ಮುಲ್ಕಿ: ಎಸ್.ಕೆ.ಎಸ್.ಎಂ ನಿಂದ ಕುರ್ ಆನ್ ಸಂದೇಶ ಸಮಾವೇಶ ಹಾಗೂ ಪ್ರದರ್ಶನ

ಮುಲ್ಕಿ,ನ.29: ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಹಮ್ಮಿಕೊಂಡಿರುವ ಕುರ್ ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಕುರ್ ಆನ್ ಸಂದೇಶ ಸಮಾವೇಶ ಹಾಗೂ ಪ್ರದರ್ಶನ ದಿನಾಂಕ 27/11/2016 ಆದಿತ್ಯವಾರ ಬೆಳಿಗ್ಗೆ10.00 ರಿಂದ ರಾತ್ರಿ 9.00ರ ವರೆಗೆ ಕಾರ್ನಾಡಿನ ಗಾಂಧಿ ಮೈದಾನದ ಬಳಿ ಜರಗಿತು.
ಬೆಳಿಗ್ಗೆ 10.00 ಗಂಟೆಯ ಅಧಿವೇಶನದಲ್ಲಿ ಕುರ್ ಆನ್ ಸಂದೇಶ ಪ್ರದರ್ಶನ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷರಾದ ಸುನಿಲ್ ಆಳ್ವರವರು ಉದ್ಘಾಟಿಸಿದರು. ಮುಸ್ಲಿಮೇತರಿಗೆ ಉಚಿತ ಕುರ್ ಆನ್ ಕನ್ನಡ ಭಾಷಾಂತರ ನೀಡಲಾಯಿತು. ಪ್ರದರ್ಶಿಸಿದ ಕುರ್ ಆನ್ ಸಂದೇಶಗಳ ಪಾನೆಲ್ಸ್ ಗಳನ್ನು ಎಂ.ಜಿ ಮುಹಮ್ಮದ್ ವಿವರಿಸಿದರು.
ಸಂಜೆ 5.00ಗಂಟೆಯಿಂದ ರಾತ್ರಿ 9.00 ಗಂಟೆಯವರೆಗೆ ನಡೆದ ಅಧಿವೇಶನದಲ್ಲಿ 'ಏಕ ದೇವಾರಧನೆ ವಿವಿಧ ಧರ್ಮದಲ್ಲಿ' ಎಂಬ ವಿಷಯದಲ್ಲಿ ವಿಜಾಪುರದ ಎ. ಐ.ಆರ್.ಎಫ್ ಅಧ್ಯಕ್ಷ ಬಶೀರ್ ಅಹ್ಮದ್ ಉಮರಿ ಪ್ರಭಾಷಣಗೈದರು. ನಂತರ 'ತೌಹೀದ್' ಎಂಬ ವಿಷಯದಲ್ಲಿ ಮೌಲವಿ ಅಲೀ ಉಮರ್ ಮಾತನಾಡಿದರು. 'ಪ್ರವಾದಿ ಸ್ನೇಹ' ಎಂಬ ವಿಷಯದಲ್ಲಿ ಮೌಲವಿ ಬಾದುಷಾ ಬಾಖವಿ ಮಾತನಾಡಿದರು
ಎಸ್ ಕೆ ಎಸ್ ಎಮ್ ಮುಲ್ಕಿ ಘಟಕದ ಅಧ್ಯಕ್ಷ ಉಮರ್ ಫಾರೂಖ್ ಅಧ್ಯಕ್ಷತೆ ವಹಿಸಿದರು ಕೌನ್ಸಿಲರ್ ಹರ್ಶರಾಜ್ ಶೆಟ್ಟಿ,ಯು ಎನ್ ಅಬ್ದುರ್ರಝಾಕ್, ಬಶೀರ್ ಅಹ್ಮದ್ ಶಾಲಿಮಾರ್,ಸಯ್ಯದ್ ಕರ್ನೀರೆ,ಅಹ್ಮದನ್ಸಾರ್,ರಿಯಾಝ್ ಅಹ್ಮದ್,ಅಬೂಬಕರ್ ಪಾಂಡೇಶ್ವರ್,ಶೇಖ್ ಮುಹಮ್ಮದ್ ಕಾರ್ನಾಡ್,ಅಬ್ದುಲ್ ಜಬ್ಬಾರ್ ಕೊಲ್ಮಾಡ್,ಮೊದಲಾದವರು ಉಪಸ್ಥಿತರಿದ್ದರು
ಶರೀಫ್ ಮುಲ್ಕಿ ಸ್ವಾಗತಿಸಿ ನಿರೂಪಿಸಿದರು
ಅಬೂ ಬಿಲಾಲ್ ಎಸ್ ಎಮ್ ಧನ್ಯವಾದ ಗೈದರು.





