Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕೇವಲ 92 ಪೈಸೆಗೆ ರೈಲು ಪ್ರಯಾಣ ವಿಮೆ

ಕೇವಲ 92 ಪೈಸೆಗೆ ರೈಲು ಪ್ರಯಾಣ ವಿಮೆ

ಅಭಿಷೇಕ್ ಡೆಅಭಿಷೇಕ್ ಡೆ28 Nov 2016 12:15 AM IST
share
ಕೇವಲ 92 ಪೈಸೆಗೆ ರೈಲು ಪ್ರಯಾಣ ವಿಮೆ

ಕಾನ್ಪುರದಲ್ಲಿ ರವಿವಾರ ಇಂದೋರ್-ಪಾಟ್ನಾ ರೈಲು ಹಳಿತಪ್ಪಿ ಕನಿಷ್ಠ 148 ಮಂದಿ ಮೃತಪಟ್ಟು, 200ಕ್ಕೂ ಅಧಿಕ ಮಂದಿ ಗಾಯಗೊಂಡ ದುರಂತ ಘಟನೆಯು ಈ ವಿಮಾ ಯೋಜನೆಯನ್ನು ಅಗ್ನಿಪರೀಕ್ಷೆಗೊಡ್ಡಿದೆ. ಉತ್ತರಪ್ರದೇಶದಲ್ಲಿ ಅಪಘಾತ ಸಂಭವಿಸಿದ ಒಂದು ದಿನದ ಬಳಿಕ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯು ಪ್ರಕಟಿಸಿದ ಲೇಖನವೊಂದು, ರೈಲಿನಲ್ಲಿದ್ದ 695 ಪ್ರಯಾಣಿಕರ ಪೈಕಿ 128 ಮಂದಿ ಈ ಪ್ರಯಾಣ ವಿಮೆಯನ್ನು ಆಯ್ದುಕೊಂಡಿದ್ದರೆಂದು ತಿಳಿಸಿತ್ತು.

ಆದರೂ ಶೇ.65 ಪ್ರಯಾಣಿಕರು ರೈಲ್ವೆ ವಿಮೆಯಿಂದ ವಿಮುಖ 

ಸೆಪ್ಟಂಬರ್ ಒಂದರಂದು, ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮವು (ಐಆರ್‌ಸಿಟಿಸಿ) ಪ್ರಯಾಣಿಕರ ರೈಲ್ವೆ ಇ-ಟಿಕೆಟ್‌ಗಳಲ್ಲಿ ಐಚ್ಛಿಕ ಪ್ರವಾಸಿ ವಿಮಾ ಯೋಜನೆಯನ್ನು ಜಾರಿಗೆತಂದಿದೆ. ತನ್ನ ಅಂತರ್ಜಾಲ ತಾಣದ ಮೂಲಕ ಇ-ಟಿಕೆಟ್ ಕಾದಿರಿಸುವ ಪ್ರತಿ ಪ್ರಯಾಣಿಕನಿಗೆ ಕೇವಲ 92 ಪೈಸೆ ದರದಲ್ಲಿ, 10 ಲಕ್ಷ ರೂ. ವಿಮೆಯ ಭರವಸೆಯನ್ನು ಅದು ನೀಡಿದೆ. ಆದರೆ ಈ ಬಗ್ಗೆ ಘೋಷಣೆಯಾಗಿ ಮೂರು ತಿಂಗಳುಗಳು ಕಳೆದರೂ ಈ ಯೋಜನೆಯು, ಪ್ರಯಾಣಿಕರ ಮೇಲೆ ಯಾವುದೇ ಪರಿಣಾಮವನ್ನು ಬೀರಿಲ್ಲ.

