ಎನ್.ಎಸ್.ಎಸ್ ಶಿಬಿರದ ಸಮಾರೋಪ ಸಮಾರಂಭ

ಕಾರ್ಕಳ,ನ.29 : ನಲ್ಲೂರು ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾ.ಸೇ.ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು.
ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಸಮಾರೋಪ ಭಾಷಣ ಮಾಡಿ, ಶಿಬಿರಾರ್ಥಿಗಳು ಸಮಯ ಪಾಲನೆ, ಶಿಸ್ತು, ಹೊಂದಿಕೊಂಡು ಬದುಕುವ ರೀತಿ, ಸ್ವತಂತ್ರವಾಗಿ ಕಾರ್ಯಕ್ರಮಗಳನ್ನು ನಿರ್ವಹಿಸಿ ಸಭಾ ಕಂಪನದಿಂದ ವಿಮೋಚನೆ ಹೀಗೆ ವ್ಯಕ್ತಿತ್ವ ವಿಕಸನದಂತಹ ಗುಣಗಳನ್ನು ಕಲಿಯುತ್ತೀರಿ. ಇದನ್ನು ಜೀವನದಲ್ಲಿ ಅಳವಡಿಸಿಕೊಂಡು ರಾಷ್ಟ್ರದ ಉತ್ತಮ ಪ್ರಜೆಗಳಾಗಬೇಕು ಎಂದರು. ಕಾಲೇಜು ಪ್ರಾಂಶುಪಾಲ ಪ್ರೊ. ಶ್ರೀವರ್ಮ ಅಜ್ರಿ ಅಧ್ಯಕ್ಷತೆ ವಹಿಸಿದ್ದರು.
ನಲ್ಲೂರು ಗ್ರಾ.ಪಂ. ಉಪಾಧ್ಯಕ್ಷೆ ಲತಾ ಪೂಜಾರಿ, ನಲ್ಲೂರಿನ ನ್ಯಾಯವಾದಿ ಪದ್ಮಪ್ರಸಾದ್ ಜೈನ್, ಹೊಸ್ಮಾರು ಸಿ.ಆರ್.ಪಿ ಕೃಷ್ಣಕುಮಾರ್, ಕಾಲೇಜಿನ ಪೋಷಕರ ವೇದಿಕೆ ಅಧ್ಯಕ್ಷರಾದ ಕೃಪಾ ಫಡ್ಕೆ, ನಲ್ಲೂರು ಗ್ರಾ.ಪಂ ಸದಸ್ಯೆ ರತ್ನ ಆಚಾರ್ಯ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಉಮಾನಾಥ ಸೇರ್ವೆಗಾರ್ ಹಾಗೂ ಮುಖ್ಯ ಶಿಕ್ಷಕ ನಾಗೇಶ್, ನಲ್ಲೂರು ಗ್ರಾಮಸ್ತರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಕಾಲೇಜಿನ ಬೋಧಕ ಬೋಧಕೇತರ ವರ್ಗ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ವಿಜೇತ, ಸಾಗರ್, ಪ್ರಿಯ, ವಿಜಯ್ ಹಾಗು ಶ್ರೇಯ ಅನಿಸಿಕೆ ವ್ಯಕ್ತಪಡಿಸಿದರು. ಸಹ ಶಿಬಿರಾಧಿಕಾರಿ ಕೃಷ್ಣಮೂರ್ತಿ ವೈದ್ಯ ಸ್ವಾಗತಿಸಿದರು. ಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು. ಆಶಾಲತ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಜ್ಯೋತಿ ಎಲ್. ಜನ್ನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನವೀನ್ ವಂದಿಸಿದರು.







