ನೀರಿನಿಂದ ಇಂಧನ

ಮೆಲ್ಬರ್ನ್, ನ. 29: ನೀರನ್ನು ಆಮ್ಲಜನಕ ಮತ್ತು ಜಲಜನಕಗಳಾಗಿ ವಿಂಗಡಿಸಿ ಇಂಧನ ಉತ್ಪಾದಿಸುವ ಆರ್ಥಿಕ ಕಾರ್ಯಸಾಧು ವಿಧಾನವೊಂದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.
ಸೌರ ಬೆಳಕು ವಿದ್ಯುತ್ ಉತ್ಪಾದಿಸುವ ರೀತಿಯಲ್ಲೇ ‘ಕ್ಯಾಟಲಿಸ್ಟ್’ ಒಂದನ್ನು ಬಳಸಿ ನೀರನ್ನು ವಿಭಜಿಸುವ ಪ್ರಕ್ರಿಯೆಯು ಜಲಜನಕ ಮುಂತಾದ ರಾಸಾಯನಿಕ ಇಂಧನವನ್ನು ಉತ್ಪಾದಿಸಬಲ್ಲದು ಎಂದು ಆಸ್ಟ್ರೇಲಿಯದ ಗ್ರಿಫಿತ್ ವಿಶ್ವವಿದ್ಯಾನಿಲಯದ ಶುದ್ಧ ಪರಿಸರ ಮತ್ತು ಇಂಧನ ಕೇಂದ್ರದ ನಿರ್ದೇಶಕ ಹುಯಿಜಿನ್ ಝಾವೊ ಹೇಳಿದರು.
Next Story





