ಬೆಳ್ತಂಗಡಿಯಲ್ಲಿ ರಸ್ತೆ ಅಪಘಾತ: ಓರ್ವ ಮೃತ್ಯು

ಬೆಳ್ತಂಗಡಿ, ನ.29: ಬೈಕ್ ಮತ್ತು ಕಾರೊಂದರ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸಹಸವಾರ ಮೃಪಟ್ಟ ಘಟನೆ ಬಳೆಂಜ ಗ್ರಾಮದ ಕಾಪನಡ್ಕ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಮೃತರನ್ನು ಪೆರಾಡಿ ನಿವಾಸಿ ಆಶಿತ್ ಮೋಹನ್ ಎಂದು ಗುರುತಿಸಲಾಗಿದೆ. ಗಾಯಾಳು ಬೈಕ್ ಚಲಾಯಿಸುತ್ತಿದ್ದ ಸುಭಾಷ್ ಗಂಭೀರ ಗಾಯಗೊಂಡಿದ್ದು, ಆತನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕ ಗಾಯಾಳುಗಳನ್ನು ಲಕ್ಷಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಸಾರ್ವಜನಿಕರು ಆ ಕಾರನ್ನು ಬೆನ್ನಟ್ಟಿ ಹೊಸ್ಮಾರು ಸಮೀಪ ತಡೆಹಿಡಿದು ಅದರ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಯ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





