ನಗರೋಟಾದಲ್ಲಿ ನಾಲ್ವರು ಉಗ್ರರ ಹತ್ಯೆ, ಮೂವರು ಯೋಧರು ಹುತಾತ್ಮರು

ಶ್ರೀನಗರ, ನ.29: ಜಮ್ಮು ಮತ್ತು ಕಾಶ್ಮೀರ ಹೊರವಲಯದ ನಗರೋಟಾದಲ್ಲಿ ಇಂದು ಬೆಳಗ್ಗೆ ಭಾರತದ ಸೇನಾ ನೆಲೆಯ ಮೇಲೆ ಗ್ರೇನೆಡ್ ದಾಳಿ ನಡೆಸಿದ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಇದೇ ವೇಳೆ ಭಾರತದ ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಬೆಳಗ್ಗೆ 5 ಗಂಟೆಯ ಹೊತ್ತಿಗೆ ಸೇನಾ ಶಿಬಿರಕ್ಕೆ ನುಗ್ಗಿರುವ ಉಗ್ರರು ಗ್ರೇನೆಡ್ ದಾಳಿ ನಡೆಸಿದ್ದಾರೆ. ಆಗ ನಡೆದ ಗುಂಡಿನ ಚಕಮಕಿಯಲ್ಲಿ ದಾಳಿ ನಡೆಸಿದ ಎಲ್ಲ ನಾಲ್ವರು ಉಗ್ರರನ್ನು ಕೊಲ್ಲಲಾಗಿದೆ. ಗುಂಡಿನ ಚಕಮಕಿಯಲ್ಲಿ ಮೂವರು ಯೋಧರು ಬಲಿಯಾಗಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದಾರೆ.
ಮೂವರು ಉಗ್ರರ ಹತ್ಯೆ: ಜಮ್ಮು ಮತ್ತು ಕಾಶ್ಮೀರದ ಸಾಂಬಾದ ಚಾಮ್ಲಿಯಾಲ್ ನಲ್ಲಿ ನುಸುಳಲು ಯತ್ನಿಸಿದ ಮೂವರು ಉಗ್ರರನ್ನು ಗಡಿ ರಕ್ಷಣಾ ಪಡೆ(ಬಿಎಸ್‌ಎಫ್) ಕೊಂದು ಹಾಕಿದೆ .ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಬಿಎಸ್‌ಎಫ್ ಜವಾನ ಸಂಜಯ್ ಕುಮಾರ್ ಎಂಬವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Next Story