ರೈಲ್ವೆ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮದ ಹಿರಿಯ ಅಧಿಕಾರಿಗಳು ಹಂಚಿಕೊಂಡ ಅಂಕಿಅಂಶಗಳ ಪ್ರಕಾರ ಇ-ಟಿಕೆಟ್‌ಗಳನ್ನು ಕಾದಿರಿಸುವ ಕೇವಲ ಶೇ.35ರಷ್ಟು ಪ್ರಯಾಣಿಕರು ಮಾತ್ರವೇ ಈ ಯೋಜನೆಯನ್ನು ಆಯ್ಕೆ ಮಾಡಿ ಕೊಳ್ಳುತ್ತಾರೆ. ಅತ್ಯಂತ ಕಡಿಮೆ ಪ್ರೀಮಿಯಂನ ಹೊರತಾಗಿಯೂ ರೈಲ್ವೆ ಅವಘಡಗಳಿಂದಾಗಿ ಸಂಭವಿಸುವ ಮೃತ್ಯು ಅಥವಾ ಶಾಶ್ವತ ಅಂಗವೈಕಲ್ಯದ ಸಂದರ್ಭಗಳಲ್ಲಿ 10 ಲಕ್ಷ ರೂ., ಶಾಶ್ವತವಾದ ಭಾಗಶಃ ಅಂಗವೈಕಲ್ಯಕ್ಕಾಗಿ 7.5 ಲಕ್ಷ ರೂ., ಗಾಯಗಳಿಗಾಗಿನ ಆಸ್ಪತ್ರೆ ವೆಚ್ಚಗಳಿಗಾಗಿ 2 ಲಕ್ಷ ರೂ. ಹಾಗೂ ಮೃತರ ಪಾರ್ಥಿವ ಶರೀರಗಳ ಸಾಗಣಿಕೆಗೆ 10 ಸಾವಿರ ರೂ.ವರೆಗೆ ಪರಿಹಾರ ನೀಡಲಾಗುತ್ತದೆ.
ಕಾನ್ಪುರದಲ್ಲಿ ರವಿವಾರ ಇಂದೋರ್-ಪಾಟ್ನಾ ರೈಲು ಹಳಿತಪ್ಪಿ ಕನಿಷ್ಠ 148 ಮಂದಿ ಮೃತಪಟ್ಟು, 200ಕ್ಕೂ ಅಧಿಕ ಮಂದಿ ಗಾಯಗೊಂಡ ದುರಂತ ಘಟನೆಯು ಈ ವಿಮಾ ಯೋಜನೆಯನ್ನು ಅಗ್ನಿಪರೀಕ್ಷೆಗೊಡ್ಡಿದೆ. ಉತ್ತರಪ್ರದೇಶದಲ್ಲಿ ಅಪಘಾತ ಸಂಭವಿಸಿದ ಒಂದು ದಿನದ ಬಳಿಕ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯು ಪ್ರಕಟಿಸಿದ ಲೇಖನವೊಂದು, ರೈಲಿನಲ್ಲಿದ್ದ 695 ಪ್ರಯಾಣಿಕರ ಪೈಕಿ 128 ಮಂದಿ ಈ ಪ್ರಯಾಣ ವಿಮೆಯನ್ನು ಆಯ್ದುಕೊಂಡಿದ್ದರೆಂದು ತಿಳಿಸಿತ್ತು.
ಈ ವಿಮಾ ಯೋಜನೆಯನ್ನು ಪ್ರಯಾಣಿಕನು ತಾನಾಗಿಯೇ ತಿರಸ್ಕರಿಸುವುದನ್ನು ಹೊರತುಪಡಿಸಿ, ಕಾದಿರಿಸಲಾದ ಪ್ರತಿಯೊಂದು ಇ-ಟಿಕೆಟ್‌ಗೂ, ಅದು ಸಹಜವಾದ ಆಯ್ಕೆಯಾಗುವಂತೆ ಮಾಡುವ ಪ್ರಸ್ತಾಪವನ್ನು ಭಾರತೀಯ ರೈಲ್ವೆ ಕೇಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮವು ಪರಿಶೀಲಿಸುತ್ತಿದೆ.

