತಿ ಸಹಜ ಸ್ಥಿತಿಗೆ ಮರಳಲು ಇನ್ನೂ ಕನಿಷ್ಠ ನಾಲ್ಕು ತಿಂಗಳುಗಳು ಬೇಕು ಎಂದು ಅದು ತಿಳಿಸಿದೆ.

ಚಲಾವಣೆಯಲ್ಲಿ ಹಣದ ಕೊರತೆಯು ಅಲ್ಪಾವಧಿಯಿಂದ ಮಧ್ಯಮ ಅವಧಿಯಲ್ಲಿ ಆರ್ಥಿಕತೆ ಮತ್ತು ಗ್ರಾಹಕ ಬೇಡಿಕೆಗಳನ್ನು ಮಂದಗೊಳಿಸುವ ಜೊತೆಗೆ ಭಾರತದ ಜಿಡಿಪಿಯು ಶೇ.4ರಷ್ಟು ಕುಸಿಯಬಹುದು ಎಂದು ಕೆಲವು ಆರ್ಥಿಕ ತಜ್ಞರು ಅಂದಾಜಿಸಿ ದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X