ಯುಎಇ ರಾಷ್ಟ್ರೀಯ ದಿನಾಚರಣೆ: ಕೆಎಸ್‌ಸಿಸಿಯಿಂದ ಡಿ.1ರಂದು ‘ವರ್ಣಮಯ ರಾಷ್ಟ್ರ’ ಕಾರ್ಯಕ್ರಮ

ದುಬೈ, ನ.29: ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್(ಕೆಎಸ್‌ಸಿಸಿ)ನವರು ದುಬೈಯ ಕಮ್ಯುನಿಟಿ ಡೆವಲಪ್‌ಮೆಂಟ್ ಅಥಾರಿಟಿ(ಸಿಡಿಎ) ಸಹಯೋಗದಲ್ಲಿ 45ನೆ ಯುಎಇ ರಾಷ್ಟ್ರೀಯ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರಬ್ ಸಂಯುಕ್ತ ಸಂಸ್ಥಾನ(ಯುಎಇ)ದ ಇತಿಹಾಸ, ಸಂಸ್ಕೃತಿ, ಪರಂಪರೆ ಇತ್ಯಾದಿಯನ್ನು ಬಿಂಬಿಸುವಂತಹ ವರ್ಣಚಿತ್ರಗಳ ರಚನೆ ‘ವರ್ಣಮಯ ರಾಷ್ಟ್ರ’ ಕಾರ್ಯಕ್ರಮಕ್ಕೆ ಕಲಾವಿದರನ್ನು ಆಹ್ವಾನಿಸಲಾಗಿದೆ. ಚಿತ್ರಕಲೆ ರಚನೆ ಕಾರ್ಯಕ್ರಮವು ಡಿ.1ರಂದು ಸಂಜೆ 4ಕ್ಕೆ ಇಲ್ಲಿನ ಝಬೀಲ್ ಪಾರ್ಕ್‌ನಲ್ಲಿ ನಡೆಯಲಿದೆ. ಇದರಲ್ಲಿ ಆಯ್ಕೆಯಾಗುವ ಚಿತ್ರಗಳನ್ನು ಯುಎಇ ರಾಷ್ಟ್ರೀಯ ದಿನಾಚರಣೆಯಂದು ಪ್ರದರ್ಶನಕ್ಕಿಡಲಾಗುವುದು. ಹಾಗೂ ಚಿತ್ರ ರಚಿಸುವ ಎಲ್ಲ ಕಲಾವಿದರನ್ನು ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.
ಆಸಕ್ತ ಕಲಾವಿದರು ದೂ.ಸಂ.: 050 7772143/056 4646502 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story





