Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. "ಮೋದಿಜೀ, ಜನರು ಖುಷಿಯಾಗಿದ್ದಾರೆ ಎಂಬುದು...

"ಮೋದಿಜೀ, ಜನರು ಖುಷಿಯಾಗಿದ್ದಾರೆ ಎಂಬುದು ಸುಳ್ಳು"

ವಿಶಿಷ್ಟವಾಗಿ ಪ್ರತಿಭಟಿಸಿದ ಮೈತ್ರಿ ಪಕ್ಷದ ಸಂಸದ

ವಾರ್ತಾಭಾರತಿವಾರ್ತಾಭಾರತಿ29 Nov 2016 9:31 PM IST
share
ಮೋದಿಜೀ, ಜನರು ಖುಷಿಯಾಗಿದ್ದಾರೆ ಎಂಬುದು ಸುಳ್ಳು

ಹೊಸದಿಲ್ಲಿ, ನ.29: ಲೋಕಸಭೆಯಲ್ಲಿ ಸದಸ್ಯರು ಬೊಬ್ಬೆ ಹೊಡೆಯುವುದು ಪ್ರತಿಭಟಿಸುತ್ತ ಆಕ್ರೋಶಿತರಾಗಿ ಓಡಾಡುವುದರ ನಡುವೆಯೇ ಒಬ್ಬ ಸದಸ್ಯ ಎದ್ದು ನಿಂತರು.

ಆಂಧ್ರಪ್ರದೇಶದ ಚಿತ್ತೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ತೆಲುಗು ದೇಶಂ ಪಕ್ಷದ ಸಂಸದ ಡಾ. ಶಿವಪ್ರಸಾದ್ ಕಪ್ಪು-ಬಿಳುಪು ಉಡುಗೆಯಲ್ಲಿದ್ದರು.

ಅವರು ಕಪ್ಪು ಪ್ಯಾಂಟು ಬಿಳಿ ಅಂಗಿ ತೊಟ್ಟಿರಲಿಲ್ಲ ಅಥವಾ ಅದರ ವಿರುದ್ಧವೂ ಅಲ್ಲ. ಶಿವಪ್ರಸಾದ್‌ರ ಅಂಗಿ ಮತ್ತು ಪ್ಯಾಂಟು ಅರ್ಧಬಿಳಿ ಅರ್ಧ ಕಪ್ಪಾಗಿದ್ದವು. ಅವರ ಅಂಗಿಯ ಮೇಲೆ ಕಪ್ಪು ಹಣ ರಾಶಿ ಹಾಕಿರುವವರ ಹಾಗೂ ಜನಸಾಮಾನ್ಯರ ಸ್ಥಿತಿಯನ್ನು ಚಿತ್ರಿಸಿದ್ದ ಸ್ಟಿಕ್ಕರ್‌ಗಳು ಅಂಟಿಸಲ್ಪಟ್ಟಿದ್ದವು.

ನಿಧಾನವಾಗಿ, ಲೋಕಸಭೆಯ ನಡುವೆ ಎಲ್ಲರಿಗೂ ಕಾಣಿಸುವಂತೆ ಅವರು ಬಂದು ನಿಂತರು.

ವಿಪಕ್ಷಗಳ ಸದಸ್ಯರು ಘೋಷಣೆ ಕೂಗುವುದನ್ನು ಆರಂಭಿಸಬೇಕೆನ್ನುವಷ್ಟರಲ್ಲಿ ಟಿಡಿಪಿ ಸಂಸದ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆಯವರ ಬಳಿ ನಡೆದು, ತನ್ನ ಉಡುಪನನ್ನು ನೋಟು ರದ್ದತಿಯ ಕುರಿತಾದ ಟೀಕೆಯೆಂದು ಅವರಿಗೆ ವಿವರಿಸಿದರು.

ಉತ್ತೇಜಿತರಾದ ಟಿಎಂಸಿ ಸಂಸದ ಸೌಗತ ರಾಯ್, ಅವರಿಗೆ ಒಂದು ರೀತಿ ತಿರುಗುತ್ತ ಆಳುವ ಪಕ್ಷದವರ ಆಸನಗಳ ಕಡೆಗೆ ಹೋಗುವಂತೆ ಸೂಚಿಸಿದರು.

