ರಸ್ತೆ ಸುರಕ್ಷತೆ ರಸಪ್ರಶ್ನೆ ಸ್ಪರ್ಧೆ ಸಮಾರೋಪ

ಮೂಡುಬಿದಿರೆ, ನ.29: ಅಪಘಾತ ನಿಯಂತ್ರಣವಾಗಬೇಕಾದರೆ ವಾಹನದಲ್ಲಿ ಉತ್ತಮ ಪ್ರಯಾಣಿಕರೂ ಇರಬೇಕು. ಹತ್ತಾರು ಜನ ಕುಳಿತು ಪ್ರಯಾಣಿಸುವ ಬಸ್‌ನ ಚಾಲಕ ಚಾಲನೆಯ ಸಮಯದಲ್ಲಿ ಮೊಬೈಲ್ ಸಂಭಾಷಣೆಯಲ್ಲಿ ನಿರತನಾದರೆ ಪ್ರಯಾಣಿಕರೇ ಅದನ್ನು ತಡೆಯುವಂತಹ ಸಮಯಪ್ರಜ್ಞೆ ಮೈಗೂಡಿಸಿಕೊಂಡಿರಬೇಕು ಎಂದು ಹಿರಿಯ ಮೋಟಾರು ವಾಹನ ತನಿಖಾಧಿಕಾರಿ ರವಿಶಂಕರ್ ಹೇಳಿದ್ದಾರೆ.
ಮೂಡುಬಿದಿರೆ ಲಯನ್ಸ್ ಕ್ಲಬ್ ಮತ್ತು ಮಂಜುಶ್ರೀ ಡ್ರೈವಿಂಗ್ ಸ್ಕೂಲ್‌ನ ವತಿಯಿಂದ ರಸ್ತೆ ಸುರಕ್ಷತೆಯ ಕುರಿತು ವಿದ್ಯಾರ್ಥಿಗಳಿಗೆ ಏರ್ಪಡಿಸಿದ ರಸಪ್ರಶ್ನೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ರಸ್ತೆ ಸುರಕ್ಷತೆಯ ಕುರಿತು ಅವರು ಮಾಹಿತಿ ನೀಡಿದರು.
ಲಯನ್ಸ್ ಕ್ಲಬ್‌ನ ರಸ್ತೆ ಸುರಕ್ಷತಾ ವಿಭಾಗದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಮೂಡುಬಿದಿರೆ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಮುರಳೀಧರನ್, ಮಂಜುಶ್ರೀ ಡ್ರೈವಿಂಗ್ ಸ್ಕೂಲ್‌ನ ಪ್ರಾಂಶುಪಾಲೆ ಶೋಭಾ ಎಸ್. ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಸಪ್ರಶ್ನೆ ಸ್ಪರ್ಧೆ ಫಲಿತಾಂಶ
ಪ್ರಥಮ - ಶಿರೀಶ್ ಹೆಗ್ಡೆ, ರೋಟರಿ ಸೆಂಟ್ರಲ್ ಸ್ಕೂಲ್, ಮೂಡುಬಿದಿರೆ
ಕಾರ್ತಿಕ್ ಎಸ್.ಎಂ. ಭುವನಜ್ಯೋತಿ ರೆಸಿಡೆನ್ಶಿಯಲ್ ಸ್ಕೂಲ್, ಶಿರ್ತಾಡಿ (ದ್ವಿತೀಯ)
ಶ್ರೇಯಸ್ ಕಾರಂತ್, ರೋಟರಿ ಆಂಗ್ಲ ಮಾಧ್ಯಮ ಶಾಲೆ, ಮೂಡುಬಿದಿರೆ (ತೃತೀಯ)
ಲವಣ್ ಕುಮಾರ್ - ಸರಕಾರಿ ಪ್ರೌಢಶಾಲೆ ಪಡುಕೊಣಾಜೆ, ಮಯೂರ್ ಪಿ.ವೈ. - ಆಳ್ವಾಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಸ್ವಸ್ತಿಕ್ -ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆ, ಮೆಕ್ಲಿನ್ ಮೆನೇಜಸ್ - ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸೃಜನ್ - ಸರಕಾರಿ ಸಂಯುಕ್ತ ಪ್ರೌಢಶಾಲೆ, ಪ್ರಾಂತ್ಯ, ಆದಿತ್ಯ ರಾವ್ - ಆಳ್ವಾಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಪ್ರಥಮ್ - ಬ್ಲೋಸಮ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೆಳುವಾಯಿ (ಸಮಧಾನಕರ)







