ಅದಾನಿಗೆ ಕೊಟ್ಟ ಸಾಲದ ವಿವರ ಬಹಿರಂಗ ಪಡಿಸಲು ಅಸಾಧ್ಯ : ಕೇಂದ್ರ ಮಾಹಿತಿ ಆಯೋಗ
ಇದಕ್ಕೆ ಕಾರಣ ಏನು ಗೊತ್ತೇ ?

ಹೊಸದಿಲ್ಲಿ,ನ.28 : ಕೈಗಾರಿಕೊದ್ಯಮಿ ಗೌತಮ್ ಅದಾನಿಯವರ ಮಾಲಕತ್ವದ ಕಂಪೆನಿಗಳಿಗೆ ನೀಡಲಾದ ಸಾಲಕ್ಕೆ ಸಂಬಂಧಿಸಿದ ದಾಖಲೆಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಳಿಯಿರುವುದರಿಂದ ಹಾಗೂ ಅವುಗಳನ್ನು ವಾಣಿಜ್ಯಕವಾಗಿ ಗೌಪ್ಯವಾಗಿಡಬೇಕಾಗಿರುವುದರಿಂದ ಅವುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದುಕೇಂದ್ರ ಮಾಹಿತಿ ಆಯೋಗ ಹೇಳಿದೆ.
ರಮೇಶ್ ರಾಂಚೋರ್ ದಾಸ್ ಜೋಷಿ ಎಂಬವರು ಸಲ್ಲಿಸಿದ್ದ ಆರ್ ಟಿ ಐ ಅರ್ಜಿ ವಿಚಾರವಾಗಿಆಯೋಗ ಮೇಲಿನಂತೆ ಹೇಳಿದೆ. ಗೌತಮ್ ಅದಾನಿ ಸಮೂಹಕ್ಕೆ ದೊಡ್ಡ ಮೊತ್ತದ ಸಾಲಗಳನ್ನು ಯಾವ ಆಧಾರದಲ್ಲಿ ನೀಡಲಾಗುತ್ತಿದೆ ಹಾಗೂ ಆಸ್ಟ್ರೇಲಿಯಾದ ಕಲ್ಲಿದ್ದಲು ಗಣಿಗೆ ಸಂಬಂಧಿಸಿದ ಸಾಲದ ಬಗ್ಗೆ ಪುರಾವೆಗಳನ್ನೂ ನೀಡುವಂತೆ ಕೋರಿ ಅವರು ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರು ಕೇಳಿರುವ ಮಾಹಿತಿ ವಾಣಿಜ್ಯಕ ಮಾಹಿತಿಯಾಗಿರುವುದರಿಂದ ಹಾಗೂ ಅವುಗಳನ್ನು ಮೂರನೇ ವ್ಯಕ್ತಿ ನಂಬಿಕೆಯಾಧಾರದಲ್ಲಿ ತನ್ನ ಬಳಿಯಿರಿಸಿರುವುದರಿಂದ ಅದನ್ನು ಆರ್ ಟಿ ಐ ಕಾಯಿದೆಯ ಸೆಕ್ಷನ್ 8(1) (ಡಿ)(ವಾಣಿಜ್ಯಕ ಗೌಪ್ಯತೆ) ಹಾಗೂ (ಇ) (ಫಿಡುಶಿಯರಿ ಕೆಪಾಸಿಟಿ) ಅನ್ವಯ ನೀಡಲು ಸಾಧ್ಯವಿಲ್ಲವೆಂದು ಮಾಹಿತಿ ಆಯುಕ್ತರಾದ ಮಂಜುಳಾ ಪ್ರಶೆರ್ ಹೇಳಿದ್ದಾರೆ.
ಬಹಿರಂಗ ಪಡಿಸುವುದರಿಂದ ವಿನಾಯಿತಿ ಪಡೆದ ಯಾವುದೇ ಮಾಹಿತಿಯನ್ನು ಕೂಡ ಅದರ ಹಿಂದೆ ಸಾರ್ವಜನಿಕ ಹಿತಾಸಕ್ತಿಯಿದ್ದರೆ ಬಹಿರಂಗಪಡಿಸಬಹುದಾಗಿದೆ ಎಂದು ಹೇಳಿದ ಮಂಜುಳಾ,‘‘ಎಸ್ ಬಿ ಐ ನ ಕೇಂದ್ರೀಯಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಎಫ್ ಎ ಎ ಅವರುಮಾಹಿತಿ ನಿರಾಕರಿಸಿದ್ದರೂ ಅರ್ಜಿದಾರ ಈ ನಿರ್ಧಾರದಲ್ಲಿನ ಲೋಪದೋಷಗಳನ್ನು ಉಲ್ಲೇಖಿಸಲು ಹಾಜರಿರಲಿಲ್ಲ’’ ಎಂದಿದ್ದಾರೆ.
ಆರ್ ಟಿ ಐ ಅರ್ಜಿದಾರ ಜೋಷಿ ತಮ್ಮ ಅರ್ಜಿ ಸಲ್ಲಿಕೆಯ ಹಿಂದೆಯಾವುದೇ ಸಾರ್ವಜನಿಕ ಹಿತಾಸಕ್ತಿಯಿದೆಯೆನ್ನುವುದನ್ನು ಉಲ್ಲೇಖಿಸಿಲ್ಲವೆಂದುಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ ವಾದಿಸಿದ್ದರು.







