ನೋಟು ಅಮಾನ್ಯಗೊಳಿಸಿದ ಬಳಿಕ ಅಂಚೆ ಕೇರಿಗಳಲ್ಲಿ 32,631 ಕೋಟಿ ರೂ. ಠೇವಣಿ
ಹೊಸದಿಲ್ಲಿ, ನ.27: ಅಧಿಕ ುುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ದೇಶದಾದ್ಯಂತ ಸುಮಾರು 1.55 ಲಕ್ಷ ಅಂಚೆ ಕಚೇರಿಗಳಲ್ಲಿ ಒಟ್ಟು 32,631 ಕೋಟಿ ರೂ.ಗಳನ್ನು ಠೇವಣಿ ಇರಿಸಲಾಗಿದೆ.
ನ.10ರಿಂದ ನ.24ರವರೆಗಿನ ಅವಧಿಯಲ್ಲಿ 3,680 ಕೋಟಿ ರೂ.ಗಳಷ್ಟು ಮೊತ್ತದ ಹಳೆಯ ಕರೆನ್ಸಿ ನೋಟುಗಳನ್ನು ಬದಲಾಯಿಸಿ ಕೊಡಲಾಗಿದೆ ಎಂದು ಅಂಚೆ ಇಲಾಖೆಯ ಕಾರ್ಯದರ್ಶಿ ಬಿ.ವಿ.ಸುಧಾಕರ್ ತಿಳಿಸಿದ್ದಾರೆ. ನ.10ರಿಂದ ನ.24ರವರೆಗಿನ ಅವಧಿಯಲ್ಲಿ ಸುಮಾರು 3,680 ಕೋಟಿ ಮೊತ್ತದ 578 ಲಕ್ಷ ನೋಟುಗಳನ್ನು ಬದಲಾಯಿಸಿ ಕೊಡಲಾಗಿದೆ. ಠೇವಣಿಯಿಡಲಾದ 500 ಮತ್ತು 1000 ರೂ. ನೋಟುಗಳ ಸಂಖ್ಯೆ 43.48 ಕೋಟಿ ಮತ್ತು ಇದರ ಮೊತ್ತ 32,631 ಕೋಟಿ ರೂ. ಎಂದವರು ವಿವರಿಸಿದ್ದಾರೆ.
Next Story