ಐಚ್ಛಿಕ ವಿಮಾ ಯೋಜನೆ
  ‘‘ಈ ಯೋಜನೆಯು ಸೆಪ್ಟಂಬರ್ 1ರಂದು ಆರಂಭಗೊಂಡಿತ್ತು ಹಾಗೂ ಸರಾಸರಿ 3.5 ಲಕ್ಷ ಪ್ರಯಾಣಿಕರು ಈ ಯೋಜನೆಯಡಿ ಪ್ರತಿ ದಿನವೂ ವಿಮೆಯನ್ನು ಮಾಡಿಕೊಳ್ಳುತ್ತಿದ್ದಾರೆ’’ ಎಂದು ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮದ ವಕ್ತಾರ ಸಂದೀಪ್ ದತ್ತಾ ತಿಳಿಸಿದ್ದಾರೆ. ‘‘ಬುಕಿಂಗ್‌ನ ವಿಷಯಕ್ಕೆ ಬರುವಾಗ, ಪ್ರತಿ ದಿನ 5.7 ಲಕ್ಷ ಟಿಕೆಟ್‌ಗಳು ಇಂಟರ್‌ನೆಟ್ ಮೂಲಕ ಕಾದಿರಿಸಲ್ಪಡುತ್ತವೆ’’ ಎಂದವರು ಹೇಳುತ್ತಾರೆ.
 ಗುರುತು ಬಹಿರಂಗಪಡಿಸಲಿಚ್ಛಿಸದ ರೈಲ್ವೆ ಇಲಾಖೆಯ ಇನ್ನೋರ್ವ ಹಿರಿಯ ಅಧಿಕಾರಿಯ ಪ್ರಕಾರ, ಪ್ರತಿಯೊಂದು ಟಿಕೆಟ್‌ನಲ್ಲಿ ಒಂದಕ್ಕಿಂತ ಹೆಚ್ಚು ಪ್ರಯಾಣಿಕರು ಇರಬಹುದಾದ್ದರಿಂದ 5.7 ಲಕ್ಷ ಇ-ಟಿಕೆಟ್‌ಗಳಲ್ಲಿ ಸುಮಾರು 10 ಲಕ್ಷ ಮಂದಿ ಪ್ರಯಾಣಿಸುತ್ತಾರೆಂದು ಹೇಳಿದೆ.
ಈ ದತ್ತಾಂಶಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಐಆರ್‌ಸಿಟಿಸಿ ವೆಬ್‌ಸೈಟ್‌ಗಳ ಮೂಲಕ ಜಾರಿಗೊಳಿಸಲಾದ ಇ-ಟಿಕೆಟ್‌ಗಳಲ್ಲಿ ಪ್ರಯಾಣಿಸುವ 10 ಲಕ್ಷ ಪ್ರಯಾಣಿಕರ ಪೈಕಿ 3.5 ಲಕ್ಷ ಮಂದಿ ಪ್ರಯಾಣಿಕರು, ಅಂದರೆ ದಿನಂಪ್ರತಿ ಸರಾಸರಿ ಶೇ.35 ಮಂದಿಯಂತೆ ಈ ವಿಮಾ ಯೋಜನೆಯ ವ್ಯಾಪ್ತಿಗೊಳಪಡುತ್ತಾರೆ.
 ಕಳೆದ ಕೆಲವು ವರ್ಷಗಳಿಂದ ಇ-ಟಿಕೆಟ್‌ಗಳ ಮಾರಾಟದಲ್ಲಿ ನಿರಂತರ ಬೆಳವಣಿಗೆಯಾಗಿದೆ. 2014-15ರಲ್ಲಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮವು ಸುಮಾರು 9.4 ಲಕ್ಷ ಪ್ರಯಾಣಿಕರನ್ನು ಒಳಗೊಂಡಂತೆ 4.6 ಲಕ್ಷ ಇ-ಟಿಕೆಟ್‌ಗಳನ್ನು ಮಾರಾಟಮಾಡಿದೆ.
