ಟ್ರಂಪ್ ಆಯ್ಕೆ: ನಿರಾಸೆಯ ಕಾರ್ಮೋಡದ ನಡುವೆಯೂ ನಿರೀಕ್ಷೆಯ ಬೆಳ್ಳಿರೇಖೆ

ಕ್ಲಿಂಟನ್ ಅವರ ಚುನಾವಣಾ ಸೋಲನ್ನು ಸ್ಪಷ್ಟವಾಗಿ ವಿಶ್ಲೇಷಿಸುವುದಾದರೆ, ಹೊಸ ಡೆಮಾಕ್ರಟಿಕ್ ಮುಖಂಡರು ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ತಮ್ಮ ಕೆಲಸ ಉಳಿಸಿಕೊಳ್ಳುವ ಸಲುವಾಗಿ ಜನಾಂಗೀಯ, ಲೈಂಗಿಕ ಆರೋಪ ಮಾಡುತ್ತಿದ್ದಾರೆ. ಹಾಗೂ ಎಫ್‌ಬಿಐ ನಿರ್ದೇಶಕ ಕೊಮೆ ಅವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇದು ಈ ಚುನಾವಣೆಯ ವಿಚಾರದಲ್ಲಿ ತೆಗೆದುಕೊಳ್ಳುವ ಅತ್ಯಂತ ಅಪಾಯಕಾರಿ ನಿರ್ಣಯ.
ಹಿಲರಿ ಕ್ಲಿಂಟನ್ ನಮ್ಮ ಸ್ವಾತಂತ್ರ್ಯವನ್ನು ಮರಳಿಸಿದ್ದಾರೆ. ಅಂಥ ಆಘಾತಕಾರಿ ಸೋಲು ಮಾತ್ರ ನಮ್ಮನ್ನು ಬಂಧಿಸಿದ ಹೊಸ ಡೆಮಾಕ್ರಟಿಕ್ ಗಣ್ಯರ ಸಂಕೋಲೆಯನ್ನು ಕಡಿಯಲು ಸಾಧ್ಯ. ವಾಸ್ತವವಾಗಿ ಆ ಪಕ್ಷ ಕಾರ್ಮಿಕರನ್ನು ಪ್ರತಿನಿಧಿಸುವಂಥದ್ದು. ಆದರೆ ಅದು ಏನಾಗಿರಬೇಕಿತ್ತೋ, ದಶಕಗಳ ಕಾಲದಿಂದ ಆ ಗುರಿಯಿಂದ ವಿಮುಖವಾದದ್ದು ಈ ಸೋಲಿಗೆ ಕಾರಣ.
ಮೂರು ದಶಕಗಳ ಕಾಲ ಅವರು ನಮ್ಮನ್ನು ರಿಪಬ್ಲಿಕನ್ ಅಧ್ಯಕ್ಷ ಎಂಬ ಭೂತದ ಭೀತಿ ಹುಟ್ಟಿಸಿಯೇ ನಮ್ಮನ್ನು ಚುನಾವಣೆ ದಿನ ಮನೆಯಿಂದ ಹೊರಬರದಂತೆ ಮಾಡಿದರು. ಚುನಾವಣೆ ದಿನ ಮತ್ತೆ ಬಂದು ಮುಗಿದಿದೆ. ಹಲವು ಮಂದಿ ಮತ್ತೆ ಮನೆಯಲ್ಲೇ ಉಳಿದರು. ವಿಧೇಯರಾಗಿ ಜನರ ತೀರ್ಪಿಗೆ ತಲೆಬಾಗುವ ಬದಲು ಮತ್ತು ತಮ್ಮ ಸೋಲಿನ ಹೊಣೆಯನ್ನು ಸ್ವೀಕರಿಸುವ ಬದಲು, ಅವರು ಗ್ರಾಮೀಣ ಅಮೆರಿಕನ್ನರ ಜನಾಂಗೀಯವಾದಿ ಗುಂಪಿನ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ. ಎಲ್ಲಿ ಪಕ್ಷ ವಿಫಲವಾಯಿತು ಎನ್ನುವ ಪ್ರಶ್ನೆಯಿಂದ ತಪ್ಪಿಸಿಕೊಳ್ಳಲು ಈ ಸಾಹಸ.
