Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಬ್ರೆಜಿಲ್‌ನ ಫುಟ್ಬಾಲ್ ಆಟಗಾರರು...

ಬ್ರೆಜಿಲ್‌ನ ಫುಟ್ಬಾಲ್ ಆಟಗಾರರು ಸೇರಿದಂತೆ 76 ಜನರ ಸಾವು

ಕೊಲಂಬಿಯಾದಲ್ಲಿ ಭೀಕರ ವಿಮಾನ ಅಪಘಾತ

ವಾರ್ತಾಭಾರತಿವಾರ್ತಾಭಾರತಿ29 Nov 2016 8:07 PM IST
share
ಬ್ರೆಜಿಲ್‌ನ ಫುಟ್ಬಾಲ್ ಆಟಗಾರರು ಸೇರಿದಂತೆ 76 ಜನರ ಸಾವು

ಮೆಡೆಲಿನ್,ನ.29: ಬ್ರೆಜಿಲ್‌ನ ಫಸ್ಟ್ ಡಿವಿಜನ್ ಫುಟ್ಬಾಲ್ ತಂಡದ ಆಟಗಾರರನ್ನು ಹೊತ್ತೊಯ್ಯುತ್ತಿದ್ದ ಚಾರ್ಟರ್ಡ್ ವಿಮಾನವೊಂದು ಕೊಲಂಬಿಯಾದ ಮೆಡೆಲಿನ್ ಸಮೀಪ ಪತನಗೊಂಡಿದ್ದು, ಅದರಲ್ಲಿದ್ದ ಒಟ್ಟು 81 ಜನರ ಪೈಕಿ 76 ಜನರು ದಾರುಣ ಸಾವನ್ನಪ್ಪಿದ್ದಾರೆ. ಐವರು ಪವಾಡಸದೃಶವಾಗಿ ಬದುಕುಳಿದಿದ್ದಾರೆ.

ಚಾರ್ಟರ್ ವಿಮಾನಯಾನ ಸಂಸ್ಥೆ ಲಾ ಮಿಯಾ ನಿರ್ವಹಿಸುತ್ತಿದ್ದ ಬ್ರಿಟಿಷ್ ಎರೋಸ್ಪೇಸ್ 146 ವಿಮಾನವು ಸೋಮವಾರ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಹಾರಾಟದಲ್ಲಿದ್ದಾಗ ವಿದ್ಯುತ್ ವೈಫಲ್ಯದಿಂದಾಗಿ ತುರ್ತು ಸ್ಥಿತಿಯನ್ನು ಘೋಷಿಸಿತ್ತು ಎಂದು ವಾಯುಯಾನ ಅಧಿಕಾರಿಗಳು ತಿಳಿಸಿದ್ದಾರೆ.
ಬೊಲಿವಿಯಾದ ಸಾಂತಾಕ್ರುಝ್ ವಿಮಾನ ನಿಲ್ದಾಣದಿಂದ ಹೊರಟಿದ್ದ ಈ ವಿಮಾನವು ದಕ್ಷಿಣ ಬ್ರೆಜಿಲ್‌ನ ಚಾಪೆಕೊದ ಫುಟ್ಬಾಲ್ ತಂಡವನ್ನು ಹೊತ್ತುಕೊಂಡು ಮೆಡೆಲಿನ್‌ನ ಜೋಸ್ ಮಾರಿಯಾ ಕೊರ್ಡೊವಾ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿತ್ತು.

ಸಾವೋ ಪೌಲೊದಿಂದ ತನ್ನ ಪ್ರಯಾಣವನ್ನು ಆರಂಭಿಸಿದ್ದ ಚಾಪೆಕೊನೀಸ್ ರಿಯಲ್ ಫುಟ್ಬಾಲ್ ತಂಡವು ಮೆಡೆಲಿನ್‌ನಲ್ಲಿ ಬುಧವಾರ ಕೋಪಾ ಸುಡಾಮೆರಿಕಾನಾ ಲೀಗ್ ಪಂದ್ಯಾವಳಿಯಲ್ಲಿ ಸ್ಥಳೀಯ ಅಥ್ಲೆಟಿಕೊ ನ್ಯಾಷನಲ್ ತಂಡದ ವಿರುದ್ಧ ಫೈನಲ್‌ನ ಮೊದಲ ಪಂದ್ಯವನ್ನು ಆಡಲಿತ್ತು. ತಂಡವು ಬೊಲಿವಿಯಾದಲ್ಲಿ ವಿಮಾನವನ್ನು ಬದಲಿಸಿತ್ತೇ ಅಥವಾ ಸಾವೊ ಪಾವ್ಲೊದಿಂದ ಹೊರಟಿದ್ದ ವಿಮಾನವೇ ಬೊಲಿವಿಯಾದಲ್ಲಿ ನಿಂತು ಪ್ರಯಾಣವನ್ನು ಮುಂದುವರಿಸಿತ್ತೇ ಎನ್ನುವುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

