ಬೀದಿ ಬದಿ ಭಿಕ್ಷೆ ಬೇಡುವ ಹುಡುಗನನ್ನು ಈತ ದುಬಾರಿ ರೆಸ್ಟೋರೆಂಟ್ ಗೆ ಕರೆದುಕೊಂಡು ಹೋದ
ಬಳಿಕ ಏನಾಯಿತು ನೋಡಿ

ರಸ್ತೆಬದಿಯಲ್ಲಿ ಬಾಲಕರು ಕೈ ಚಾಚಿ ಬೇಡುವುದನ್ನು ನೋಡಿದಾಗ ಏನನಿಸುತ್ತದೆ? ಬಹಳಷ್ಟು ಬಾರಿ ಜನರು ಅಲಕ್ಷ್ಯದಿಂದ ನೋಡಿ ತಮ್ಮ ಕೆಲಸಗಳಿಗೆ ಸಾಗುತ್ತಾರೆ. ಕೆಲವೊಮ್ಮೆ ಸ್ವಲ್ಪ ಹಣಕೊಟ್ಟು ಕಳುಹಿಸಿಬಿಡುತ್ತಾರೆ. ಆದರೆ ಕೆಲವರು ಇವರ ಜೊತೆಗೆ ಮಾತನಾಡಿ ಅವರ ಬದುಕನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅದರಿಂದ ಸಿಗುವ ತೃಪ್ತಿಗೆ ಬೆಲೆ ಕಟ್ಟಲಾಗದು.
ಮುಂಬೈ ಮೂಲದ ಅಮೋದ್ ಸಾರಂಗ್ ಇತ್ತೀಚೆಗೆ ದಕ್ಷಿಣ ಮುಂಬೈಯ ಪ್ರತಿಷ್ಠಿತ ಕೊಲಬಾದ ರಸ್ತೆಯಲ್ಲಿ ಇಂತಹದೇ ಒಬ್ಬ ಹುಡುಗ ದೀಪಕ್‌ನನ್ನು ಭೇಟಿ ಮಾಡಿದ ಅನುಭವ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಹೆಚ್ಚು ಮಾತನಾಡದ ದೀಪಕ್ ನಂತರ ಅಪರಿಚಿತರ ಜೊತೆಗೆ ತಮ್ಮ ವಿವರ ಹಂಚಿಕೊಂಡರು. ರೆಸ್ಟೊರೆಂಟ್ ಒಂದರ ಒಳಗೆ ಆತನನ್ನು ಅಮೋದ್ ಕರೆದುಕೊಂಡು ಹೋದರು. ತಮಗೆ ಪ್ರವೇಶವಿಲ್ಲದ ಇಂತಹ ಜಾಗದ ಒಳಗೆ ಏನು ನಡೆಯುತ್ತದೆ ಎಂದು ತಿಳಿದುಕೊಳ್ಳುವ ಬಯಕೆ ಮೊದಲಿನಿಂದಲೇ ಇತ್ತು ಎನ್ನುವುದು ದೀಪಕ್ ಉತ್ತರವಾಗಿತ್ತು. ರೆಸ್ಟೊರೆಂಟ್‌ನ ವಾಷ್‌ರೂಂನಲ್ಲಿ ಕೈ ತೊಳೆಸಲು ಕರೆದುಕೊಂಡು ಹೋದಾಗ, ಅಲ್ಲಿ ಅಷ್ಟೊಂದು ಶುಚಿಯಾದ ನೀರು ಬರುತ್ತಿರುವುದು ಕಂಡು ದೀಪಕ್‌ಗೆ ಅಚ್ಚರಿಯಾಗಿತ್ತು. ಆ ನೀರನ್ನು ಮುಖಕ್ಕೆ ಎರಚಿಕೊಳ್ಳುತ್ತಲೇ ಸಂತೋಷಪಟ್ಟಿದ್ದ.