  ಈ ಐಚ್ಛಿಕ ವಿಮಾ ಯೋಜನೆಯನ್ನು ಐಆರ್‌ಸಿಟಿಸಿಯು ಮೂರು ಕಂಪೆನಿಗಳಾದ ಐಸಿಐಸಿಐ ಲೊಂಬಾರ್ಡ್, ರಾಯಲ್ ಸುಂದರಂ ಹಾಗೂ ಶ್ರೀರಾಮ್ ಜನರಲ್ ಇವರ ಸಹಯೋಗದೊಂದಿಗೆ ರೂಪಿ ಸಿತ್ತು. ಈ ಯೋಜನೆಯು ಎಲ್ಲಾ ದರ್ಜೆಗಳ ದೃಢೀಕೃತ ಟಿಕೆಟ್‌ಗಳಿಗೆ ಮಾತ್ರ ಲಭ್ಯವಿರುತ್ತದೆ. ಈ ವಿಮಾ ಯೋಜನೆಯು ಅಪಘಾತಗಳ ಪ್ರಕರಣಗಳು ಮಾತ್ರವಲ್ಲ 1989ರ ರೈಲ್ವೆ ಕಾಯ್ದೆಯ ಸೆಕ್ಷನ್‌ಗಳಾದ 123, 124 ಹಾಗೂ 124 ಎ ನಡಿಯಲ್ಲಿ ವಿವರಿಸಲಾದ ಭಯೋತ್ಪಾದಕ ದಾಳಿಗಳು, ಗಲಭೆಗಳು, ದರೋಡೆ, ಶೂಟ್‌ಔಟ್‌ಗಳು, ದಂಗೆ ಹಾಗೂ ರೈಲುಗಳಿಂದ ಆಕಸ್ಮಿಕವಾಗಿ ಬೀಳುವುದು ಇತ್ಯಾದಿ ಪ್ರಕರಣಗಳಿಗೂ ಅನ್ವಯಿಸುತ್ತದೆ.
ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾದ ದಾಖಲೆಯ ಪ್ರಕಾರ ಘಟನೆ ನಡೆದ ನಾಲ್ಕು ತಿಂಗಳುಗಳೊಳಗೆ ಈ ವಿಮಾ ದಾವೆ (್ಚ್ಝಜಿಞ )ಯನ್ನು ಸಲ್ಲಿಸಬೇಕಾಗುತ್ತದೆ ಹಾಗೂ ಅಗತ್ಯವಿರುವ ಕೊನೆಯ ದಾಖಲೆಯನ್ನು ಸ್ವೀಕರಿಸಿದ 15 ದಿನಗಳೊಳಗೆ ವಿಮಾ ಮೊತ್ತವನ್ನು ಪಾವತಿಸಬೇಕಾಗುತ್ತದೆ.
 ‘‘ಈ ಯೋಜನೆಯಡಿ ಪ್ರಯಾಣಿಕರು ಹಾಗೂ ವಿಮಾ ಸಂಸ್ಥೆಯ ನಡುವೆ ವಿಮಾ ಕರಾರಿನ ಬಾಧ್ಯತೆಗಳಿರುತ್ತವೆ’’ ಎಂದು ಐಆರ್‌ಸಿಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆಯಡಿಯಲ್ಲಿರುವ ವಿಮಾ ಕಂಪೆನಿಗಳ ಬಾಧ್ಯತೆಯನ್ನು ರೈಲ್ವೆ ಅವಘಡಗಳು ಹಾಗೂ ಅಹಿತಕರ ಘಟನೆಗಳು (ಪರಿಹಾರ) ತಿದ್ದುಪಡಿ ನಿಯಮಗಳು, 1997ರ ವ್ಯಾಪ್ತಿಯಡಿ ದೊರೆಯುವ ಪರಿಹಾರಗಳಿಂದ ಹೊರತುಪಡಿಸಲಾಗಿದೆ ಎಂದವರು ಹೇಳುತ್ತಾರೆ.
   ಈ ನಿಯಮಗಳನ್ವಯ ಸಾವಿನ ಪ್ರಕರಣಕ್ಕೆ 4 ಲಕ್ಷ ರೂ. ಪರಿಹಾರ ನೀಡಬೇಕಿದ್ದರೆ, ಗಾಯಗೊಂಡ ಪ್ರಕರಣಗಳಿಗೆ ಪರಿಹಾರವು 32 ಸಾವಿರ ರೂ.ಗಳಿಂದ 4 ಲಕ್ಷ ರೂ.ವರೆಗೆ ಭಿನ್ನವಾಗಿರುತ್ತದೆ.