 ಸಂಭ್ರಮಾಚರಣೆಯಾಗಬೇಕಿದ್ದುದು ದುರಂತವಾಗಿಬಿಟ್ಟಿದೆ ಎಂದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮೆಡೆಲಿನ್ ಮೇಯರ್ ಫೆಡೆರಿಕೊ ಗುಟಿರೆಝ್ ಹೇಳಿದರು.

ನಮ್ಮ ಆಟಗಾರರು,ಅಧಿಕಾರಿಗಳು,ಪತ್ರಕರ್ತರು ಮತ್ತು ನಮ್ಮ ತಂಡದೊಂದಿಗಿದ್ದ ಇತರ ಅತಿಥಿಗಳ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಚಾಪೆಕೋನಿಸ್ ರಿಯಲ್ ಕ್ಲಬ್ ತನ್ನ ಫೇಸ್‌ಬುಕ್ ಪುಟದಲ್ಲಿ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.

ಇಡೀ ಚಾಪೆಕೊದ ನಿವಾಸಿಗಳಿಗೆ ಸಂತಾಪಗಳನ್ನು ಸೂಚಿಸಿರುವ ಬ್ರೆಜಿಲ್ ಮತ್ತು ದಕ್ಷಿಣ ಅಮೆರಿಕಾದ ಸಾಕರ್ ಫೆಡರೇಷನ್ ತನ್ನ ಅಧ್ಯಕ್ಷ ಲುಯಿಸ್ ಡೊಮಿಂಗೋಝ್ ಮೆಡೆಲಿನ್‌ಗೆ ಧಾವಿಸಿದ್ದಾರೆ ಎಂದು ಹೇಳಿದೆ. ಮುಂದಿನ ನಿರ್ದೇಶದವರೆಗೆ ಎಲ್ಲ ಫುಟ್ಬಾಲ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅದು ತಿಳಿಸಿದೆ.

ವಿಮಾನವು ಮೆಡೆಲಿನ್ ತಲುಪಲು ಇನ್ನೇನು ಐದು ನಿಮಿಷಗಳಿವೆ ಎನ್ನುವಾಗ ಲಾ ಸೆಜಾ ಮತ್ತು ಲಾ ಯೂನಿಯನ್ ನಡುವಿನ ಪರ್ವತಮಯ ಪ್ರದೇಶದಲ್ಲಿ ಪತನಗೊಂಡಿದೆ. ಭಾರೀ ಮಳೆಯಿಂದಾಗಿ ನಸುಕಿನ ಮೂರು ಗಂಟೆಯ ಸುಮಾರಿಗೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿತ್ತಾದರೂ ಆ ವೇಳೆಗಾಗಲೇ ವಿಮಾನದ ಅವಶೇಷಗಳ ನಡುವೆ ಬದುಕುಳಿದಿದ್ದ ಐವರನ್ನು ರಕ್ಷಿಸಲಾಗಿತ್ತು.

ದುರಂತ ಸಂಭವಿಸಿದ ತಕ್ಷಣ ಅಧಿಕಾರಿಗಳು ಮತ್ತು ರಕ್ಷಣಾ ತಂಡಗಳ ಕಾರ್ಯಾ ಚರಣೆ ಆರಂಭಗೊಂಡಿತ್ತಾದರೂ ಕಳಪೆ ಗೋಚರತೆಯಿಂದಾಗಿ ವಾಯುಪಡೆಯ ಹೆಲಿಕಾಪ್ಟರ್ ಇಳಿಯಲು ಸಾಧ್ಯವಾಗದೆ ಮರಳುವಂತಾಗಿತ್ತು. ಆ್ಯಂಬುಲನ್ಸ್‌ಗಳು ಮತ್ತು ಇತರ ರಕ್ಷಣಾ ತಂಡಗಳು ಸ್ಥಳವನ್ನು ತಲುಪಲು ಸಾಧ್ಯವಾಗುವಂತೆ ಅಧಿಕಾರಿಗಳು ಸುದ್ದಿಗಾರರನ್ನು ರಸ್ತೆಗಳಿಂದ ದೂರವೇ ತಡೆದು ನಿಲ್ಲಿಸಿದ್ದರು.

