ಬಾಲಕನ ರುಂಡ ಚೆಂಡಾಡಿ ದೇವಿಗೆ ಬಲಿಕೊಟ್ಟ ಮಂತ್ರವಾದಿ ಪೋಲೀಸರ ವಶಕ್ಕೆ

ಮುಂಡಗೋಡ,ನ. 29 : ದೇವಿಯ ಬೇಡಿಕೆಯನ್ನು ಈಡೇರಿಸಲು 17 ವರ್ಷದ ಅಮಾಯಕ ಬಾಲಕನ ರುಂಡಚಂಡಾಡಿ ಕೊಲೆ ಮಾಡಿದ ವಿಕೃತ ಮನಸ್ಸಿನ ಕೊಲೆಗಾರನನ್ನು ಪೊಲೀಸರು ಸೋಮವಾರ ತಮ್ಮ ವಶಕ್ಕೆ ಪಡೆದಿದ್ದಾರೆ.
ಅತ್ಯಂತ ಕ್ರೂರವಾಗಿ ಕೊಲೆಮಾಡಿ , ಈಗ ಪೊಲೀಸರ ವಶದಲ್ಲಿರುವವನು ಶಿರಸಿ ತಾಲೂಕಿನ ಬದನಗೋಡ ಗ್ರಾಮದ ರಮೇಶ ದಾಸ್ ಗೊಲ್ಲರ ಎಂದು ತಿಳಿದು ಬಂದಿದೆ.
ಈತ ಕಳೆದ ನ.19 ರಂದು ಮಳಗಿ ಸಮೀಪದ ಧರ್ಮಾ ಜಲಾಶಯದಲ್ಲಿ ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮದ ಇಮ್ರಾನ್ ನಧಾಫ್ ಎನ್ನುವ ಹದಿನೇಳು ವರ್ಷದ ಬಾಲಕನನ್ನು ರುಂಡ ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿದ್ದನ್ನು ಪೊಲೀಸರಿಗೆ ಒಪ್ಪಿಕೊಂಡಿದ್ದಾನೆ.
ಪೊಲೀಸರು ಹಲವಾರು ಮಜಲುಗಳಿಂದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಯ ಹಿನ್ನಲೆಯ ವಿವರ; ಆರೋಪಿ ಬದನಗೋಡ ಗ್ರಾಮದ ರಮೇಶ್ ದಾಸ್ ಗೊಲ್ಲರ್ ಈತ ಪಕ್ಕಾ ದುರ್ಗಾದೇವಿಯ ಪರಮ ಭಕ್ತ.. ಈತನ ವರ್ತನೆಯಿಂದ ಎರಡು ಜನ ಹೆಂಡತಿಯರು ಇತನನ್ನು ಬಿಟ್ಟು ಹೋಗಿದ್ದಾರೆ.
ನವೆಂಬರ 19 ಮಧ್ಯಾಹ್ನ ಹಾಳಾದ ಕನಸಿನಲ್ಲಿ ದೇವಿಯೆ ಬಂದು ನನಗೆ ಒಂದು ಬಲಿ ಬೇಕು ಎಂದು ಹೇಳಿದಳಂತೆ ಆಕ್ಷಣವೆ ನಿದ್ದೆಕಣ್ಣಲ್ಲಿ ಮನೆಯಲ್ಲಿರುವ ಕತಿತಿಯನ್ನು ತೆಗೆದುಕೊಂಡು ತನ್ನ ಗ್ರಾಮದಿಂದ ಅರಣ್ಯ ಮಾರ್ಗವಾಗಿ ಮಳಗಿ ಧರ್ಮಾಜಲಾಶಯಕ್ಕೆ ಬಂದಿದ್ದಾನೆ. ಅವನು ಬರುತಿತಿರುವ ಮಾರ್ಗದಲ್ಲಿ ಯಾರೇ ಬರುತಿತಿದ್ದರೋ ಅವರ ಮೇಲೆ ಕತಿತಿಯನ್ನು ಪ್ರಯೋಗಸುತ್ತಿದ್ದ ಎಂದು ಹೇಳಲಾಗಿದೆ.
