ಮುಶರ್ರಫ್ ವಿರುದ್ಧ ಬಂಧನ ವಾರಂಟ್

ಇಸ್ಲಾಮಾಬಾದ್, ನ. 28: ಬಲೂಚ್ ರಾಷ್ಟ್ರೀಯವಾದಿ ನಾಯಕ ನವಾಬ್ ಅಕ್ಬರ್ ಬುಗ್ತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಝ್ ಮುಶರ್ರಫ್ ವಿರುದ್ಧ ಬಲೂಚಿಸ್ತಾನ್ ಹೈಕೋರ್ಟ್ ಸೋಮವಾರ ಬಂಧನಾದೇಶ ಹೊರಡಿಸಿದೆ.
ಪ್ರಕರಣದಲ್ಲಿ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವೊಂದು ಮಾಜಿ ಅಧ್ಯಕ್ಷರನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ನವಾಬ್ ಅಕ್ಬರ್ ಬುಗ್ತಿ ಅವರ ಮಗ ನವಾಬ್‌ಝಾದ ಜಮೀಲ್ ಬುಗ್ತಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ವಿಭಾಗೀಯ ಪೀಠವೊಂದು ಈ ಆದೇಶ ಹೊರಡಿಸಿದೆ ಎಂದು ‘ಡಾನ್’ ವರದಿ ಮಾಡಿದೆ.
ಬಲೂಚಿಸ್ತಾನದ ಗುಡ್ಡಗಾಡು ತರತಾನಿ ಪ್ರದೇಶದಲ್ಲಿ 2006 ಆಗಸ್ಟ್ 26ರಂದು ನಡೆದ ಸೇನಾ ಕಾರ್ಯಾಚರಣೆಯಲ್ಲಿ ಬುಗ್ತಿ ಮೃತಪಟ್ಟಿದ್ದರು.
Next Story