ವಿಮಾನದಲ್ಲಿ 72 ಪ್ರಯಾಣಿಕರು ಮತ್ತು 9 ಸಿಬ್ಬಂದಿಗಳಿದ್ದರು. ರಕ್ಷಿಸಲ್ಪಟ್ಟವರಲ್ಲಿ ಫುಟ್ಬಾಲ್ ತಂಡದ ರಕ್ಷಣಾ ಆಟಗಾರ ಅಲನ್ ರಷೆಲ್ ಸೇರಿದ್ದಾರೆ.
ಪುಟ್ಟ ನಗರ ಚಾಪೆಕೊದ ಚಾಪೆಕೊನಿಸ್ ರಿಯಲ್ ತಂಡವು ಅಲ್ಪ ಅವಧಿಯಲ್ಲೇ ಅದ್ಭುತ ಸಾಧನೆಯನ್ನು ಮಾಡಿತ್ತು. 1970ರ ಬಳಿಕ 2014ರಲ್ಲಿ ಮೊದಲ ಬಾರಿಗೆ ಬ್ರೆಜಿಲ್‌ನ ಫಸ್ಟ್ ಡಿವಿಜನ್ ಪ್ರವೇಶಿಸಿದ್ದ ಅದು ಕಳೆದ ವಾರ ಕೋಪಾ ಸುಡಾಮೆರಿಕಾನಾ ಲೀಗ್ ಪಂದ್ಯಾವಳಿಯಲ್ಲಿ ಅರ್ಜೆಂಟಿನಾದ ಎರಡು ಬಲಿಷ್ಠ ತಂಡಗಳು ಮತ್ತು ಕೊಲಂಬಿಯಾದ ಕಿರಿಯ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು.

