ಸಜಿಪನಡುವನಲ್ಲಿ ಶಾಂತಿ ಸಭೆ

ಬಂಟ್ವಾಳ, ನ.29: ಮುಂಬರುವ ದಿನಗಳಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಸಾರ್ವಜನಿಕರು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಜೀಪನಡು ಗ್ರಾ.ಪಂ.ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸರ ವತಿಯಿಂದ ಸಜೀಪನಡು ಪಂಚಾಯಿತಿ ಕಚೇರಿಯಲ್ಲಿ ಶಾಂತಿ ಸಭೆಯನ್ನು ಮಂಗಳವಾರ ಬೆಳಿಗ್ಗೆ ನಡೆಸಲಾಯಿತು.
ಪಂಚಾಯಿತಿ ಅಧ್ಯಕ್ಷ ನಾಸೀರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ , ಗ್ರಾಮದ ಜನರು ಪರಸ್ಪರ, ಸಹಬಾಳ್ವೆ, ಸೌಹಾರ್ದತೆ, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಶಾಂತಿ ಸಭೆಯನ್ನು ನಡೆಸಲಾಗುತ್ತಿದೆ ಎಂದರು..
ಬಂಟ್ವಾಳ ಗ್ರಾಮಂತರ ಠಾಣೆಯ ಪ್ರೋಬೆಷನರಿ ಎಸೈ ವೀರಯ್ಯ ಡಿ.ಎಸ್. ಮಾತನಾಡಿ, ಸಣ್ಣಪುಟ್ಟ ವಿಚಾರಗಳಿಗೆ ಗಲಾಟೆ ಮಾಡಿ ನಿಮ್ಮ ಬಾಂಧವ್ಯಗಳನ್ನು ಹಾಳುಮಾಡಿಕೊಳ್ಳಬೇಡಿ. ಯಾವುದೇ ಅಪರಾಧಗಳು ನಡೆಯುವ ಬಗ್ಗೆ ಸೂಚನೆ ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ ಎಂದರು.
ಪಂಚಾಯಿತಿ ಉಪಾಧ್ಯಕ್ಷೆ ಸುನೀತಾ ಶಾಂತಿ ಮೋರಾಸ್, ತಾ.ಪಂ.ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಎಎಸೈ ಭಾಸ್ಕರ, ನಿವೃತ್ತ ಶಿಕ್ಷಕ ಆನಂದ ರೈ ವೇದಿಕೆಯಲ್ಲಿದ್ದರು.
Next Story





