ನನ್ನ ಗೆಲುವನ್ನು ಪ್ರಶ್ನಿಸದಿರಿ: ಟ್ರಂಪ್
ವಾಶಿಂಗ್ಟನ್,ನ.27: ವಿಸ್ಕನ್ಸಿನ್ ರಾಜ್ಯದಲ್ಲಿ ಮತಗಳ ಮರುಎಣಿಕೆಯ ನಿರ್ಧಾರವನ್ನು ವಿರೋಧಿಸಿದ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ತನಗೆ ಲಭಿಸಿರುವ ಜಯವನ್ನು ಗೌರವಿಸಬೇಕೇ ಹೊರತು ಅದನ್ನು ಪ್ರಶ್ನಿಸಕೂಡದು ಇಲ್ಲವೇ ನಿಂದಿಸಬಾರದು ಎಂದು ಹೇಳಿದ್ದಾರೆ.
ವಿಸ್ಕನ್ಸಿನ್ ರಾಜ್ಯದಲ್ಲಿ ಮರುಮತ ಎಣಿಕೆ ನಡೆಯಬೇಕೆಂದು ಕೋರಿ ಗ್ರೀನ್ ಪಕ್ಷದ ಅಭ್ಯರ್ಥಿ ಜಿಲ್ ಸ್ಟೇನ್ ಮನವಿ ಮಾಡಿದ್ದರು.
Next Story