ಕೊಲೆಸ್ಟರಾಲ್ ಆರೋಗ್ಯದ ಶತ್ರುವೇ ?: ಓದಿ ನೋಡಿ
ಕೊಲೆಸ್ಟರಾಲ್ ಆಹಾರದಲ್ಲಿದ್ದರೆ ಒಳ್ಳೆಯದಲ್ಲ ಎನ್ನುವ ಭಾವನೆ ಹಲವರಲ್ಲಿದೆ. ಹೃದಯಾಘಾತ ಮತ್ತು ಇತರ ಮಾರಕ ರೋಗಗಳಿಗೆ ಕೊಲೆಸ್ಟರಾಲ್ ಕಾರಣ ಎಂದು ಐದು ದಶಕಗಳಿಂದ ಕೇಳುತ್ತಾ ಬಂದಿದ್ದೇವೆ. ಆದರೆ ನಿಧಾನವಾಗಿ ವೈಜ್ಞಾನಿಕ ಸಂಶೋಧನೆಗಳು ಕೊಲೆಸ್ಟರಾಲ್ ವಾಸ್ತವದಲ್ಲಿ ಅತೀ ಕೆಟ್ಟದೇನೂ ಅಲ್ಲ ಎನ್ನುವುದನ್ನು ತಿಳಿದುಕೊಳ್ಳುತ್ತಿದೆ. ಆಹಾರದ ಬಗ್ಗೆ ನಮ್ಮ ತಪ್ಪು ತಿಳಿವಳಿಕೆ ಬದಲಿಸುವ ಕಾಲವಿದು.
ಜೀವನಕ್ಕೆ ಕೊಲೆಸ್ಟರಾಲ್ ಬೇಕು
ಜೀವಕೋಶಗಳನ್ನು ಕಟ್ಟಲು ಕೊಲೆಸ್ಟರಾಲ್ ಅಗತ್ಯ ಕೊಬ್ಬು. ಇದು ಸಂಪೂರ್ಣ ಕೆಟ್ಟದಲ್ಲಿ. ಮುಖ್ಯವಾಗಿ ಲಿವರ್ ಮತ್ತು ಕರುಳುಗಳು ಆಹಾರವನ್ನು ಪರಿವರ್ತಿಸಲು ಕೊಲೆಸ್ಟರಾಲ್ ಬೇಕೇ ಬೇಕು. ಆದರೆ ಸಮತೋಲನದಲ್ಲಿ ದೇಹ ಸೇರಬೇಕು.
ಉತ್ತಮ ಮತ್ತು ಕೆಟ್ಟ ಕೊಲೆಸ್ಟರಾಲ್
ಎಲ್ಲಾ ಕೊಲೆಸ್ಟರಾಲ್ ಸಮನಲ್ಲ. ನಮಗೆ ಸಮತೋಲಿತ ಕೊಲೆಸ್ಟರಾಲ್ ಬೇಕು. ಸಾಧ್ಯವಾದಷ್ಟು ಕಡಿಮೆ ಇರಲಿ. ಹೈ ಡೆನ್ಸಿಟಿ ಲಿಪೊಪ್ರೊಟೀನ್ ಅಥವಾ ಎಚ್‌ಡಿಎಲ್ ಕೊಲೆಸ್ಟರಾಲ್ ಅನ್ನು ಉತ್ತಮ ಕೊಲೆಸ್ಟರಾಲ್ ಎನ್ನುತ್ತಾರೆ. ಇದು ಹಾರ್ಮೋನ್‌ಗಳು, ವಿಟಮಿನ್ ಡಿ, ಜೀವಕೋಶಗಳು ಮತ್ತು ಇತರ ನರವ್ಯೆಹಗಳಿಗೆ ರಕ್ಷಣಾ ಕವಚ. ಲೋ ಡೆನ್ಸಿಟಿ ಲಿಪೊಪ್ರೊಟೀನ್ ಅಥವಾ ಎಲ್‌ಡಿಎಲ್ ಕೊಲೆಸ್ಟರಾಲ್ ಅನ್ನು ಕೆಟ್ಟ ಕೊಲೆಸ್ಟರಾಲ್ ಎನ್ನಲಾಗುತ್ತದೆ. ಇವು ದೇಹದೊಳಗೆ ತಡೆಯುಂಟು ಮಾಡುತ್ತವೆ.