ಬಂಡವಾಳಶಾಹಿ ಪ್ರಜಾಪ್ರಭುತ್ವದಲ್ಲಿ, ಈ ಎಡಪಕ್ಷ ಅಸ್ತಿತ್ವ ಉಳಿಸಿಕೊಳ್ಳಲು ಒಂದು ಸಕಾರಣ ಬೇಕಿತ್ತು; ಅದೆಂದರೆ ಶ್ರಮಿಕ ವರ್ಗದ ಪರವಾಗಿ ಮಾತನಾಡುವುದು. ಬಂಡವಾಳಶಾಹಿ ಪ್ರಜಾಪ್ರಭುತ್ವ ವ್ಯವಸ್ಥೆಗಳು ಪ್ರಮುಖವಾಗಿ ಎರಡು ಪಕ್ಷಗಳತ್ತ ಮುಖಮಾಡಿವೆ. ಒಂದು ಉದ್ಯಮಿಗಳು, ವ್ಯಾಪಾರ- ವಹಿವಾಟು ನಡೆಸುವವರು, ವೃತ್ತಿಪರರು ಹೀಗೆ ಬಂಡವಾಳಶಾಹಿಗಳ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದು. ಅವರ ಪ್ರಯತ್ನಗಳು ಹಾಗೂ ಅವರು ತೆಗೆದುಕೊಂಡ ಅಪಾಯ ಸಾಧ್ಯತೆಗಳಿಗೆ ಸೂಕ್ತ ಪ್ರತಿಫಲ ಸಿಗುವಂತೆ ನೋಡಿಕೊಳ್ಳುವುದು. ಇನ್ನೊಂದು ಪಕ್ಷ ಕಾರ್ಮಿಕರು, ಕಾರ್ಮಿಕ ಸಂಘಟನೆಗಳು ಹಾಗೂ ಮಹಿಳೆಯರು ಮತ್ತು ದುರ್ಬಲ ವರ್ಗ ಸೇರಿದಂತೆ ಶ್ರಮಿಕ ವರ್ಗದ ಇತರ ಗುಂಪುಗಳನ್ನು ಪ್ರತಿನಿಧಿಸುವಂಥದ್ದು.ಸೂಕ್ಷ್ಮ ಸಮತೋಲನ 1990ರ ದಶಕದಲ್ಲಿ ಹಳಿ ತಪ್ಪಿತು. ರೇಗನ್ ಹಾಗೂ ಥ್ಯಾಚರ್ ಅವರು ಕಾರ್ಮಿಕ ಸಂಘಟನೆಗಳನ್ನು ನಾಶಪಡಿಸಿ, ಕಾರ್ಪೊರೇಟ್ ಕಂಪೆನಿಗಳ ಜತೆ ಕೈಜೋಡಿಸಿದರು ಎಂದು ಹಲವರು ದೂಷಿಸಿದರು. ನಾನು ಹಾಗೆ ಮಾಡಲಿಲ್ಲ. 1990ರ ದಶಕದಲ್ಲಿ, ಹೊಸ ಎಡರಂಗ ಇಂಗ್ಲಿಷ್ ಭಾಷೆಯನ್ನಾಡುವ ಭಾಗದಲ್ಲಿ ಉದಯವಾಯಿತು. ಬಿಲ್ ಕ್ಲಿಂಟನ್ ಅವರ ಹೊಸ ಡೆಮಾಕ್ರಟಿಕ್ ಪಕ್ಷ ಹಾಗೂ ಟೋನಿ ಬ್ಲೇರ್ ಅವರ ಹೊಸ ಲೇಬರ್ ಪಕ್ಷ. ಸಮತೋಲನ ಕಾಪಾಡುವ ಪ್ರಯತ್ನದ ಬದಲಾಗಿ, ಕ್ಲಿಂಟನ್ ಹಾಗೂ ಬ್ಲೇರ್ ಇಬ್ಬರೂ, ಹೊಸ ಮಧ್ಯಮಾರ್ಗಿ ನೀತಿಯನ್ನು ಜಾರಿಗೆ ತಂದರು. ಕಾರ್ಮಿಕರು ಹಾಗೂ ಬಡವರ ಸಂರಕ್ಷಣೆಗೆ ಇದ್ದ ಕಾನೂನುಗಳನ್ನು ಶಿಥಿಲಗೊಳಿಸಿದರು.
