ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ಹೊಸದಿಲ್ಲಿ, ನ.29: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವೈರಲ್ ಜ್ವರದ ಕಾರಣ ಇಂದು ದಿಲ್ಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ಎರಡನೆ ಬಾರಿ ಸೋನಿಯಾ ಗಾಂಧಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
69 ರ ಸೋನಿಯಾ ಜ್ವರ, ಡಿಹೈಡ್ರೋಜನ್, ಮತ್ತು ಭುಜನೋವಿನ ಕಾರಣದಿಂದ ಈ ಮೊದಲು ಆಗಸ್ಟ್3 ರಂದು ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಎಡ ಭುಜಕ್ಕೆ ಆಗಿದ್ದ ಗಾಯಕ್ಕೆ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿತ್ತು.
ಆ.2ರಂದು ಸೋನಿಯಾ ವಾರಣಾಶಿಯಲ್ಲಿ ರೋಡ್ ಶೋ ನಡೆಸುತ್ತಿದ್ದಾಗ ಅಸೌಖ್ಯದಿಂದ ತೊಂದರೆ ಎದುರಿಸಿದ್ದರು. ಅರ್ಧದಲ್ಲೇ ರೋಡ್ ಶೊ ನಿಲ್ಲಿಸಿ ದಿಲ್ಲಿಗೆ ವಾಪಸಾಗಿದ್ದರು.
Next Story





