ವಿಪಕ್ಷಗಳಿಂದ ಆಕ್ರೋಶ್ ದಿವಸ್ ಆಚರಣೆ ; ಬಿಜೆಪಿಯಿಂದ ಸಂಭ್ರಮಾಚರಣೆಯ ತಿರುಗೇಟು

ಬೆಂಗಳೂರು, ನ.28: ನೋಟ್ ಬ್ಯಾನ್ ಖಂಡಿಸಿ ವಿಪಕ್ಷಗಳು ಕರೆ ನೀಡಿರುವ ಆಕ್ರೋಶ್ ದಿವಸ್ ಅಂಗವಾಗಿ ಕಾಂಗ್ರೆಸ್ ವತಿಯಿಂದ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ನಡೆಯಿತು.
ಬೆಂಗಳೂರಿನ ಟೌನ್‌ಹಾಲ್ ಮುಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ಮೈಸೂರು, ತುಮಕೂರು,ರಾಮನಗರ, ಕೋಲಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೈಸೂರಿನಲ್ಲಿ ಸಿಐಟಿಯು ಆಕ್ರೋಶ್ ದಿವಸ್‌ಗೆ ಬೆಂಬಲ ವ್ಯಕ್ತಪಡಿಸಿ ಧರಣಿ ನಡೆಸಿದರು.ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು.
ಬೆಂಗಳೂರು ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಸಂಘಟನೆಗಳಿಂದ ಮೆರವಣಿಗೆ ,ಜಯದೇವ ವೃತ್ತದಲ್ಲಿ ವಿವಿಧ ಸಂಘಟನೆಗಳು ಧರಣಿ ನಡೆಯಿತು
ಕೋಲಾರದಲ್ಲಿ ಹಣದ ಹಂಚಿಕೆ: ಕೋಲಾರದಲ್ಲಿ ಕಾಂಗ್ರೆಸ್ ನ ಕಾರ್ಯಕ್ರಮಕ್ಕೆ ಆಗಮಿಸಿದ ಕಾರ್ಯಕರ್ತರಿಗೆ 100 ರೂ, 500ರೂ. 1000 ರೂ. ನೋಟ್ ಗಳನ್ನು ಹಂಚಿದ ಘಟನೆ ವರದಿಯಾಗಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ರ‍್ಯಾಲಿ ಯಲ್ಲಿ ಭಾಗವಹಿಸಿದವರಿಗೆ ಶಾಸಕರ ಎದುರಿನಲ್ಲೇ ಹಣ ಹಂಚಿರುವುದಾಗಿ ಆರೋಪಿಸಲಾಗಿದೆ.
ಗದಗದಲ್ಲಿ ನಡೆದ ಕಾಂಗ್ರೆಸ್ ರ‍್ಯಾಲಿ ಯಲ್ಲಿ ಚಿಕ್ಕ ಮಕ್ಕಳನ್ನುಬಳಿಸಿದ ಆರೋಪ ಕೇಳಿ ಬಂದಿದೆ.
ಒಣಮೆಣಸಿನ ಕಾಯಿ ಹಂಚಿಕೆ: ಕನ್ನಡ ಚಳುವಳಿ ವಾಟಾಲ್ ಪಕ್ಷದ ವಾಟಾಲ್ ನಾಗರಾಜ್ ಅವರು ಒಣಮೆಣಸಿನ ಹಂಚುವುದರ ಮೂಲಕ ನೋಟ್ ಬ್ಯಾನ್ ವಿರುದ್ಧ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಕೇಂದ್ರದ ಆಡಳಿತಾರೂಢ ಬಿಜೆಪಿ ಆಕ್ರೋಶ್ ದಿವಸ್ ಆಚರಣೆಗೆ ’ಸಂಭ್ರಮ ಆಚರಣೆಯ ತಿರಗೇಟು ನೀಡಿದೆ.ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ ನಡೆಯಿತು. ಮೈಸೂರಿನ ಅಗ್ರಹಾರ ಮಾರ್ಕೆಟ್ ನಲ್ಲಿ ಮಾಜಿ ಸಚಿವ ರಾಮದಾಸ್ ಪೌರ ಕಾರ್ಮಿಕರಿಗೆ ಹೂಗಳನ್ನು ನೀಡಿದರು. ಮೈಸೂರಿನ ನಂಜನಮಳಿಗೆ ವೃತ್ತದಲ್ಲಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಸ್ಥರಿಗೆ ಹೂವಿನ ಹಾರ ಹಾಕಿ, ಸಿಹಿ ತಿನ್ನಿಸಿ ಸಂಭ್ರಮಿಸಿದರು.ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ತಿಂಡಿ ಹಂಚಿದರು.
ಇದೇ ವೇಳೆ ಕರೆ ನೀಡಲಾಗಿದ್ದ ಭಾರತ್ ಬಂದ್ ಗೆ ಕರ್ನಾಟಕದಲ್ಲಿ ಜನಜೀವನದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ.







