ಅಕ್ರಮ ಸಂಬಂಧ : ರಾಜಿಪಂಚಾಯತಿಗೆ ಬಂದವನ ಸಾವು
.jpg)
ಮೃತಪಟ್ಟ ದುರ್ದೈವಿ ರಾಕೇಶ್
ಹಾಸನ,ನ.29: ಸಂಸಾರದಲ್ಲಿ ಬಿರುಕು ಬಿಟ್ಟು ಬೇರೆಯಾಗಿದ್ದ ದಂಪತಿಗಳ ಜಗಳ ಬಿಡಿಸಲು ಬಂದ ಸ್ನೇಹಿತನೋರ್ವನಿಗೆ ಚಾಕು ಇರಿತದಿಂದ ಸಾವನಪ್ಪಪಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ತನ್ನ ಸ್ನೇಹಿತನ ಜಗಳ ಬಿಡಿಸಲು ಹೋಗಿ ಮೃತಪಟ್ಟ ದುರ್ದೈವಿ ರಾಕೇಶ್ (18). ಮೊದಲ ಗಂಡ ವಾಹನ ಅಪಘಾತದಲ್ಲಿ ಸಾವನಪ್ಪಿದ ನಂತರ ಗಾರೆ ಕೆಲಸ ಮಾಡುವ ರಾಜಘಟ್ಟದ ನಿವಾಸಿ ಸ್ವಾಮಿ ಎಂಬವರು ಕಳೆದ 6 ವರ್ಷಗಳ ಹಿಂದೆ ಮದುವೆಯಾಗಿ ಚೆನ್ನಾಗಿಯೇ ಸಂಸಾರ ಸಾಗಿಸುತ್ತಿದ್ದರು. ಇವರಿಗೆ ಸಮರ್ಥ್ ಎಂಬ ಗಂಡು ಮಗು ಕೂಡ ಇದ್ದು, ಆದರೆ ಪತ್ನಿ ಅನಿತಾ ಆಗಾಗ್ಗೆ ಮದ್ಯಪಾನ ಮಾಡುತ್ತಿದ್ದು, ಈ ವೇಳೆ ಅವರಿಬ್ಬರ ಸಂಸಾರದಲ್ಲಿ ಬಿರುಕು ಬಿಟ್ಟಿತ್ತು. ಕಳೆದ ಮೂರು ವರ್ಷಗಳ ಹಿಂದೆ ಇಬ್ಬರು ವಿಚ್ಛೇದನ ಕೂಡ ಪಡೆದು ಬೇರೆ ಬೇರೆಯಾಗಿದ್ದರು. ನಂತರದ ದಿವಸಗಳಲ್ಲಿ ಹುಬ್ಬಳ್ಳಿ ಮೂಲದ ಅಣ್ಣಪ್ಪ ಎಂಬವನು ಮತ್ತು ವಿಚ್ಛೇದಿತ ಅನಿತಾ ಪರಸ್ಪರ ಪ್ರೀತಿಸಿ ಕಾಲ ಕಳೆಯುತ್ತಿದ್ದರು. ರಾಜಘಟ್ಟ ಸಮೀಪ ಸೋಮವಾರ ಕನ್ನಡ ರಾಜ್ಯೋತ್ಸವ ವೀಕ್ಷಣೆ ಮಾಡುತ್ತಿದ್ದ ಅಣ್ಣಪ್ಪ ಮತ್ತು ಅನಿತಾ ಇಬ್ಬರನ್ನು ಸ್ವಾಮಿ ನೋಡಿದ್ದಾನೆ. ಈ ವೇಳೆ ಇವರಿಬ್ಬರು ಹಳೆ ಗಂಡನ ಬಗ್ಗೆ ಬೇಡವಾದ ಮಾತನ್ನು ಆಡುತಿದ್ದನ್ನು ಕೇಳಿಸಿಕೊಂಡ ಸ್ವಾಮಿ ಕೊಪಗೊಂಡು ಉದ್ದೇಶಪೂರ್ವಕವಾಗಿಯೇ ಕಾದಿದ್ದಾನೆ. ದಾರಿಯಲ್ಲಿ ರಾತ್ರಿ ಪ್ರಿಯಕರರು ಇಬ್ಬರು ಬರುವಾಗ ಗಲಾಟೆ ತೆಗೆದು ಕೂಗಾಡಿದ್ದಾರೆ. ಜಗಳ ಬಿಡಿಸಲು ಬಂದ ರಾಕೇಶ್ಗೆ ಅಣ್ಣಪ್ಪ ತಂದಿದ್ದ ಚಾಕುವಿನಿಂದ ಎದೆಗೆ ಇರಿದ ಪರಿಣಾಮ ತೀವ್ರ ಗಾಯವಾಗಿ ರಕ್ತ ಸುರಿದಿದ್ದರಿಂದ ಕೆಲ ಕ್ಷಣಗಳಲ್ಲೆ ಸಾವನಪ್ಪಿದ್ದ. ಸ್ವಾಮಿ ಮೇಲು ಚಾಕುವಿನಿಂದ ಹಿರಿತವಾಗಿ ಅಲ್ಲಲ್ಲಿ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದ ಬಡಾವಣೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಅನಿತಾ ಮತ್ತು ಮೂರನೇ ಗಂಡ ಅಣ್ಣಪ್ಪ ಇಬ್ಬರನ್ನು ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.





