ಪಯ್ಯನ್ನೂರ್: ತಾಯಿಯನ್ನು ಕ್ರೂರವಾಗಿ ಥಳಿಸಿದ ಪುತ್ರಿಯ ವಿರುದ್ಧಪ್ರಕರಣ ದಾಖಲು

ಪಯ್ಯನ್ನೂರ್, ನವೆಂಬರ್ 28: ವೃದ್ಧೆ ತಾಯಿಯನ್ನು ಹೊಡೆದ ಮಗಳು ಮತ್ತು ಆಕೆಯ ಪತಿಯ ವಿರುದ್ಧ ಪಯ್ಯನ್ನೂರ್ ಪೊಲೀಸರು ಗೃಹಿಣಿ ಹಿಂಸೆ ವಿರುದ್ಧ ಕಾನೂನುಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆಂದು ವರದಿಯಾಗಿದೆ.
ಪಯ್ಯನ್ನೂರ್ ಮಾವಿಚೇರಿಯ ಕೆ.ವಿ. ಕಾರ್ತ್ಯಾಯಿನಿಯವರನ್ನು(75) ಹೊಡೆದಿರುವ ಆರೋಪದಲ್ಲಿ ಅವರ ಪುತ್ರಿ ಚಂದ್ರಾಮತಿ ಮತ್ತು ಆಕೆಯ ಪತಿ ರವಿ ವಿರುದ್ಧ ಕೇಸು ದಾಖಲಿಸಲಾಗಿದೆ. ಮನೆಯಲ್ಲಿ ಚಂದ್ರಾಮತಿ ತಾಯಿ ಕಾರ್ತ್ಯಾಯಿನಿಯವರಿಗ ಹೊಡೆದುದನ್ನು ನೋಡಿದ ಕಾತ್ಯಾಯಿನಿಯ ಮಗ ಹಾಗೂ ಚಂದ್ರಮತಿಯ ಸಹೋದರ ಕೆ.ವಿ ವೇಣುಗೋಪಾಲ್ ಪಯ್ಯನ್ನೂರ್ ಪೊಲೀಸರಿಗೆ ದೂರು ನೀಡಿದ್ದರು. ಶನಿವಾರ ರಾತ್ರಿ ಮನೆಯಿಂದ ಬೊಬ್ಬೆ ಕೇಳಿ ಬಂದ ವೇಣುಗೋಪಾಲ್ ಚಂದ್ರಮತಿ ಅಮ್ಮನಿಗೆ ಹೊಡೆಯುತ್ತಿರುವದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು. ಕೈಯ್ಯಿಂದ ಮತ್ತು ಸೌಟಿನಿಂದ ಅಮ್ಮನನ್ನು ಹೊಡೆದ ಚಂದ್ರಾಮತಿ ಅವಾಚ್ಯವಾಗಿ ಬೈದಿದ್ದಳು. ಈಎಲ್ಲ ದೃಶ್ಯಗಳನ್ನು ವೇಣುಗೋಪಾಲ್ ಪೊಲೀಸರಿಗೆ ನೀಡಿದ್ದಾರೆ. ಆಸ್ತಿವಿವಾದ ಚಂದ್ರಮತಿಯವರ್ತನೆಗೆ ಕಾರಣವೆಂದು ವರದಿ ತಿಳಿಸಿದೆ.