ಜಾಗೃತಿಯ ಕೊರತೆ
 ಇಷ್ಟೊಂದು ನೇರ ಪ್ರಯೋಜನಗಳು ದೊರೆಯುವ ಹೊರತಾಗಿಯೂ, ಇ-ಟಿಕೆಟ್‌ಗಳನ್ನು ಕಾದಿರಿಸುವ ಶೇ.65ರಷ್ಟು ಮಂದಿ ಈ ವಿಮಾ ಯೋಜನೆಯನ್ನು ಯಾಕೆ ಆಯ್ದುಕೊಳ್ಳುತ್ತಿಲ್ಲ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ‘‘ಐಆರ್‌ಸಿಟಿಸಿಯ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಈ ವಿಮಾನ ಆಯ್ಕೆಯನ್ನು ಈವರೆಗೂ ಪರಿಚಯಿಸದಿರುವುದು ಇದಕ್ಕೊಂದು ಕಾರಣ’’ ಎಂದು ಅಧಿಕಾರಿ ಹೇಳುತ್ತಾರೆ.
ಈ ಯೋಜನೆಗೆ ದೊರೆತಿರುವ ನೀರಸ ಪ್ರತಿಕ್ರಿಯೆಗೆ ದಿಲ್ಲಿಯ ರೈಲ್ವೆ ಟಿಕೆಟ್ ಬುಕಿಂಗ್ ಏಜೆಂಟರುಗಳು ವಿಭಿನ್ನ ಕಾರಣಗಳನ್ನು ನೀಡುತ್ತಾರೆ.
ಈ ಬಗ್ಗೆ ಪ್ರಯಾಣಿಕರಲ್ಲಿ ವ್ಯಾಪಕವಾದ ಜಾಗೃತಿಯ ಕೊರತೆಯಿದೆಯೆಂದು ಹಳೆ ದಿಲ್ಲಿಯ ಚಾಂದಿನಿ ಚೌಕ್‌ನಲ್ಲಿ ಟ್ರಾವೆಲ್ ಏಜೆನ್ಸಿಯೊಂದರ ಮಾಲಕರಾದ ಗುಲಾಬ್ ಹೇಳುತ್ತಾರೆ.
ಏಜೆಂಟರುಗಳು ನಕಲಿ ವಿವರಗಳೊಂದಿಗೆ ಹಲವು ಬುಕಿಂಗ್ ಖಾತೆಗಳನ್ನು ನಿರ್ವಹಿಸುತ್ತಿರುವುದು ಇದಕ್ಕೆ ಕಾರಣವೆಂದು ಇನ್ನೋರ್ವ ಏಜೆಂಟ್ ಹೇಳುತ್ತಾರೆ. ‘‘ವಿಮೆಯ ಬಗ್ಗೆ ಏಜೆಂಟರುಗಳು ಹೊಂದಿರುವ ಅರಿವಿನ ಕೊರತೆಯ ಪ್ರಯೋಜನವನ್ನು ಅವರು ಪಡೆದುಕೊಳ್ಳುತ್ತಿದ್ದಾರೆ ಹಾಗೂ ಈ ಆಯ್ಕೆಯನ್ನು ಅವರು ಉದ್ದೇಶಪೂರ್ವಕವಾಗಿ ತಿರಸ್ಕರಿಸು ತ್ತಿದ್ದಾರೆ. ವಿಮಾ ನೀತಿಯ ಹೆಸರಿನಲ್ಲಿ ದೃಢೀಕರಣದ ಪ್ರಶ್ನೆ ಉದ್ಭವಿಸಿದಲ್ಲಿ ತಮ್ಮ ಖಾತೆಗಳು ಪರಿಶೀಲನೆಗೊಳಪಡುವುದೆಂದು ಭಾವಿಸಿ ಅವರು ಈ ವಿಮಾ ಅವಕಾಶವನ್ನು ತಿರಸ್ಕರಿಸುತ್ತಾರೆ’’ ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
     ಐಆರ್‌ಸಿಟಿಸಿಯೊಂದಿಗೆ ನೋಂದಣಿಗೊಂಡಿರುವ ರಿಟೇಲ್ ರೈಲ್ವೆ ಟಿಕೆಟ್ ಸೇವಾದಾರರು, ನಿಯಮಗಳ ಪ್ರಕಾರ ತಮ್ಮ ನೋಂದಣಿ ಫಾರಂನಲ್ಲಿ ನೈಜ ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಹಾಗೂ ಪಾನ್ ನಂಬರ್‌ಗಳನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ.

ಕೃಪೆ: scroll.in

share
ಅಭಿಷೇಕ್ ಡೆ
ಅಭಿಷೇಕ್ ಡೆ
Next Story
X