ಬಂಟ್ವಾಳ ಎಸ್‌ಡಿಪಿಐಯಿಂದ ’ಆಕ್ರೋಶ್ ದಿವಸ್’ ಆಚರಣೆ

ಬಂಟ್ವಾಳ, ನ. 28: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶಾದ್ಯಂತ ಸಮಾಜಘಾತುಕ ಶಕ್ತಿಗಳು ವಿಜ್ರಂಭಿಸುತ್ತಿದ್ದು ಅಷಹಿಷ್ಣುತೆ, ದಲಿತರ, ಅಲ್ಪಸಂಖ್ಯಾರರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದೆ. ದೇಶದ ಜನರು ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದು ಅದನ್ನು ಮರೆಮಾಚಲು ನರೇಂದ್ರ ಮೋದಿ ನೋಟು ರದ್ದುಗೊಳಿಸಿ ಕಪ್ಪು ಹಣ ಪತ್ತೆಹಚ್ಚುವ ನಾಟಕವಾಗುತ್ತಿದ್ದಾರೆ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಪ್ ಖಾನ್ ಕೋಡಾಜೆ ಅಸಮಾಧಾನ ವ್ಯಕ್ತಪಡಿಸಿದರು.
‘ಆಕ್ರೋಶಿತ್ ದಿವಸ್’ ಅಂಗವಾಗಿ ಎಸ್‌ಡಿಪಿಐ ಬಂಟ್ವಾಳ ವಿಧಾನಸಬಾ ಕ್ಷೇತ್ರ ಸಮಿತಿ ವತಿಯಿಂದ ಸೋಮವಾರ ಬಿ.ಸಿ.ರೋಡ್ ಕೈಕಂಬ ಜಂಕ್ಷನ್‌ನಲ್ಲಿ ಹಮ್ಮಿಕೊಂಡ ಪ್ರತಿಟನಾ ಸಬೆಯಲ್ಲು ಮುಖ್ಯ ಅತಿಥಿಯಾಗಿ ಬಾಗವಹಿಸಿ ಅವರು ಮಾತನಾಡಿದರು. 20 ಶೇಕಡವೂ ಬ್ಯಾಕಿಂಗ್ ವ್ಯವಸ್ಥೆ ಸಮರ್ಪಕವಾಗಿಲ್ಲದ ಭಾರತ ದೇಶದಲ್ಲಿ ಡಿಜಿಟಲ್ ಇಂಡಿಯಾ ಮಾಡಲು ಹೊರಟಿರುವುದು ಕೇಂದ್ರ ಸರಕಾರದ ಕ್ರಮ ಮೂರ್ಖತನದ ಪರಮಾವಧಿಯಾಗಿದೆ. ನೋಟು ಅಮಾನ್ಯದಿಂದ ದೇಶಾದ್ಯಂತ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಬಡವರು ಕೆಲಸ ಕಾರ್ಯ ಬಿಟ್ಟು ಬ್ಯಾಂಕ್, ಎಟಿಎಂ ಎದುರು ಸರತಿ ಸಾಲಿನಲ್ಲಿ ಕ್ಯೂ ನಿಲ್ಲುವಂತಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸದಿದ್ದರೆ ದೇಶದ ಜನರು ಕೇಂದ್ರ ಸರಕಾರದ ವಿರುದ್ಧ ದಂಗೆ ಏಳುವ ದಿನ ದೂರ ಇಲ್ಲ ಎಂದು ಎಚ್ಚರಿಕೆ ನೀಡಿದರು.
ಎಸ್‌ಡಿಪಿಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸಾಹುಲ್ ಹಮೀದ್ ಎಸ್.ಎಚ್. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಂಟ್ವಾಳ ಪುರಸಭಾ ಸದಸ್ಯ ಮುಹಮ್ಮದ್ ಇಕ್ಬಾಲ್ ಐ.ಎಂ.ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಮಾತನಾಡಿದರು. ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿ, ಎಸ್‌ಡಿಪಿಐ ಪುರಸಬಾ ಸಮಿತಿ ಅಧ್ಯಕ್ಷ ಯೂಸುಪ್ ಆಲಡ್ಕ, ಪುದು ಗ್ರಾಮ ಪಂಚಾಯತ್ ಸದಸ್ಯ ಸುಲೈಮಾನ್ ಉಸ್ತಾದ್, ಕ್ಷೇತ್ರ ಸಮಿತಿ ಕಾರ್ಯದರ್ಶಿ ಇಸ್ಮಾಯೀಲ್ ಬಾವ ಉಪಸ್ಥಿತಿದ್ದರು. ಕ್ಷೇತ್ರ ಸಮಿತಿ ಸದಸ್ಯ ರಿಯಾಝ್ ಕಡಂಬು ಕಾರ್ಯಕ್ರಮ ನಿರೂಪಿಸಿದರು.







