Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಆಕ್ರೋಶ ಪ್ರಾಮಾಣಿಕವಾಗಿರಲಿ

ಆಕ್ರೋಶ ಪ್ರಾಮಾಣಿಕವಾಗಿರಲಿ

ವಾರ್ತಾಭಾರತಿವಾರ್ತಾಭಾರತಿ28 Nov 2016 12:15 AM IST
share

ಮೋದಿಯ ನೋಟು ನಿಷೇಧವನ್ನು ವಿರೋಧಿಸಿ ವಿರೋಧ ಪಕ್ಷಗಳು ನವೆಂಬರ್ 28ನ್ನು ಆಕ್ರೋಶ ದಿವಸವನ್ನಾಗಿ ಘೋಷಿಸಿವೆೆ. ಸದ್ಯದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಮೋದಿ ವಿರುದ್ಧ ಟೀಕಾಸ್ತ್ರಗಳನ್ನು ಎಸೆಯುತ್ತಿವೆಯಾದರೂ, ಅದನ್ನು ಬಿಜೆಪಿ ತುಂಬಾ ಸುಲಭವಾಗಿ ಎದುರಿಸುತ್ತಿದೆ. ಯಾರೆಲ್ಲ ನೋಟು ನಿಷೇಧವನ್ನು ವಿರೋಧಿಸುತ್ತಿದ್ದಾರೆಯೋ ಅವರನ್ನೆಲ್ಲ ‘ಕಾಳ ದಂಧೆಕೋರರು’ ಎಂದು ಕರೆದು ಬಾಯಿ ಮುಚ್ಚಿಸಲು ಯತ್ನಿಸುತ್ತಿದೆ. ಇಷ್ಟಕ್ಕೂ ಕೆಲವು ಪಕ್ಷಗಳು ‘ಭಾರತ್ ಬಂದ್’ನ್ನು ಘೋಷಿಸಿವೆೆ. ಆದರೆ ನವೆಂಬರ್ 8ರಂದು ನರೇಂದ್ರ ಮೋದಿಯವರು ನೋಟು ನಿಷೇಧವನ್ನು ಘೋಷಿಸಿದ ಬಳಿಕ, ಅಘೋಷಿತ ಭಾರತ ಬಂದ್ ನಿರ್ಮಾಣವಾಗಿದೆ. 
ವ್ಯಾಪಾರ ವ್ಯವಹಾರ ಭಾಗಶಃ ಸ್ತಬ್ಧಗೊಂಡಿದೆ. ಸರಕು ಸಾಗಾಟಗಳಲ್ಲಿ ವ್ಯತ್ಯಯವಾಗಿದೆ. ಸಣ್ಣಪುಟ್ಟ ಉದ್ದಿಮೆದಾರರು ನೆಲಕಚ್ಚಿ ಕೂತಿದ್ದಾರೆ. ಜನರು ತಮ್ಮಲ್ಲಿ ಹಣವಿದ್ದರೂ ಅದನ್ನು ಉಪಯೋಗಿಸಲಾಗದಂತಹ ಸ್ಥಿತಿಯಲ್ಲಿದ್ದಾರೆ. ಕೂಲಿಕಾರ್ಮಿಕರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಹೋಗದೆ ಬ್ಯಾಂಕ್‌ನಲ್ಲಿ ಕ್ಯೂ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಮೋದಿಯೇ ಅಘೋಷಿತ ಭಾರತ ಬಂದನ್ನು ಘೋಷಿಸಿರುವಾಗ, ಪ್ರತಿಯಾಗಿ ವಿರೋಧ ಪಕ್ಷಗಳು ಭಾರತವನ್ನು ಬಂದ್ ಮಾಡುವುದಕ್ಕೆ ಏನು ಉಳಿದಿದೆ ಎನ್ನುವುದು ಮುಖ್ಯ ಪ್ರಶ್ನೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವೂ ಸೇರಿದಂತೆ ಮುಖ್ಯ ರಾಜಕೀಯ ಪಕ್ಷಗಳು ಭಾರತ್ ಬಂದ್ ಇಲ್ಲ, ಬದಲಿಗೆ ಆಕ್ರೋಶ ದಿವಸವನ್ನಾಗಿ ಆಚರಿಸುತ್ತಿದ್ದೇವೆ ಎಂದು