ಆಮಿರ್ ಪತ್ನಿಯ 80 ಲಕ್ಷ ರೂ. ಬಂಗಾರ ಕಳವು

ಮುಂಬೈ, ನವೆಂಬರ್ 29: ನಿರ್ದೇಶಕಿ ನಿರ್ಮಾಪಕಿ ಮತ್ತು ಪ್ರಸಿದ್ಧ ನಟ ಆಮಿರ್ ಖಾನ್ ಪತ್ನಿ ಕಿರಣ್ ರಾವ್‌ರಿಗೆ ಸೇರಿದ 80ಲಕ್ಷರೂ. ಮೊತ್ತದ ಚಿನ್ನಾಭರಣಗಳು ಕಳವಾಗಿದೆ ಎಂದು ವರದಿಯಾಗಿದೆ. ಮುಂಬೈಯ ಕಿರಣ್‌ರ ಮನೆಯಿಂದ ಆಭರಣಗಳು ಕದ್ದು ಹೋಗಿದ್ದು, ಕಿರಣ್‌ರಾವ್ ಪೊಲೀಸರಿಗೆ ದೂರನೀಡಿದ್ದಾರೆ.
ಮಲಗುವ ಕೋಣೆಯ ಅಲ್ಮೇರದಲ್ಲಿ ಇರಿಸಲಾಗಿದ್ದ ಒಂದು ಉಂಗುರ , ಡೈಮಂಡ್ ನೆಕ್ಲೆಸ್ ಕಳವಾಗಿದೆ. ಕಾರ್ಟರ್ ರಸ್ತೆಯ ಆಮಿರ್ ಮನೆಯಲ್ಲಿ ಕಿರಣ್ ವಾಸವಾಗಿದ್ದಾರೆ.
ಮನೆಯ ಕೆಲಸಗಾರರು ಮತ್ತು ಶಂಕಿತರನ್ನು ಪೊಲೀಸರು ಪ್ರಶ್ನಿಸುತ್ತಿದ್ದು ತನಿಖೆಯ ಹೆಚ್ಚಿನ ವಿವರಗಳನ್ನು ನೀಡಲು ಪೊಲೀಸರು ನಿರಾಕರಿಸಿದ್ದಾರೆಂದು ವರದಿತಿಳಿಸಿದೆ.
Next Story