ಇದಕ್ಕೆ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಬಿಲ್ ಕ್ಲಿಂಟನ್ ಅವರು, ಗ್ಲಾಸ್- ಸ್ಟೀಗಲ್ ಕಾಯ್ದೆಯ ಮರಣ ಶಾಸನಕ್ಕೆ ಸಹಿ ಮಾಡಿದರು. ಈ ಮೂಲಕ ಬ್ಯಾಂಕಿಂಗ್ ಉದ್ಯಮ ನಮ್ಮ ಸಂಪತ್ತಿನ ಜತೆ ಜೂಜಾಡುವುದನ್ನು ನಿರ್ಬಂಧಿಸಲು ಇದ್ದ ಅಂತಿಮ ತಡೆಯನ್ನು ನಿವಾರಿಸಿದರು. ಇದು 2008ರ ಆರ್ಥಿಕ ಹಿಂಜರಿತಕ್ಕೆ ಕಾರಣವಾಯಿತು. ಇದೇ ರೀತಿ ಬಿಲ್ ಕ್ಲಿಂಟನ್ ಮುಕ್ತವ್ಯಾಪಾರದ ಭರವಸೆಯನ್ನೂ ಭರ್ಜರಿಯಾಗಿ ಮಾರಾಟ ಮಾಡಿದರು. ಇದರ ಅನ್ವಯ ಅಮೆರಿಕದಲ್ಲಿ ಉತ್ಪಾದನೆಯಾಗುವ ಸರಕುಗಳು ವಿಶ್ವ ಮಾರುಕಟ್ಟೆಯಲ್ಲಿ ಪ್ರವಾಹದೋಪಾದಿಯಲ್ಲಿ ಹರಿಯಬೇಕಿತ್ತು. ಬದಲಾಗಿ ಉತ್ತಮ ವೇತನ ಇದ್ದ ಉದ್ಯೋಗಗಳು ಹೊರಗುತ್ತಿಗೆಯ ಭರಾಟೆ ಯಲ್ಲಿ ಕೊಚ್ಚಿಕೊಂಡು ಹೋದವು. ಹೂಡಿಕೆ ಬ್ಯಾಂಕರ್‌ಗಳು ನಮ್ಮ ಆರ್ಥಿಕತೆಯಲ್ಲಿ ಜೂಜು ಆರಂಭಿಸಿದ ಬಳಿಕ, ಹೊಸ ಡೆಮಾಕ್ರಟಿಕ್ ಮುಖಂಡರು, ಜನರಿಂದ ವ್ಯಕ್ತವಾದ ಆಕ್ಷೇಪಗಳ ವಿರುದ್ಧ ಅವರಿಗೆ ಸುರಕ್ಷೆ ಒದಗಿಸಿದರು.
ಒಬಾಮಾ ಯುಗದಲ್ಲಿ ಕೂಡಾ ಹೊಸ ಡೆಮಾಕ್ರಟಿಕ್ ಮುಖಂಡರು, ಕಾರ್ಪೊರೇಟ್ ವಲಯಕ್ಕೆ ಅಪಾಯವಾಗದಂತೆ ಸಾಮಾಜಿಕ ಕಾರಣಗಳ ಮೇಲೆ ಗಮನ ಹರಿಸಿ, ತಮ್ಮ ಅಸ್ತಿತ್ವವನ್ನು ಸಮರ್ಥಿಸಿಕೊಂಡರು. ಕ್ರಿಸ್ಟಲ್ ಬಾಲ್ ಅವರು ಇದನ್ನು ಅತ್ಯಂತ ಮನೋಜ್ಞವಾಗಿ ಹೇಳಿದ್ದಾರೆ: ಸಂಕಷ್ಟದಲ್ಲಿದ್ದ ಜನತೆ ತಮ್ಮ ಮಕ್ಕಳು ಔಷಧಿಯ ಓವರ್‌ಡೋಸ್‌ನಿಂದ ಸಾಯುತ್ತಿರುವುದನ್ನು ನೋಡುತ್ತಿದ್ದರೆ, ಅವರ ವಿಶೇಷ ಸವಲತ್ತುಗಳ ಬಗ್ಗೆ ನಾವು ಉಪನ್ಯಾಸ ನೀಡುತ್ತಿದ್ದೆವು. ಇದರ ಜತೆಗೆ ಅವರ ನಿರೀಕ್ಷಿತ ಜೀವಿತಾವಧಿ ಕುಸಿತ ಕಂಡಿತು. ಸ್ವಯಂಕೃತ ನಡವಳಿಕೆಗಳು ಆರ್ಥಿಕ ಸಂಕಷ್ಟವನ್ನೂ ಆಹ್ವಾನಿಸಿದವು.
