ಶಿವಸೇನಾ ನಾಯಕಿಯ ಬಂಗಲೆಯಿಂದ ನಗ-ನಗದು ಕಳವು

ಠಾಣೆ, ನ.28: ಅಜ್ಞಾತ ವ್ಯಕ್ತಿಗಳು ಇಲ್ಲಿನ ಶಿವಸೇನಾ ನಾಯಕಿಯೊಬ್ಬರ ಬಂಗಲೆಯಿಂದ ರೂ. 3 ಲಕ್ಷ ಮೌಲ್ಯದ ಆಭರಣಗಳು ಹಾಗೂ ನಗದಿನೊಂದಿಗೆ ಪರಾರಿಯಾಗಿದ್ದಾರೆ. ಶಿವಸೇನಾ ನಾಯಕಿ ತನ್ನ ಕುಟುಂಬದ ಸದಸ್ಯರೊಂದಿಗೆ ಸ್ಥಳೀಯ ಸಂಸ್ಥೆಯ ಚುನಾವಣಾ ಪ್ರಚಾರಕ್ಕಾಗಿ ಔರಂಗಾಬಾದ್‌ಗೆ ಹೋಗಿದ್ದರು.
ಡೊಂಬಿವಿಲಿಯಲ್ಲಿರುವ ಶಿವಸೇನಾ ನಾಯಕಿ ಮೀನಾ ಮಾರುತಿ ರಾಥೋಡ್‌ರ ಬಂಗಲೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಲಾಗಿದೆಯೆಂದು ಮಂಡಪ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೀನಾ, ಡಿ.18ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಯೊಂದರ ಚುನಾವಣೆಗಾಗಿ ಔರಂಗಾಬಾದ್ ಜಿಲ್ಲೆಯ ಕನ್ನಡ್‌ನಲ್ಲಿ ಪ್ರಚಾರ ಮಗ್ನರಾಗಿದ್ದರು. ಅವರ ಕುಟುಂಬವೂ ಕನ್ನಡ್‌ನಲ್ಲೇ ಇತ್ತೆಂದು ಅವರು ಹೇಳಿದ್ದಾರೆ.
ಘಟನೆಯ ಕುರಿತು ತನಗೆ ನೆರೆ ಹೊರೆಯವರು ಮಾಹಿತಿ ನೀಡಿದ್ದಾರೆ. ರೂ.3.12 ಲಕ್ಷ ವೌಲ್ಯದ ನಗ-ನಗದು ಕಳವಾಗಿದೆಯೆಂದು ಮೀನಾ ದೂರು ನೀಡಿದ್ದಾರೆ. ಈ ಸಂಬಂಧ ಸೂಕ್ತ ಐಪಿಸಿ ಸೆಕ್ಷನ್‌ಗಳನ್ವಯ ಪ್ರಕರಣ ದಾಖಲಿಸಲಾಯಿತೆಂದು ಅಧಿಕಾರಿ ತಿಳಿಸಿದ್ದಾರೆ.
Next Story





