ಕತರ್: ಗುಡುಗು ಮಿಂಚು ಸಹಿತ ಭಾರೀ ಮಳೆ

ದೋಹ, ನ. 27: ಕತರ್‌ನಲ್ಲಿ ಶನಿವಾರ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದೆ ಎಂದು ವರದಿಯಾಗಿದೆ. ರಸ್ತೆಗಳು, ತಗ್ಗುಪ್ರದೇಶಗಳಲ್ಲಿನೀರು ತುಂಬಿಕೊಂಡು ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಮುಂಬರುವ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರುಹೇಳಿದ್ದಾರೆ.
ಕೆಲವು ಶಾಪಿಂಗ್ ಸೆಂಟರ್‌ಗಳೊಳಗೆ ಮಳೆನೀರು ನುಗ್ಗಿದ್ದು ಪಾರ್ಕ್‌ಗಳಲ್ಲಿ ನೀರು ತುಂಬಿಕೊಂಡಿದೆ. ಅಲ್ಲಲ್ಲಿ ಭಾರೀ ನೀರು ನಿಂತಿದ್ದು, ರಜಾ ದಿನವಾದ್ದರಿಂದ ವಾಹನಸಂಚಾರಕ್ಕೆ ದೊಡ್ಡ ಮಟ್ಟದ ತೊಡಕಾಗಿಲ್ಲ. ದೋಹದ ಸಮೀಪದ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ ಎಂದು ಹವಾಮಾನ ನಿರೀಕ್ಷಣಾ ಕೇಂದ್ರ ಟ್ವೀಟ್ ಮಾಡಿದೆ. ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಭಾರೀ ಗಾಳಿಯಿಂದಾಗಿ ಸಮುದ್ರದ ತೆರೆಗಳು ಹತ್ತು ಅಡಿ ಎತ್ತರಕ್ಕೆ ಬಡಿದಿವೆ. ಮಳೆಯ ಸಮಯದಲ್ಲಿ ವಾಹನ ಚಲಾಯಿಸುವವರು ಎಚ್ಚರಿಕೆ ವಹಿಸಬೇಕೆಂದು ಗೃಹಸಚಿವಾಲಯ ಮುನ್ನೆಚ್ಚರಿಕೆ ನೀಡಿದೆ. ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಬಾರದು. ಓವರ್ ಟೇಕ್ ಮಾಡುವಾಗ ಹೆಚ್ಚಿನ ಅಂತರ ಇರಬೇಕು ಇತ್ಯಾದಿ ಮಾರ್ಗದರ್ಶನವನ್ನು ಗೃಹಸಚಿವಾಲಯ ವಾಹನ ಚಾಲಕರಿಗೆ ಸೂಚಿಸಿದೆ ಎಂದು ವರದಿ ತಿಳಿಸಿದೆ.





