ಕ್ಯಾಸ್ಟ್ರೊಗೆ ಕ್ರಾಂತಿ ಚೌಕದಲ್ಲಿ ಜನರ ಶ್ರದ್ಧಾಂಜಲಿ

ಹವಾನ, ನ. 28: ಕ್ಯೂಬವನ್ನು ಅರ್ಧ ಶತಮಾನ ಕಾಲ ಆಳಿದ ಫಿಡೆಲ್ ಕ್ಯಾಸ್ಟ್ರೊ ಸ್ಮರಣಾರ್ಥ ಕ್ಯೂಬನ್ನರು ಸೋಮವಾರದಿಂದ ಒಂದು ವಾರ ಕಾಲ ರಾಜಧಾನಿ ಹವಾನದ ಕ್ರಾಂತಿ ಚೌಕದಲ್ಲಿ ಸೇರಲಿದ್ದಾರೆ.
1959ರ ಕ್ಯೂಬ ಕ್ರಾಂತಿಯ ನಾಯಕ ಶುಕ್ರವಾರ ತನ್ನ 90ನೆ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.
ಕ್ರಾಂತಿ ಚೌಕದಲ್ಲಿ ಸೋಮವಾರದಿಂದ ಎರಡು ದಿನಗಳ ಕಾಲ ನಡೆಯಲಿರುವ ಸಮಾರಂಭದಲ್ಲಿ ಭಾಗವಹಿಸುವಂತೆ ಸರಕಾರ ಜನರನ್ನು ಆಹ್ವಾನಿಸಿದೆ. ಸಮಾರಂಭವು ಮಂಗಳವಾರ ಕೊನೆಗೊಳ್ಳಲಿದೆ.
ಮಂಗಳವಾರ ರಾತ್ರಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಶ್ವ ನಾಯಕರು ಕ್ಯಾಸ್ಟ್ರೊಗೆ ಶ್ರದ್ಧಾಂಜಲಿ ಕಾರ್ಯಕ್ರಮ ಸಲ್ಲಿಸುವ ಸಾಧ್ಯತೆಯಿದೆ. ಒಂಬತ್ತು ದಿನಗಳ ರಾಷ್ಟ್ರೀಯ ಶೋಕ ಡಿಸೆಂಬರ್ 4ರಂದು ಮುಕ್ತಾಯಗೊಳ್ಳಲಿದೆ.
Next Story





