ಇಸ್ಲಾಮಿನ ಬಗ್ಗೆ ಅರಿವು ಮೂಡಿಸುವ ಕೆಲಸವಾಗಲಿ: ನೌಶಾದ್ ಬಾಖವಿ

ಮಂಗಳೂರು, ನ. 28: ಯುವಕರಲ್ಲಿ ಇಸ್ಲಾಮಿನ ಬಗ್ಗೆ ಅರಿವು ಮೂಡಿಸುವ ಕೆಲಸ ಮುಸ್ಲಿಂ ವಿದ್ವಾಂಸರಿಂದ ಆಗಬೇಕಾಗಿದೆ ಎಂದು ಧಾರ್ಮಿಕ ಮುಖಂಡ ಎ.ಎಂ.ನೌಶಾದ್ ಬಾಖವಿ ತಿರುವನಂತಪುರಂ ಅಭಿಪ್ರಾಯಪಟ್ಟಿದ್ದಾರೆ.
ಅವರು ಎಸ್‌ವೈಎಸ್ ಮತ್ತು ಎಸ್ಕೆಎಸ್ಸೆಸ್ಸೆಫ್ ಪಜೀರ್ ಶಾಖೆ ಇದರ ಐದನೆ ವಾರ್ಷಿಕದ ಪ್ರಯುಕ್ತ ಉಳ್ಳಾಲದಲ್ಲಿ ನಡೆದ ಏಕದಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕೆಲವು ಮುಸ್ಲಿಂ ಯುವಕರು ಮಾದಕ ವ್ಯಸನಗಳ ದಾಸರಾಗುತ್ತಿರುವುದು ವಿಷಾದನೀಯ. ಇದು ಸಮಾಜ ಮತ್ತು ಕುಟುಂಬಕ್ಕೆ ಹಾನಿ ತಂದೊಡ್ಡಬಹುದು. ಆದ್ದರಿಂದ ಯುವಕರು ಇಸ್ಲಾಮ್ ಕಲ್ಪಿಸಿದ ಮಾರ್ಗದಲ್ಲಿ ಜೀವಿಸುತ್ತಾ ದೇವರ ಸಂಪ್ರೀತಿಗೆ ಒಳಪಡುವಂತೆ ಕರೆ ನೀಡಿದರು. ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಪ್ರಾಂಶುಪಾಲ ನ್ಯಾಯವಾದಿ ಹನೀಫ್ ಹುದವಿ ದೇಲಂಪಾಡಿ ಮಾತನಾಡಿ, ಶರೀಯತ್ ವಿಷಯದಲ್ಲಿ ಕೇಂದ್ರದ ಹಸ್ತಕ್ಷೇಪದ ವಿರುದ್ಧ ದೇಶದ ಎಲ್ಲಾ ಮುಸ್ಲಿಮರು ಒಂದಾಗಿ ಹೋರಾಡಬೇಕಾದ ಅಗತ್ಯವಿದೆ ಎಂದರು.
ಸಚಿವ ಯು.ಟಿ ಖಾದರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಎಸ್‌ವೈಎಸ್ ಪಜೀರ್ ಘಟಕದ ಅಧ್ಯಕ್ಷ ಸಿ.ಎಚ್.ಮೊದಿನ್ ಕುಂಞಿ ಪಜೀರ್ ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಸ್ಸಯ್ಯದ್ ಜುನೈದ್ ಜಿಫ್ರಿ ತಂಙಳ್ ಅತೂರು ದುಆ ನೇರವೆರಿಸಿದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಖಾಸಿಂ ಬಾವ ಪಜೀರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಶ್ಹೂರು ಮಂಜೇಶ್ವರ ಸಯ್ಯದ್ ಬದ್ರುದ್ದೀನ್ ತಂಙಳ್, ದ.ಕ. ಸಮಸ್ತ ಮುಶಾವರ ಸದಸ್ಯ ಇಬ್ರಾಹೀಂ ಬಾಖವಿ ಕೆ.ಸಿ. ರೋಡ್, ಅದಂ ದಾರಿಮಿ, ದೇರಳಕಟ್ಟೆ ರೇಂಜ್ ಅಧ್ಯಕ್ಷ ಲತೀಫ್ ದಾರಿಮಿ ರೆಂಜಾಡಿ, ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಹಂಗಾಮಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಜಿ.ಪಂ ಮಾಜಿ ಸದಸ್ಯ ಎನ್.ಎಸ್ ಕರೀಂ, ತಾ.ಪಂ ಮಾಜಿ ಸದಸ್ಯ ಮುಸ್ತಫಾ ಮಲಾರ್, ಉಪ್ಪಿನಂಗಡಿ ಜುಮಾ ಮಸೀದಿ ಅಧ್ಯಕ್ಷ ಮುಸ್ತಫಾ ಹಾಜಿ ಕೆಂಪಿ, ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ರಶೀದ್ ಹಾಜಿ, ಪಜೀರ್ ಗ್ರಾ.ಪಂ ಸದಸ್ಯ ಕೆ.ಮುಹಮ್ಮದ್ ರಫೀಕ್, ಉದ್ಯಮಿ ಬಾತಿಷ್ ಪಾಟ್ರಕೋಡಿ, ಉಮರ್ ಪಜೀರ್, ಪಜೀರ್ ಗ್ರಾ.ಪಂ ಅಧ್ಯಕ್ಷ ಎಂ. ಸೀತಾರಾಂ ಶೆಟ್ಟಿ, ಶಂಸುಲ್ ಉಲಮಾ ಕಾಲೇಜಿನ ಕಾರ್ಯದರ್ಶಿ ಇಸ್ಹಾಕ್ ಹಾಜಿ ನಾಟೆಕಲ್, ಉದ್ಯಮಿ ಬಿ.ಎಚ್ ಮುಹಮ್ಮದ್ ಮೂಡಿಗೆರೆ, ಬೆಳ್ಮ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್‌ನ ನಿರ್ದೇಶಕ ಕೆ.ಯು. ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ, ಪಜೀರ್ ಗ್ರಾ.ಪಂ. ಸದಸ್ಯ ಇಮ್ತಿಯಾಝ್, ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಅಧ್ಯಕ್ಷ ಸಯ್ಯದಾಲಿ ದೇರಳಕಟ್ಟೆ, ಮುಡಿಪು ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್‌ನ ಅಧ್ಯಕ್ಷ ಟಿ.ಆರ್.ಅಬ್ದುರ್ರಝಾಕ್ ಉಪಸ್ಥಿತರಿದ್ದರು.
ದೇರಳಕಟ್ಟೆ ರೇಂಜ್ ಪ್ರಧಾನ ಕಾರ್ಯದರ್ಶಿ ಫಾರೂಕ್ ದಾರಿಮಿ ಗ್ರಾಮಚಾವಡಿ ಸ್ವಾಗತಿಸಿದರು. ನೌಷದ್ ಬದ್ಯಾರ್ ವಂದಿಸಿದರು. ವಿದ್ಯಾರ್ಥಿ ಅದ್ನಾನ್ ಕಾರ್ಯಕ್ರಮ ನಿರೂಪಿಸಿದರು.