ಹೀಗಾಗಿ ಉತ್ತಮ ಮತ್ತು ಕೆಟ್ಟ ಕೊಲೆಸ್ಟರಾಲ್ ನಡುವೆ ಸಮತೋಲನ ಕಾಪಾಡಬೇಕು. ಹೀಗಾಗಿ ಆಗಾಗ್ಗೆ ವೈದ್ಯರ ಬಳಿ ಕೊಲೆಸ್ಟರಾಲ್ ಪರೀಕ್ಷಿಸಬೇಕು. ಒಟ್ಟು ಕೊಲೆಸ್ಟರಾಲ್ 200 ಮಿಲಿಗ್ರಾಂಗಿಂತ ಅಧಿಕ ಇರಬಾರದು. ಎಲ್‌ಡಿಎಲ್ ಮತ್ತು ಎಚ್‌ಡಿಎಲ್ ಅನುಪಾತ 4:1ಗಿಂತ ಹೆಚ್ಚಾಗಿರುವಾಗ ನಿಜವಾದ ಅಪಾಯ. ಏಕೆಂದರೆ 4 ಎಲ್‌ಡಿಎಲ್ ಅನ್ನು ಆರಿಸಿ ರಕ್ತದಿಂದ ಮೂತ್ರಪಿಂಡಕ್ಕೆ ಸಾಗಿಸಲು ಒಂದು ಎಚ್‌ಡಿಎಲ್ ಅಗತ್ಯವಿರುತ್ತದೆ.
ಮೊಟ್ಟೆ ತಿನ್ನಿ
ಫಿಟ್‌ನೆಸ್ ಸಮುದಾಯದ ಪ್ರಕಾರ ಈ ಮೊಟ್ಟೆ ಪರಿಪೂರ್ಣ ಪ್ರೊಟೀನ್. ಶ್ರಿಂಪ್‌ಗಳಲ್ಲೂ ಉತ್ತಮ ಕೊಲೆಸ್ಟರಾಲ್ ಹೆಚ್ಚಿದೆ. ಹಸಿರು ತರಕಾರಿಗಳಲ್ಲೂ ಹೆಚ್ಚು ಉತ್ತಮ ಕೊಲೆಸ್ಟರಾಲ್ ಇರುತ್ತದೆ.
ಗಮನಹರಿಸಬೇಕಾದ ಅಂಶ
ವ್ಯಾಯಾಮ ಕಡಿಮೆ ಇರುವುದು, ಯಾವಾಗಲೂ ಕುಳಿತಿರುವುದು, ಹೆಚ್ಚು ಹೊರಗಿನ ಆಹಾರ ಸೇವನೆ ಮೊದಲಾದವನ್ನು ಕಡಿಮೆ ಮಾಡಬೇಕು. ನಿತ್ಯವೂ ನಡೆಯುವುದು ಆರೋಗ್ಯಕರ. ಆದರೆ ಕೆಲವೊಮ್ಮೆ ಎಲ್ಲವೂ ಸರಿಯಾಗೇ ಮಾಡಿದ್ದರೂ ವಂಶವಾಹಿನಿಯ ಕಾರಣದಿಂದ ಕೊಲೆಸ್ಟರಾಲ್ ಹೆಚ್ಚೇ ಇರಬಹುದು. ಶ್ರಿಂಪ್‌ಗಳು ಕೊಲೆಸ್ಟರಾಲ್ ವಿಷಯದಲ್ಲಿ ಉತ್ತಮ ಆಯ್ಕೆ.
ಒತ್ತಡ ಮತ್ತು ಕೊಲೆಸ್ಟರಾಲ್
ರಾತ್ರಿಯಿಡೀ ಕೆಲಸ ಮಾಡುವುದು, ಕುಟುಂಬದ ಅಗತ್ಯ ಮತ್ತು ಮನೆಯ ಜವಾಬ್ದಾರಿಯಿಂದಾಗಿ ಕೊಲೆಸ್ಟರಾಲ್ ತುಂಬಬಹುದು. ಒತ್ತಡದ ಸಂದರ್ಭದಲ್ಲಿ ರಾಸಾಯನಿಕ ಸಂದೇಶಗಳು ದೇಹಕ್ಕೆ ರವಾನೆಯಾಗುತ್ತವೆ ಮತ್ತು ಇವು ಕೊಲೆಸ್ಟರಾಲ್ ಸಂಖ್ಯೆಯನ್ನು ಏರಿಸುತ್ತದೆ. ಹೀಗಾಗಿ ಆಹಾರಕ್ಕೆ ಮೊದಲು ಜೀವನಶೈಲಿಯತ್ತ ಗಮನಹರಿಸುವುದು ಅಗತ್ಯ.
ಕೃಪೆ: http://www.dailyo.in/