ಕರಾಟೆ ಸ್ಪರ್ಧೆಯಲ್ಲಿ ಆಲಿಯಾ ಅಸ್ಸಾದಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಉಡುಪಿ, ನ.27: ಉದ್ಯಾವರ ಎಂಇಟಿ ಆಂಗ್ಲ ಮಾಧ್ಯಮ ಶಾಲೆಯ 7ನೆ ತರಗತಿ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಉಡುಪಿ ವಳಕಾಡು ಸರಕಾರಿ ಪ್ರೌಢಶಾಲೆಯಲ್ಲಿ ನ.26-27ರಂದು ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧಾಕೂಟದ 18ಕೆ.ಜಿ.-22ಕೆ.ಜಿ. ಬಾಲಕಿಯರ ವಿಭಾಗದಲ್ಲಿ ಜಯಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಉಡುಪಿ ನಾಯರ್ ಕೆರೆ ಇಫ್ತಿಸಂ ಅಸ್ಸಾದಿ ಮತ್ತು ಅಯ್ಯೂಬ್ ಅಸ್ಸಾದಿ ದಂಪತಿ ಪುತ್ರಿ.
Next Story





