ಉಡುಪಿ: ಬಿಜೆಪಿಯಿಂದ ಸಂಭ್ರಮ ದಿನಾಚರಣೆ

ಉಡುಪಿ, ನ.28: ಕಪ್ಪು ಹಣದ ವಿರುದ್ಧ ಪ್ರಧಾನಿ ತೆಗೆದುಕೊಂಡಿರುವ ಕಠಿಣ ಕ್ರಮವನ್ನು ವಿರೋಧಿಸಿ ವಿಪಕ್ಷಗಳು ಆಚರಿಸುತ್ತಿರುವ ಆಕ್ರೋಶ್ ದಿವಸ್‌ಗೆ ವಿರುದ್ಧವಾಗಿ ಬಿಜೆಪಿ ಉಡುಪಿ ನಗರ ಯುವ ಮೋರ್ಚಾ ಸೋಮವಾರ ಉಡುಪಿ ಸರ್ವಿಸ್ ಬಸ್‌ನಿಲ್ದಾಣದ ಬಳಿ ಸಂಭ್ರಮ ದಿನವನ್ನು ಆಚರಿಸಿತು.
ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ವಿರೋಧ ಪಕ್ಷಗಳ ಆಕ್ರೋಶ್ ದಿವಸ್‌ಗೆ ಜನತೆ ಬೆಂಬಲ ನೀಡದೆ ಬಂದ್‌ನ್ನು ಸಂಪೂರ್ಣವಾಗಿ ವಿಫಲಗೊಳಿಸಿದ್ದಾರೆ. ಈ ಮೂಲಕ ದೇಶದ ಜನತೆ ಮೋದಿ ಜೊತೆ ಇದ್ದಾರೆ ಎಂಬುದು ಸಾಬೀತಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಸುರೇಶ್ ನಾಯಕ್ ಕುಯಿಲಾಡಿ, ಯಶ್ಪಾಲ್ ಸುವರ್ಣ, ಕಟಪಾಡಿ ಶಂಕರ ಪೂಜಾರಿ, ಪ್ರಭಾಕರ ಪೂಜಾರಿ, ಶ್ಯಾಮಲಾ ಕುಂದರ್, ನಳಿನಿ ಪ್ರದೀಪ್ ರಾವ್, ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.
Next Story





