ಕಂಟ್ರಿ ಇನ್ ಬಾರ್ ಲೈಸೆನ್ಸ್ ರದ್ದು: ಇಬ್ಬರು ಅಧಿಕಾರಿಗಳ ಅಮಾನತು

ಉಡುಪಿ, ನ.29: ಮಾಜಿ ಶಾಸಕ ಕೆ.ರಘುಪತಿ ಭಟ್ ಮಾಲಕತ್ವದ ಮಣಿಪಾಲದ ಕಂಟ್ರಿ ಇನ್ ಹೊಟೇಲ್‌ನಲ್ಲಿರುವ ಬಾರ್ ಪರವಾನಿಗೆಯನ್ನು ಅಬಕಾರಿ ಇಲಾಖೆ ರದ್ದುಗೊಳಿಸಿದೆ.
ಹೊಟೇಲಿನ ಆರನೆ ಮಹಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ದೊರೆತ ಮಾಹಿತಿಯಂತೆ ಅಬಕಾರಿ ಪೊಲೀಸ್ ತಂಡ ಆ.27ರಂದು ಹೊಟೇಲ್‌ಗೆ ದಾಳಿ ನಡೆಸಿತ್ತು. ಈ ವೇಳೆ ಕರ್ತವ್ಯ ಲೋಪ ಎಸಗಿರುವ ಅಬಕಾರಿ ನಿರೀಕ್ಷಕರಾದ ಶುಭಾದ್ ನಾಯಕ್ ಹಾಗೂ ಜ್ಯೋತಿ ಅವರನ್ನು ಅಮಾನುತಗೊಳಿಸಲಾಗಿದೆ.
ಅಕ್ರಮ ಮದ್ಯ ಮಾರಾಟ ಹಾಗೂ ಕರ್ತವ್ಯ ಲೋಪದ ಕುರಿತು ಅಬಕಾರಿ ಡಿವೈಎಸ್ಪಿ ವಿನೋಬ್ ತನಿಖೆ ನಡೆಸಿ ವರದಿ ನೀಡಿದ ಹಿನ್ನೆಲೆಯಲ್ಲಿ ಅಬಕಾರಿ ಜಿಲ್ಲಾಧಿಕಾರಿ ನಾಗೇಶ್ ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದಾರೆ.
Next Story





