ಆಕ್ರೋಶ್ ದಿವಸ್...!!
500 ಮತ್ತು 1,000 ರೂ.ನೋಟುಗಳ ರದ್ದತಿ ವಿರುದ್ಧ ಎಡಪಕ್ಷಗಳು ಸೋಮವಾರ ಕರೆ ನೀಡಿದ್ದ ರಾಷ್ಟ್ರವ್ಯಾಪಿ ಬಂದ್ ಹಾಗೂ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಕರೆ ನೀಡಿದ್ದ ಪ್ರತಿಭಟನೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಯಿತು. ಸಿಪಿಎಂ,ಸಿಪಿಐ ಸೇರಿದಂತೆ ಎಡಪಕ್ಷಗಳು ಪ.ಬಂಗಾಲದಲ್ಲಿ 12 ಗಂಟೆಗಳ ಬಂದ್‌ಗೆ ಕರೆ ನೀಡಿದ್ದರೆ, ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಅವುಗಳೊಂದಿಗೆ ಕೈ ಜೋಡಿಸದೆ ಪ್ರತಿಭಟನೆಗಳನ್ನು ಮಾತ್ರ ನಡೆಸಿತು.ಬಂದ್‌ನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದ ಕಾಂಗ್ರೆಸ್ ಪಕ್ಷವು ‘ಜನ ಆಕ್ರೋಶ ದಿವಸ್’ ಅಂಗವಾಗಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ನಡೆಸಿತು.
Next Story





