ಬಣವೆಗೆ ಬೆಂಕಿ: 40 ಸಾವಿರ ಹಾನಿ
ಮುಂಡಗೋಡ, ನ.29: ಜಾನುವಾರುಗಳಿಗೆ ಶೇಖರಿಸಿಟ್ಟಿದ್ದ ಮೇವಿನ ಬಣವೆ ಬೆಂಕಿ ತಗಲಿ ಸುಮಾರು 40 ಸಾವಿರ ರೂ. ಹಾನಿಯಾದ ಘಟನೆ ತಾಲೂಕಿನ ಅರಿಶಿಣಗೇರಿ ಗ್ರಾಮದಲ್ಲಿ ರವಿವಾರ ನಡೆದಿದೆ.
ತಿಪ್ಪಣ್ಣಾ ವೆಂಕಪ್ಪಲಮಾಣಿ ಎಂಬವರು ತಮ್ಮ ಜಾನುವಾರುಗಳ ಮೇವಿಗೆಂದು ಸುಮಾರು 4 ಟ್ರ್ಯಾಕ್ಟರ್‌ನಷ್ಟು ಒಣ ಹುಲ್ಲು ಮತ್ತು 4 ಟ್ರ್ಯಾಕ್ಟರ್ ಹೊಟ್ಟಿನ ಬಣವೆ ಮನೆಯ ಹಿಂದೆ ಸಂಗ್ರಹಿಸಿಡಲಾಗಿತ್ತು. ರವಿವಾರ ಸಂಜೆ ಆಕಸ್ಮಿಕ ಬೆಂಕಿ ತಗಲಿದೆ ಎಂದು ಹೇಳಲಾಗಿದೆ.
ಸಾರ್ವಜನಿಕರಿಂದ ಮಾಹಿತಿ ಪಡೆದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ದಳವರು ಬರದೇ ಇದ್ದಲ್ಲಿ ಬೆಂಕಿ ಹತ್ತಿರದ ಇತರ ಬಣವೆಗಳಿಗೆ ಮತ್ತು ಮನೆಗಳಿಗೆ ತಗಲುತ್ತಿತ್ತು ಎಂಬ ಆತಂಕದ ಮಾತುಗಳು ಗ್ರಾಮಸ್ಥರಿಂದ ಕೇಳಿಬಂದವು.
Next Story