ಇದು ಖಂಡಿತವಾಗಿಯೂ ರಾಚನಿಕ ಜನಾಂಗೀಯ ನೀತಿಯ ವಾಸ್ತವತೆಯನ್ನು ಅಲ್ಲಗಳೆಯುವ ಸಲುವಾಗಿ ಅಲ್ಲ. ಇಲ್ಲವೇ ಮುಸ್ಲಿಮರ ಬಗ್ಗೆ ತೋರಿದ ಅಸಹಿಷ್ಣುತೆ ಅಥವಾ ಟ್ರಂಪ್ ಪ್ರಚಾರದ ಸಾಮರಸ್ಯಕ್ಕೆ ಧಕ್ಕೆ ತರುವ ಅರ್ಥವನ್ನು ಸಮರ್ಥಿಸುವ ಸಲುವಾಗಿ ಅಲ್ಲ. ನನ್ನ ಹೆಸರು ಮುಸ್ಲಿಂ ಹೆಸರಿನಂತೆ ಇದ್ದು, ಬಣ್ಣವೂ ಹಾಗೆಯೇ ಇದೆ. ನನಗೆ ವಾಸ್ತವದ ಅರಿವು ಇದೆ. ನನಗೂ ಎಲ್ಲರಂತೆ ಭಯವಾಗಿದೆ. ಆದರೆ ನಮ್ಮ ಸಾಂಸ್ಕೃತಿಕ ಮುಖಂಡರು, ಬಹುತೇಕ ಹೊಸ ಡೆಮಾಕ್ರಟಿಕ್ ಮುಖಂಡರತ್ತ ವಾಲಿದ್ದಾರೆ. ಟ್ರಂಪ್ ಅವರ ಯಶಸ್ಸಿನ ಹಿನ್ನೆಲೆಯಲ್ಲಿ ತಮ್ಮ ಜವಾಬ್ದಾರಿಯನ್ನು ಕುಗ್ಗಿಸಿಕೊಳ್ಳಲು ಸಿದ್ಧರಿಲ್ಲ.
ಆದ್ದರಿಂದ ಕ್ಲಿಂಟನ್ ಅವರ ಚುನಾವಣಾ ಸೋಲನ್ನು ಸ್ಪಷ್ಟವಾಗಿ ವಿಶ್ಲೇಷಿಸುವುದಾದರೆ, ಹೊಸ ಡೆಮಾಕ್ರಟಿಕ್ ಮುಖಂಡರು ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ತಮ್ಮ ಕೆಲಸ ಉಳಿಸಿಕೊಳ್ಳುವ ಸಲುವಾಗಿ ಜನಾಂಗೀಯ, ಲೈಂಗಿಕ ಆರೋಪ ಮಾಡುತ್ತಿದ್ದಾರೆ. ಹಾಗೂ ಎಫ್‌ಬಿಐ ನಿರ್ದೇಶಕ ಕೊಮೆ ಅವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇದು ಈ ಚುನಾವಣೆಯ ವಿಚಾರದಲ್ಲಿ ತೆಗೆದುಕೊಳ್ಳುವ ಅತ್ಯಂತ ಅಪಾಯಕಾರಿ ನಿರ್ಣಯ.
ಆದ್ದರಿಂದ ನಿರೀಕ್ಷೆಯ ಬೆಳ್ಳಿರೇಖೆಗೆ ಇಲ್ಲಿ ಅವಕಾಶವಿದೆ. ಇದು ಅತ್ಯಂತ ಕ್ರಾಂತಿಕಾರಿ ಕ್ಷಣ. ಅವರು ಮತದಾರರ ಮೇಲೆ ಗೂಬೆ ಕೂರಿಸಲು ನಾವು ಅವಕಾಶ ನೀಡಬಾರದು. ಇದು ಅವರ ವೈಫಲ್ಯ. ದಶಕದಿಂದ ಈ ಪ್ರಕ್ರಿಯೆ ನಡೆದಿದೆ. ಅವರ ವೈಫಲ್ಯ ನಾವು ಮತ್ತೆ ಗುಂಪುಗಳನ್ನು ರಚಿಸಿಕೊಳ್ಳಲು ದೊರೆತ ಅವಕಾಶ. ಡೆಮಾಕ್ರಟಿಕ್ ಪಕ್ಷವನ್ನು ಸ್ವಚ್ಛಗೊಳಿಸುವ ಸಲುವಾಗಿ, ಹಳೆಯ ಮುಖಂಡರು ನಿವೃತ್ತರಾಗುವಂತೆ ಮಾಡಲು ಮತ್ತು ಸಮಸ್ತ ಶ್ರಮಿಕ ವರ್ಗದ ಕಡೆ ಗಮನ ಹರಿಸುವ ಹೊಸ ಪೀಳಿಗೆಗೆ ಶಕ್ತಿ ತುಂಬಲು ಇದು ಸಕಾಲ.
theguardian







