ಕುಪಿತ ಗ್ರಾಹಕರಿಂದ ಎರಡು ಎಸ್ಬಿಐ ಶಾಖೆಗಳಲ್ಲಿ ದಾಂಧಲೆ

ಸಾಂದರ್ಭಿಕ ಚಿತ್ರ
ಇಂಫಾಲ,ನ.28: ಮಣಿಪುರದಲ್ಲಿಂದು ಎರಡು ಎಸ್ಬಿಐ ಶಾಖೆಗಳಲ್ಲಿ ಹಣ ಹಿಂಪಡೆಯಲು ಸರದಿ ಸಾಲಿನಲ್ಲಿ ಕಾದು ಹೈರಾಣಾದ ಗ್ರಾಹಕರು ಕುಪಿತರಾಗಿ ದಾಂಧಲೆ ನಡೆಸಿದ್ದಾರೆ.
ಇಲ್ಲಿಯ ಎಸ್ಬಿಐ ಮಣಿಪುರ ವಿವಿ ಶಾಖೆಯಲ್ಲಿ ಗ್ರಾಹಕರ ಗುಂಪೊಂದು ದಾಂಧಲೆ ಯನ್ನು ನಡೆಸಿದಾಗ ನಿಯಂತ್ರಿಸಲು ಮುಂದಾದ ಪೊಲೀಸ್ ಸಿಬ್ಬಂದಿಯೋರ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪ್ರತ್ಯೇಕ ಘಟನೆಯಲ್ಲಿ ಇಂಫಾಲ ಪಶ್ಚಿಮ ಜಿಲ್ಲೆಯ ಲೀಮಾಕ್ಹಾಂಗ್ನಲ್ಲಿ ಎಸ್ಬಿಐ ಶಾಖೆಯಲ್ಲಿ ಕಿಟಕಿ ಗಾಜುಗಳನ್ನು ಹುಡಿಗೈಯಲಾಗಿದ್ದು, ನಾಮಫಲಕವನ್ನು ಧ್ವಂಸಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
Next Story