"ಯಾವುದೇ ಮನೋರಂಜನಾ ಕಾರ್ಯಕ್ರಮ ನಿಮಗೆ ಇಷ್ಟೊಂದು ಸಂತೋಷ ಕೊಡುವುದಿಲ್ಲ. ಫ್ಯಾನ್ಸಿ ಕಾರು ಅಥವಾ ಉಡುಪಿನಿಂದ ನಮ್ಮ ಬಗ್ಗೆ ಖುಷಿಪಟ್ಟುಕೊಳ್ಳಬಹುದು. ನಾವೆಲ್ಲರೂ ಜೀವನದಲ್ಲಿ ಪಡೆದುಕೊಳ್ಳಲು ಬಯಸಿದ್ದನ್ನು ಹೊರತಾದ ಒಂದು ಕೊಡುಗೆಯೂ ನಮಗಿದೆ. ನನ್ನ ಕೊಡುಗೆ ಎಂದರೆ ಮನಸ್ಸಿಗೆ ತಂಪು ನೀಡುವುದು" ಎಂದು ಅಮೋದ್ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ.
ಅಮೋದ್ ಫೇಸ್‌ಬುಕ್ ಪೋಸ್ಟ್ ಹೀಗಿದೆ-
ಕಳೆದ ರಾತ್ರಿ ನಾನು ಮತ್ತು ನನ್ನ ಸ್ನೇಹಿತ ದೀಪಕ್ ಎನ್ನುವ ಈ ಬಾಲಕನನ್ನು ಭೇಟಿಯಾದೆವು. ಈತ ಕೊಲಬಾದ ರಸ್ತೆಯಲ್ಲಿ ಜೀವನ ನಡೆಸುತ್ತಾನೆ. ನಾವು ಮೊದಲಿಗೆ ದೀಪಕ್‌ನನ್ನು ಭೇಟಿಯಾದಾಗ ಆತ ನಿಜಕ್ಕೂ ಭಯ ಬಿದ್ದು, ನಗಲೇ ಇಲ್ಲ. ಆದರೆ ಆತನ ಹೆಗಲಿಗೆ ಕೈ ಹಾಕಿ ಸ್ವಲ್ಪ ಹೊತ್ತು ಮಾತನಾಡಿದ ಮೇಲೆ ಸ್ವಲ್ಪ ಸಮಾಧಾನವಾಗಿತ್ತು. ನಮ್ಮ ಜೊತೆಗೆ ಸ್ಟಾರ್‌ಬಕ್ಸ್‌ಗೆ ಬರಲು ಆತ ಒಪ್ಪಿಕೊಂಡ. ಆ ಜಾಗಕ್ಕೆ ಬಾಸ್‌ನಂತೆ ಪ್ರವೇಶಿಸಿದ ಆತ, ಇಲ್ಲಿಗೆ ಬರುವ ಆಸೆ ಹಿಂದಿನಿಂದಲೂ ಇತ್ತು ಎಂದು ಹೇಳಿದ್ದ.
ಏನು ತಿನ್ನಲು ಬಯಸಿದ್ದೀಯ ಎಂದು ಕೇಳಿದರೆ ಚೀಸ್‌ಕೇಕ್‌ಗಳ ಕಡೆಗೆ ತಕ್ಷಣ ಕೈ ಮಾಡಿದ. ಒಂದಲ್ಲ, ಎರಡು!
ಆತ ತಿನ್ನಲು ಆರಂಭಿಸುವ ಮೊದಲು ನಾನು ವಾಷ್‌ರೂಂಗೆ ಕೈ ತೊಳೆಸಲು ಕರೆದುಕೊಂಡು ಹೋದೆ.