ಅದನ್ನೊಪ್ಪಿದ ಡಾ. ಶಿವಪ್ರಸಾದ್ ಅಲ್ಲಿಗೆ ನಡೆದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಹಾಗೂ ಸಂಸದೀಯ ವ್ಯವಹಾರ ಸಚಿವ ಅನಂತಕುಮಾರ್‌ಗೆ ‘ನಮಸ್ತೆ’ ಎಂದರು.

ಮೋದಿಜಿಯವರ ಈ ಕ್ರಮಕ್ಕೆ ಕಪ್ಪುಹಣ ಇರುವ ಜನರು ನಗುತ್ತಿದ್ದಾರೆ. ಜನ ಸಾಮಾನ್ಯರು ಅಳುತ್ತಿದ್ದಾರೆಂದು ಬಳಿಕ ಅವರು ಎನ್‌ಡಿಟಿವಿಗೆ ತಿಳಿಸಿದರು.

ಶಿವಪ್ರಸಾದ್ ತನ್ನ ಪಕ್ಷವನ್ನು ಉಲ್ಲಂಘಿಸಿ ನೋಟು ರದ್ದತಿಯನ್ನು ವಿರೋಧಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದಾಗ, ತಾನು ತನ್ನೊಳಗಿನ ಕಲಾವಿದನನ್ನು ಅಭಿವ್ಯಕ್ತಿಸುತ್ತಿದ್ದೇನೆಂಬುದು ಅವರ ಸಮರ್ಥನೆಯಾಗಿತ್ತು.

ಬಿಕ್ಕಟ್ಟು ಸೃಷ್ಟಿಯಾದಾಗಲೆಲ್ಲ ತನ್ನೊಳಗಿನ ಕಲಾವಿದ ಹೊರಬರುತ್ತಾನೆ. ಪ್ರತಿಯೊಬ್ಬರೂ ನೋಟು ನಿಷೇಧವನ್ನು ಬೆಂಬಲಿಸುತ್ತಿದ್ದಾರೆ ಹಾಗೂ ಜನಸಾಮಾನ್ಯರು ಸಂತೋಷದಿಂದಿದ್ದಾರೆಂದು ಅವರ ಜನರು ಹೇಳುತ್ತಿರುವುದು ಸತ್ಯವಲ್ಲವೆಂಬುದನ್ನು ಮೋದಿಜಿಯವರಿಗೆ ವಿವರಿಸಲು ಈ ರೀತಿ ಮಾಡಿದ್ದೇನೆ ಎಂದ ಶಿವಪ್ರಸಾದ್, ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಮೋದಿಯವರಿಗೆ ವಿನಂತಿಸಿದರು.

ತಮಾಷೆಯ ಸಂಗತಿಯೆಂದರೆ, ಜನಸಾಮಾನ್ಯರ ಬವಣೆಯನ್ನು ಗಮನಕ್ಕೆ ತರುವ ಅವರ ಪ್ರಯತ್ನವನ್ನು ಅವರ ಟಿಡಿಪಿ ಸಹೋದ್ಯೋಗಿಗಳು ಬೆಂಬಲಿಸಿಲ್ಲವಾದರೂ, ಅವರನ್ನು ತಡೆಯಲೂ ಇಲ್ಲ.

ತಾವುನೋಟು ರದ್ದತಿಯನ್ನು ಬೆಂಬಲಿಸುತ್ತಿದ್ದೇವೆ.ಆದರೆ, ತಮ್ಮ ಮುಖ್ಯಮಂತ್ರಿ ಅದರ ಜಾರಿ ವಿಧಾನವನ್ನು ಟೀಕಿಸುತ್ತಿದ್ದಾರೆಂದು ಅಜ್ಞಾತವಾಗುಳಿಯಬಯಸಿದ ಟಿಡಿಪಿ ಸಂಸದರೊಬ್ಬರು ಎನ್‌ಡಿಟಿವಿಗೆ ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X