ಹೇಳುತ್ತಿವೆೆ. ಕಳೆದ ಒಂದೆರಡು ವಾರಗಳಿಂದ ಇಡೀ ದೇಶ ಆಕ್ರೋಶದಿಂದ ಕುದಿಯುತ್ತಿರುವಾಗ ನಾಳಿನ ಒಂದು ದಿನವನ್ನು ಆಕ್ರೋಶ ದಿನವನ್ನಾಗಿ ಘೋಷಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಯಾಕೆಂದರೆ ಇದು ಒಂದೆರಡು ದಿನಗಳಿಗೆ ಸೀಮಿತವಾಗಿರುವಂತಹದೂ ಅಲ್ಲ. ಹಲವು ತಿಂಗಳು ಕಾಲ ಅಥವಾ ಕೆಲವು ವರ್ಷಗಳ ಕಾಲವೂ ಈ ಸ್ಥಿತಿ ಮುಂದುವರಿಯುವ ಸಾಧ್ಯತೆಗಳನ್ನು ನಾವು ಅಲ್ಲಗಳೆಯುವ ಹಾಗಿಲ್ಲ. ಹೀಗಿರುವಾಗ, ವಿರೋಧ ಪಕ್ಷ ಹಮ್ಮಿಕೊಂಡಿರುವ ಒಂದು ದಿನದ ಆಕ್ರೋಶ ದಿವಸಕ್ಕೆ ಯಾವ ಅರ್ಥವೂ ಇಲ್ಲ. ಬಹುಶಃ ಮೋದಿಯವರ ನಿರ್ಧಾರವನ್ನು ಯಾವ ರೀತಿ ಎದುರಿಸಬೇಕೆಂಬ ಗೊಂದಲ ವಿರೋಧ ಪಕ್ಷಗಳನ್ನು ಕಾಡುತ್ತಿದೆ. ಇದರ ವಿರುದ್ಧ ಯಾವ ರೀತಿ ಕಾರ್ಯ ಯೋಜನೆಯನ್ನು ರೂಪಿಸಬೇಕು ಎನ್ನುವುದು ಹೊಳೆಯದೆ ಒದ್ದಾಡುತ್ತಿವೆೆ ಎನ್ನುವುದಂತೂ ಸ್ಪಷ್ಟ.

ಮುಖ್ಯವಾಗಿ ಸರಕಾರ ‘ಕಪ್ಪುಹಣ ಮಟ್ಟ ಹಾಕಲು ನೋಟು ನಿಷೇಧ ಮಾಡಿದ್ದೇನೆ’ ಎಂದು ಹೇಳುತ್ತಿದೆ. ಕಪ್ಪುಹಣ ಮಟ್ಟ ಹಾಕುವುದನ್ನಂತೂ ವಿರೋಧಿಸಲು ಸಾಧ್ಯವಿಲ್ಲ, ನೋಟು ನಿಷೇಧದಿಂದ ಕಪ್ಪುಹಣ ಮಟ್ಟಹಾಕಲು ಸಾಧ್ಯವೆಂದಾದರೆ ಅದೆಷ್ಟೇ ತೊಂದರೆಯಾದರೂ ನಾವು ನೋಟು ನಿಷೇಧವನ್ನು ಒಪ್ಪಲೇ ಬೇಕಾಗುತ್ತದೆ. ಆದರೆ ಸದ್ಯದ ಸ್ಥಿತಿಯಲ್ಲಿ ನೋಟು ನಿಷೇಧ ಕಪ್ಪು ಹಣವನ್ನು ಮಟ್ಟ ಹಾಕುವಲ್ಲಿ ಸಂಪೂರ್ಣ ಯಶಸ್ವಿಯಾಗುವುದಿಲ್ಲ ಮತ್ತು ಅದು ಇನ್ನಿತರ ಆರ್ಥಿಕ ದುಷ್ಪರಿಣಾಮಗಳನ್ನು ಬೀರುತ್ತದೆ ಎನ್ನುವುದು ಆರ್ಥಿಕ ತಜ್ಞರ ಆತಂಕ. ಇದೇ ಸಂದರ್ಭದಲ್ಲಿ ಮೋದಿಯ ಪಕ್ಷ ಮತ್ತು ಗೆಳೆಯರು ಈಗಾಗಲೇ ತಮ್ಮ ಹಣವನ್ನು ಭದ್ರಗೊಳಿಸಿ ಬಳಿಕ ನೋಟು ನಿಷೇಧ ಮಾಡಿದ್ದಾರೆ ಎನ್ನುವುದು ಇತರ ಪಕ್ಷಗಳ ಪ್ರಮುಖ ಆಕ್ಷೇಪ. ಬಹುಶಃ ಉಳಿದವರಿಗೂ ಈ ಅವಕಾಶವನ್ನು ನೀಡಿದ್ದಿದ್ದರೆ ಈ ಪಕ್ಷಗಳು ಇಷ್ಟು ಉದ್ರಿಕ್ತಗೊಳ್ಳುತ್ತಿರಲಿಲ್ಲವೇನೋ? ಇಂದು ವಿರೋಧ ಪಕ್ಷಗಳು ಧರಣಿ, ಬಂದ್‌ಗಳನ್ನು ಮಾಡುವ ಬದಲು ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು, ಭಾರತದ ಅರ್ಥವ್ಯವಸ್ಥೆಯಲ್ಲಿ ಆಗುತ್ತಿರುವ ಅನಾಹುತಗಳನ್ನು ದೇಶದ ಮುಂದಿಡುವ ಪ್ರಯತ್ನ ಮಾಡಬೇಕು. ಇದು ಒಂದು ದಿನದಲ್ಲಿ ಆಗುವ ಕೆಲಸವಂತೂ ಅಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಜನರ ಆಕ್ರೋಶದ ಜೊತೆಯಿಲ್ಲದೆ ಕೇವಲ ರಾಜಕೀಯ ಪಕ್ಷಗಳು ಬೀದಿಗಿಳಿದರೆ ಅದು ಜನರ ದೃಷ್ಟಿಯಿಂದಲೇ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಮೋದಿ ಜನರ ಕಣ್ಣಲ್ಲಿ ಹುತಾತ್ಮರಾಗುವ ಸಾಧ್ಯತೆಯೂ ಇದೆ.

ತನಗೆ ಐವತ್ತು ದಿನಗಳನ್ನು ನೀಡಿ ಎಂದು ನರೇಂದ್ರ ಮೋದಿ ದೇಶವನ್ನು ಕೇಳಿಕೊಂಡಿದ್ದಾರೆ. ಆ ಐವತ್ತು ದಿನಗಳನ್ನು ಜನರು ನೀಡಲಿ, ನೀಡದಿರಲಿ...ರಾಜಕೀಯ ಪಕ್ಷಗಳಂತೂ ನೀಡಬೇಕಾಗಿದೆ. ಅತ್ಯಾತುರದಿಂದ ವಿರೋಧ ಪಕ್ಷಗಳು ಮೋದಿಯ ಕಾಲೆಳೆಯಲು ಹೊರಟರೆ ಅದು ಅವುಗಳ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು. ಸಾರ್ವಜನಿಕವಾಗಿ ಜನರ ಸಂಕಟಗಳಿಗೆ ಸ್ಪಂದಿಸುವುದು, ಅವರ ಜೊತೆಗೆ ಬೀದಿಗಿಳಿಯುವುದು ಸದ್ಯಕ್ಕೆ ವಿರೋಧ ಪಕ್ಷಗಳ ಕರ್ತವ್ಯ. ಅದೇನೂ ಒಂದು ದಿನದ ಮುಷ್ಕರ, ಪ್ರತಿಭಟನೆಗೆ ಸೀಮಿತವಾಗಬೇಕಾಗಿಲ್ಲ. ಯಾಕೆಂದರೆ ಒಂದು ದಿನದ ಪ್ರತಿಭಟನೆಯ ಮೂಲಕ ಯಾವ ಒತ್ತಡವನ್ನೂ ಉಂಟು ಮಾಡಲು ಸಾಧ್ಯವಿಲ್ಲ. ಹಾಗೆಯೇ ಜನರು ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಆದರೆ ಬಹಳಷ್ಟು ಮಂದಿ ಅದನ್ನು ಸಹಿಸುತ್ತಿದ್ದಾರೆ. ಯಾಕೆಂದರೆ ಇದರಿಂದಾಗಿ ಭಾರತದ ಭವಿಷ್ಯ ಸುವರ್ಣಾಕ್ಷರದಲ್ಲಿ ಬರೆಯಲ್ಪಡುತ್ತದೆ ಎಂದು ಮೋದಿ ಮತ್ತು ಅವರ ಭಕ್ತರು ಜನರನ್ನು ನಂಬಿಸಿದ್ದಾರೆ. ಆ ನಂಬಿಕೆಯನ್ನು ವಿರೋಧಪಕ್ಷಗಳು ಮುಟ್ಟುಲು ಹೋದಷ್ಟೂ ಮೋದಿ ಬಳಗಕ್ಕೇ ಲಾಭ. ಆದುದರಿಂದ ಬೀದಿಯಲ್ಲಿ ಬಿದ್ದಿರುವ ಜನರ ಕಣ್ಣು ತೆರೆಯದೇ, ಅವರ ಸಹನೆ, ತಾಳ್ಮೆ ಮುಗಿಯುವವರೆಗೂ ವಿರೋಧ ಪಕ್ಷಗಳು ತಮ್ಮ ಆಕ್ರೋಶಗಳನ್ನು ಅದುಮಿಟ್ಟುಕೊಳ್ಳುವುದು ಅವುಗಳ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಈ ಸಂದರ್ಭದಲ್ಲಿ ‘ಕಪ್ಪು ಹಣದ ವಿರುದ್ಧ’ ವಿರೋಧ ಪಕ್ಷಗಳು ಗಟ್ಟಿಧ್ವನಿಯಲ್ಲಿ ಮಾತನಾಡುವುದು ಮುಖ್ಯವಾಗಿದೆ. ನೋಟು ನಿಷೇಧವನ್ನು ಬದಿಗಿಟ್ಟು ಕಪ್ಪುಹಣವನ್ನು ಹೇಗೆ ಬಗ್ಗು ಬಡಿಯಬಹುದು ಮತ್ತು ಅದಕ್ಕೆ ಯಾವ ಕ್ರಮವನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ಕೇಂದ್ರ ಸರಕಾರಕ್ಕೆ ಮನದಟ್ಟು ಮಾಡಬೇಕು. ಈ ಮೂಲಕ ತಾವು ನಿಜವಾದ ಅರ್ಥದಲ್ಲಿ ಕಪ್ಪು ಹಣದ ವಿರುದ್ಧವಿದ್ದೇವೆ ಎನ್ನುವುದನ್ನು ಜನರಿಗೆ ಸ್ಪಷ್ಟಪಡಿಸಬೇಕು.

ನೋಟು ನಿಷೇಧದ ವಿರುದ್ಧ ವಿರೋಧಪಕ್ಷಗಳು ಮಾಡುತ್ತಿರುವ ಹೋರಾಟ ಪ್ರಾಮಾಣಿಕವಾದುದೇ ಆಗಿದ್ದರೆ, ಅವುಗಳು ನಿಜಕ್ಕೂ ಕಪ್ಪು ಹಣವನ್ನು ವಿರೋಧಿಸುತ್ತಿವೆೆ ಎಂದಿದ್ದ ಮೊತ್ತ ಮೊದಲು ಬೇನಾಮಿ ಆಸ್ತಿ, ಶೇರುಗಳು ಮತ್ತು ಬೇನಾಮಿ ಚಿನ್ನಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು. ಹಾಗೆಯೇ ರಾಜಕೀಯ ಪಕ್ಷಗಳ ಎಲ್ಲ ಆರ್ಥಿಕ ವ್ಯವಹಾರಗಳು ಆರ್‌ಟಿಐ ಅಡಿಯಲ್ಲಿ ಬರುವಂತೆ ಕೇಂದ್ರವನ್ನು ಒತ್ತಾಯಿಸಬೇಕು. ಭ್ರಷ್ಟಾಚಾರ, ಕಪ್ಪುಹಣ ಇತ್ಯಾದಿಗಳ ವಿರುದ್ಧ ಹೋರಾಡುವುದಕ್ಕೆ ಲೋಕಪಾಲ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರಲು, ಅದಕ್ಕೆ ಸಂಪೂರ್ಣ ಅಧಿಕಾರ ನೀಡಲು ವಿರೋಧ ಪಕ್ಷಗಳು ಧ್ವನಿಯೆತ್ತಬೇಕು. ಹಾಗೆಯೇ ಬಂದಿದೆಯೆನ್ನಲಾಗಿರುವ ಕಪ್ಪುಹಣವನ್ನೆಲ್ಲ ಜನಪರ ಯೋಜನೆಗಳಿಗೆ ವಿನಿಯೋಗಿಸಲು ಸರಕಾರದ ಮೇಲೆ ಒತ್ತಡ ಹೇರಬೇಕು. ಈ ನಿಟ್ಟಿನಲ್ಲಿ ಸಾಗದೆ, ಬರೇ ನೋಟು ನಿಷೇಧದ ವಿರುದ್ಧವಷ್ಟೇ ವಿರೋಧಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದರೆ ಅದನ್ನು ಪ್ರಾಮಾಣಿಕ ಆಕ್ರೋಶವೆಂದು ಜನರು ತಿಳಿಯುವುದು ಕಷ್ಟವಾಗಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X