ವಾಷ್‌ರೂಂಗೆ ಪ್ರವೇಶಿಸಿ ಅಷ್ಟು ಖುಷಿಪಟ್ಟ ಮತ್ತೊಬ್ಬರನ್ನು ನಾನು ಜೀವನದಲ್ಲಿ ನೋಡಿರಲಿಲ್ಲ. ನೀರು ಅಷ್ಟು ಸ್ವಚ್ಛವಾಗಿದೆ ಎಂದು ಆತನಿಗೆ ನಂಬಲೇ ಸಾಧ್ಯವಾಗಲಿಲ್ಲ ಮತ್ತು ಖುಷಿಯಿಂದ ತನ್ನ ಮುಖಕ್ಕೆ ನೀರನ್ನು ಸಿಂಪಡಿಸುತ್ತಲೇ ಇದ್ದ. ನಮ್ಮ ಮೇಜಿಗೆ ವಾಪಾಸು ಬಂದ ಕೂಡಲೇ ದೀಪಕ್ ತಕ್ಷಣ ತಿನ್ನಲು ಆರಂಭಿಸಿದ ಮತ್ತು ಕೆಲವು ಬೈಟ್‌ಗಳ ನಂತರ ತನ್ನ ಕೈಯಿಂದ ನಮಗೆ ತಿನ್ನಿಸಲು ಆರಂಭಿಸಿದ. ಪ್ರತೀ ಬೈಟ್ ಮೇಲೆ ಆತ ಇಡೀ ಜಾಗದಲ್ಲಿ ಸುತ್ತಾಡುತ್ತಿದ್ದ ಮತ್ತು ವಾಪಾಸು ಬಂದು ತನ್ನ ಸೀಟಿನ ಮೇಲೆ ಹಾರಿ ಕುಳಿತುಕೊಳ್ಳುತ್ತಿದ್ದ. ಅಂತಿಮವಾಗಿ ಆತ ನಮ್ಮ ಜೊತೆಗೆ ಬಹಳ ಹೊಂದಿಕೊಂಡು ನನ್ನ ತೊಡೆ ಮೇಲೆಯೇ ಮಲಗಿದ. ನನ್ನನ್ನು ಅಪ್ಪಿಕೊಂಡು ನನಗೆ ಮುತ್ತನ್ನಿಟ್ಟು ತನ್ನದೇ ರೀತಿಯಲ್ಲಿ ಗುಡ್‌ಬೈ ಹೇಳಿದ. ನಾನು ದೀಪಕ್‌ನನ್ನು ಮನೆಗೆ ಬಿಡಲು ಹೋದಾಗ 15 ವರ್ಷದ ಆತನ ಸಹೋದರಿ ನನ್ನ ಕಡೆಗೆ ಓಡಿಬಂದಳು. ನಾನು ಆದಿತ್ಯ ರಾಯ್ ಕಪೂರ್ ತರಹ ಕಾಣುತ್ತಿದ್ದೇನೆ ಮತ್ತು ತಾನು ಆತನ ದೊಡ್ಡ ಅಭಿಮಾನಿ ಎಂದೂ ಹೇಳಿದಳು. ಆದಿತ್ಯ ಕಪೂರ್‌ಗೆ ನನ್ನನ್ನು ಹೋಲಿಸಿದಾಗ ಸಮಾಧಾನ ಸಿಕ್ಕಿದ್ದ ಏಕೈಕ ಕ್ಷಣ ಅದಾಗಿತ್ತು. ನಾನು ಮೊದಲ ಬಾರಿಗೆ ಹೀಗೆ ಮಾಡಿದ್ದೇನೂ ಅಲ್ಲ. ಆದರೆ ಇತ್ತೀಚೆಗೆ ಸಾಮಾಜಿಕ ತಾಣದ ಶಕ್ತಿ ಅರಿವಾಗಿರುವ ಕಾರಣ ಫೇಸ್‌ಬುಕ್‌ನಲ್ಲಿ ಮೊದಲ ಬಾರಿಗೆ ಈ ವಿವರ ಹಾಕುತ್ತಿದ್ದೇನೆ. ನಮ್ಮ ಬಳಿ ಇರುವ ವಿಷಯಗಳಿಗೆ ಮೌಲ್ಯ ಕೊಡಬೇಕು ಮತ್ತು ಮೌಲ್ಯವನ್ನು ಸೃಷ್ಟಿಸಬೇಕು ಎನ್ನುವುದೇ ನನ್ನ ಉದ್ದೇಶ. ನಾವು ದಿನವೂ ಆಹಾರ ಮತ್ತು ನೀರನ್ನು ವ್ಯರ್ಥ ಮಾಡುತ್ತೇವೆ. ನಮ್ಮಲ್ಲಿ ಕೆಲವರು ಆಹಾರ ಹಂಚಿಕೊಳ್ಳುವುದೂ ಇಲ್ಲ. ಅವರನ್ನು ಆಡಂಬರದ ಜಾಗಗಳಿಗೆ ಕರೆದುಕೊಂಡು ಹೋಗುವುದು ವಿಷಯವಲ್ಲ, ಹೆಚ್ಚು ಜನರನ್ನು ಅರಿಯುವುದು ಮತ್ತು ಪ್ರೋತ್ಸಾಹಿಸುವುದು ಮತ್ತು ಅವರ ಜೀವನ ಉತ್ತಮಪಡಿಸಲು ನೆರವಾಗಬೇಕು. ತಿನ್ನುವ ಮೊದಲು ಕೈ ತೊಳೆಯುವುದು ಎಷ್ಟು ಮುಖ್ಯ ಎಂದು ದೀಪಕ್‌ನಿಗೆ ನಾನು ಹೇಳಿದೆ. ನಿಮ್ಮ ಹೆತ್ತವರು ಶಾಲೆಗೆ ಕಳುಹಿಸದೆ ಇದ್ದರೂ ಜೀವನದಲ್ಲಿ ಉತ್ತಮ ಕೆಲಸಗಳನ್ನು ಮಾಡಬಹುದು ಮತ್ತು ಒಮ್ಮೆ ನೀವು ಹಾಗೆ ಮಾಡಿದಲ್ಲಿ ಇಂತಹ ಸ್ಥಳಗಳಿಗೆ ನಿತ್ಯವೂ ಬರಬಹುದು ಎಂದೂ ಆತನಿಗೆ ವಿವರಿಸಿದೆ.
ಯಾವುದೇ ಮನೋರಂಜನಾ ಕಾರ್ಯಕ್ರಮ ನಿಮಗೆ ಇಷ್ಟೊಂದು ಸಂತೋಷ ಕೊಡುವುದಿಲ್ಲ. ಫ್ಯಾನ್ಸಿ ಕಾರು ಅಥವಾ ಉಡುಪಿನಿಂದ ನಮ್ಮ ಬಗ್ಗೆ ಖುಷಿಪಟ್ಟುಕೊಳ್ಳಬಹುದು. ನಾವೆಲ್ಲರೂ ಜೀವನದಲ್ಲಿ ಪಡೆದುಕೊಳ್ಳಲು ಬಯಸಿದ್ದನ್ನು ಹೊರತಾದ ಒಂದು ಕೊಡುಗೆಯೂ ನಮಗಿದೆ. ನನ್ನ ಕೊಡುಗೆ ಎಂದರೆ ಮನಸ್ಸಿಗೆ ತಂಪು ನೀಡುವುದು. ನನಗೆ ದುಬಾರಿ ಕಾರುಗಳಲ್ಲಿ ಕುಳಿತು ತಿರುಗಾಡುವ ಅದೃಷ್ಟವಿಲ್ಲದೆ ಇರಬಹುದು. ನನಗೆ ಜೀವನದಲ್ಲಿ ದೊಡ್ಡ ಪಾತ್ರವೇ ಇದ್ದಿರಬಹುದು. ಈಗಾಗಲೇ ಜಗತ್ತಿನಲ್ಲಿ ಸಾಕಷ್ಟು ದ್ವೇಷ ಮತ್ತು ಹಿಂಸೆ ಇರುವ ಕಾರಣ ನಮ್ಮ ಕಡೆಯಿಂದ ಸ್ವಲ್ಪ ಪ್ರೀತಿ ಹಂಚೋಣ. ಖುಷಿಯಾಗಿರುವುದು ಮತ್ತು ಇತರರ ಜೀವನ ಸುಧಾರಿಸುವುದೇ ಜೀವನ.
ಪ್ರತೀ ಕಾರಣಕ್ಕೂ ಒಂದು ಪರಿಣಾಮವಿದೆ. ಹಾಗಿದ್ದರೂ ಪರಿಣಾಮಗಳನ್ನು ಕಾಣಲು ಕಾರಣಗಳನ್ನು ಎಳೆದುಕೊಳ್ಳಲು ನೀವು ಮೊದಲು ಅದನ್ನು ಪ್ರಯತ್ನಿಸಬೇಕು. ಮರದ ಒಲೆ ಮುಂದೆ ನಿಂತು ಬಿಸಿಯನ್ನು ಬೇಡುವಂತೆ ಪ್ರೀತಿ ಮತ್ತು ಶಾಂತಿಗಾಗಿ ಜಗತ್ತು ಕೆಲಸ ಮಾಡುವುದಕ್ಕಾಗಿ ಕಾಯುತ್ತಿದ್ದೇನೆ. ನೀವು ಇಂಧನವನ್ನು ಒದಗಿಸದೆ ಏನೂ ಪರಿಣಾಮ ಸಿಗದು. ಮೊದಲು ಪ್ರಯತ್ನಿಸಿ. ಇಂದೇ.
ಕೃಪೆ: indianexpress.com