ಪಾಪ ಬಡಪಾಯಿ ದಾಸನಕೊಪ್ಪ ಗ್ರಾಮದ ಇಮ್ರಾನ್ ನದಾಫ್ ಎನ್ನುವ ಹದಿನೇಳು ವರ್ಷದ ಬಾಲಕ ಮೀನು ಹಿಡಿಯಲು ನೀರಿನಲ್ಲಿ ಗಾಳ ಬೀಸಿಕೊಂಡು ಕುಳಿತಿದ್ದಾನೆ.ಅವನ ಹಿಂಬದಿಯಿಂದ ಬಂದ ಈತ ಮಾತನಾಡುವ ನೆಪದಲ್ಲಿ ಕತ್ತಿಯಿಂದ ಕೊರಳಿಗೆ ಹೊಡೆದಿದ್ದಾನೆ. ಭಯಭೀತನಾದ ಇಮ್ರಾನ ತಪ್ಪಿಸಿಕೊಳ್ಳಲು 200-300 ಮೀಟರನಷ್ಟು ದೂರ ಓಡಿದರೂ ಆತನನ್ನು ಕತ್ತಿಯಿಂದ ರುಂಡ ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ.
ಕೊಲೆಯಾದ ನಂತರ ಭಯಭೀತನಾದ ಕೊಲೆಗಾರ ಅರಣ್ಯ ಪ್ರದೇಶಕ್ಕೆ ಬಂದು ಕತ್ತಿಯನ್ನು ಒಂದು ಮರಕ್ಕೆ ಹೊಡೆದು ತನ್ನ ಪ್ಯಾಂಟನ್ನು ಮನೆಯೊಂದರಲ್ಲಿ ಹಾಗೂ ಶರ್ಟನ್ನು ಊರಕೆರೆಯಲ್ಲಿ ಮುಚ್ಚಿಟ್ಟು ಸ್ನಾನ ಮಾಡಿ ಹೋಗಿದ್ದಾನೆ. ತಾನು ಮಾಡಿರುವ ಕೊಲೆ ಯಾರಿಗು ಗೊತ್ತಾಗುವುದಿಲ್ಲ ಎಂದು 2 ದಿನ ಊರುಬಿಟ್ಟು ಹೊಗಿದ್ದಾನೆ.
ಪೊಲೀಸರು ಮಾತ್ರ ಸುಮ್ಮನೆ ಕುಳಿತುಕೊಳ್ಳದೆ ಈತನ ಶೋಧಕ್ಕಾಗಿ ಬಲೆ ಬೀಸಿದ್ದರು. 9 ದಿನದ ನಂತರ ಪೊಲೀಸರ ಬಲೆಯಲ್ಲಿ ಸಿಲುಕಿಕೊಂಡಿದ್ದು ಸತ್ಯಾಸತ್ಯತೆಯ ಎಳೆಗಳನ್ನು ಪೊಲೀಸರ ಎದುರು ಬಿಚ್ಚಿಟ್ಟಿದ್ದಾನೆ. ತಾಲೂಕಿನ ಜನತೆಯನ್ನು ಬೆಚ್ಚಿಬೀಳಿಸಿದ್ದ ಮಳಗಿ ತಾಲೂಕಿನ ಧರ್ಮಾ ಜಲಾಶಯದ ಹಿನ್ನೀರಿನ ಕಾಲುವೆಯಲ್ಲಿ ಬಾಲಕನ ಕೊಲೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.
ಒಂದು ಮಗ್ಗಲಿನಿಂದ ಇದನ್ನು ಒಪ್ಪಿಕೊಂಡರೂ ,ಇನ್ನೊಂದು ಮಗ್ಗಲಿನಿಂದ ನೋಡಿದರೆ ಒಬ್ಬನೇ ಈ ಕೃತ್ಯಮಾಡಿರಲಾರ ; ಇನ್ನೂ ಕೆಲವರು ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಇನ್ನಷ್ಟು ತನಿಖೆ ನಡೆಸಿದರೆ ಕೊಲೆಯಲ್ಲಿ ಭಾಗವಹಿಸಿದವರು ಯಾರೂ ಯಾವ ಉದ್ದೇಶಕ್ಕೆ ಕೊಲೆ ಮಾಡಿರಬಹುದು ಎಂದು ತಿಳಿಯಬಹುದಾಗಿದೆ.