ಚಾಪಿಕೊನಿಸ್ ತಂಡದ ದುರಂತ ಅಂತ್ಯ
 ಇಲ್ಲಿನ ಮೆಡಲಿನ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮಡಿದ 76 ಪ್ರಯಾಣಿಕರಲ್ಲಿ ಬ್ರೆಝಿಲ್‌ನ ಚಾಪಿಕೊನಿಸ್ ರಿಯಲ್ ಫುಟ್ಬಾಲ್ ತಂಡದ ಬಹುತೇಕ ಆಟಗಾರರು ಸೇರಿದ್ದಾರೆ. ಬುಧವಾರ ನಿಗದಿಯಾಗಿರುವ ಅಥ್ಲೆಟಿಕೊ ನ್ಯಾಷನಲ್ ನಾಸಿಯೋನಲ್ ವಿರುದ್ಧ ಪಂದ್ಯವನ್ನಾಡಲು ತಂಡದ ಆಟಗಾರರು ಮೆಡಲಿನ್‌ಗೆ ತೆರಳುತ್ತಿದ್ದಾಗ ವಿಮಾನ ದುರಂತದಿಂದಾಗಿ ಮೃತಪಟ್ಟಿದ್ದಾರೆ. ಒಟ್ಟು 22 ಆಟಗಾರರು ವಿಮಾನದಲ್ಲಿದ್ದರು. ಈ ಪೈಕಿ ಇಬ್ಬರು ಆಟಗಾರರು ಬದುಕುಳಿದಿದ್ದಾರೆ.ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. 27ರ ಹರೆಯದ ಡಿಫೆಂಡರ್ ಆ್ಯಲನ್ ರಶಲ್ ಬದುಕುಳಿದಿದ್ದಾರೆ ಎಂಬ ಅಧಿಕೃತ ಮಾಹಿತಿ ಲಭಿಸಿದೆ. ಅವರನ್ನು ಲಾ ಸೆಜಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಲ್ ಕೀಪರ್ ಜಾಕ್ಸನ್ ಫಾಲ್ಮನ್ ಮತ್ತು ಫಿಸಿಯೋಥೆರಪಿಸ್ಟ್ ರಫೇಲ್ ಗೊಬಾಟೊ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೊಬ್ಬ ಗೋಲ್ ಕೀಪರ್ ಡಾನಿಲೊ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
1970ರ ದಶಕದ ಬಳಿಕ ಚಾಪಿಕೊನಿಸ್ ತಂಡ 2014ರಲ್ಲಿ ಮೊದಲ ಬಾರಿ ಬ್ರೆಝಿಲ್‌ನ ಫಸ್ಟ್ ಡಿವಿಜನ್ ತಂಡವಾಗಿ ಮಾನ್ಯತೆ ಗಿಟ್ಟಿಸಿಕೊಂಡಿತ್ತು. ಕಳೆದವಾರ ಅರ್ಜೆಂಟೀನದ ಸ್ಯಾನ್ ಲೊರೆನ್‌ರೊ ತಂಡವನ್ನು ಸೋಲಿಸಿ ಕೂಪ ಸುಡಾಮೆರಿಕನ್ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು.
1973ರಲ್ಲಿ ಉದಯಿಸಿದ ಚಾಪಿಕೊಯೆನ್ ಆದಾಯದಲ್ಲಿ ಬ್ರೆಝಿಲ್‌ನ 21ನೆ ಬಲಿಷ್ಠ ಫುಟ್ಬಾಲ್ ಕ್ಲಬ್‌ಗಳಲ್ಲಿ ಒಂದಾಗಿದೆ. 2015ರಲ್ಲಿ ವಾರ್ಷಿಕ 13.5 ಮಿಲಿಯನ್ ಡಾಲರ್ ಆದಾಯ ಗಳಿಸಿತ್ತು.
 ಹಿಂದೆ ನಡೆದ ಫುಟ್ಬಾಲ್ ಆಟಗಾರರು ಮೃತಪಟ್ಟ ವಿಮಾನ ದುರಂತಗಳು
*1958, ಫೆ.6ರಂದು ರಲ್ಲಿ ಮ್ಯೂನಿಕ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ 23 ಮಂದಿ ಮೃತಪಟ್ಟಿದ್ದರು. ಇವರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್‌ನ 8 ಆಟಗಾರರು ಸಾವಿಗೀಡಾಗಿದ್ದರು. ಸರ್ ಬಾಬ್ ಚಾರ್ಲ್‌ಟನ್ ಮತ್ತು ಸರ್ ಮ್ಯಾಟ್ ಬಸ್ಬ್ಬಿ ಬದುಕುಳಿದಿದ್ದರು. ಈ ವಿಮಾನ ದುರಂತ ‘ಮ್ಯೂನಿಕ್ ಏರ್ ಡಿಸಾಸ್ಟರ್’ ಎಂದು ಫುಟ್ಬಾಲ್ ದುರಂತದ ಇತಿಹಾಸದಲ್ಲಿ ಗುರುತಿಸಿಕೊಂಡಿದೆ.
 *1949,ಮೇ 4ರಂದು ಟುರಿನ್‌ನಲ್ಲಿ ವಿಮಾನ ಪತನಗೊಂಡು ಇಟಲಿಯ ಫುಟ್ಬಾಲ್ ಕ್ಲಬ್ ಟೊರಿನೊ ತಂಡದ ಎಲ್ಲ ಸದಸ್ಯರು ಸಾವಿಗೀಡಾಗಿದ್ದರು.ಪೋರ್ಚುಗಲ್‌ನ ಲಿಸ್ಬನ್‌ನಲ್ಲಿ ಬೆನ್ಫಿಕಾ ತಂಡದ ವಿರುದ್ಧ ಸೌಹಾರ್ಧ ಪಂದ್ಯದಲ್ಲಿ ಆಡಿ ವಾಪಸಾಗುತ್ತಿದ್ದಾಗ ಈ ದುರಂತ ಸಂಭವಿಸಿತ್ತು.
*1987 ಡಿ.8ರಂದು ್ಲ ವಿಮಾನ ಪೆಸಿಫಿಕ್ ಸಾಗರದಲ್ಲಿ ಪತನಗೊಂಡ ಪರಿಣಾಮವಾಗಿ ಪೆರುವಿನ ಕ್ಲಬ್ ಅಲಿಯಾಂಝ ಲಿಮಾ ತನ್ನ ಪ್ರಥಮ ತಂಡದ ಎಲ್ಲ ಆಟಗಾರರನ್ನು ಕಳೆದುಕೊಂಡಿತ್ತು.
    *1983:ಎ.28ರಂದು ಝಾಂಬಿಯಾದ ರಾಷ್ಟ್ರೀಯ ತಂಡ ಸೆನಗಲ್ ವಿರುದ್ಧ ವಿಶ್ವಕಪ್ ಅರ್ಹತಾ ಪಂದ್ಯವನ್ನಾಡಲು ಡಾಕ್ರಾಗೆ ತೆರಳುತ್ತಿದ್ದಾಗ ವಿಮಾನ ಗಾಬಾನ್‌ನಲ್ಲಿ ಅಟ್ಲಾಂಟಿಕ್ ಸಮುದ್ರಕ್ಕೆ ಬಿದ್ದ ಪರಿಣಾಮವಾಗಿ 18 ಆಟಗಾರರು ಮತ್ತು 5 ಅಧಿಕಾರಿಗಳು ಸಾವಿಗೀಡಾಗಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X