ನೋಟು ರದ್ದತಿಯಿಂದ ಕಪ್ಪು ಹಣ ನಿಯಂತ್ರಣ : ತಲೆಕೆಳಗಾದ ಸರಕಾರದ ಲೆಕ್ಕಾಚಾರ ?

ಹೊಸದಿಲ್ಲಿ, ನ.28: ಕೇಂದ್ರ ಸರಕಾರ 500 ಹಾಗೂ 1000 ರೂಪಾಯಿ ಮೌಲ್ಯಗಳ ನೋಟುಗಳನ್ನು ಅಮಾನ್ಯ ಮಾಡಿದ ಕ್ರಮದಿಂದ ನಿರೀಕ್ಷಿತ ಪ್ರತಿಫಲ ಸಿಗುವ ನಿರೀಕ್ಷೆ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಪ್ಪುಹಣ ತಡೆ ಸಲುವಾಗಿ ಒಟ್ಟು 14.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳ ಚಲಾವಣೆ ರದ್ದು ಮಾಡಿದ್ದು, ಈ ಪೈಕಿ 8 ಲಕ್ಷ ಕೋಟಿ ರೂಪಾಯಿ ಮಾತ್ರ ಈಗ ವಾಪಸು ಬ್ಯಾಂಕುಗಳಿಗೆ ಬಂದಿದೆ. ಅಂತಿಮವಾಗಿ, ಕಪ್ಪುಹಣ ಎಂದು ಬಿಂಬಿಸಲಾದ ಹಣ, ಕೇಂದ್ರದ ನಿರೀಕ್ಷೆಯಿಂದ 4-5 ಲಕ್ಷ ಕೋಟಿ ರೂಪಾಯಿ ಕಡಿಮೆ ಪ್ರಮಾಣದಲ್ಲಿ ವಾಪಸ್ಸಾಗುವ ಸಾಧ್ಯತೆ ಇದೆ ಎಂದು ಅರ್ಥಶಾಸ್ತ್ರಜ್ಞರು ಲೆಕ್ಕಾಚಾರ ಮಾಡಿದ್ದಾರೆ. ಈಗ ವಾಪಸು ಬಂದಿರುವ ಹಣದಲ್ಲಿ ಕೂಡಾ ದೊಡ್ಡ ಮೊತ್ತದ ಹಣ ಠೇವಣಿಯಾಗಿ ಪರಿವರ್ತನೆಯಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲೇ ಕೇಂದ್ರ ಸರಕಾರ ಅರೆ ಕ್ಷಮಾದಾನದ ಪ್ರಸ್ತಾವ ಮುಂದಿಟ್ಟಿದೆ. ಆದಾಯ ಘೋಷಣೆ ಯೋಜನೆಯ ಮಾದರಿಯಲ್ಲೇ ಇದನ್ನು ಜಾರಿಗೊಳಿಸಲು ಸರಕಾರ ಮುಂದಾಗಿದೆ ಎನ್ನಲಾಗಿದೆ.
Next Story





