ರಣಜಿ: ಕರ್ನಾಟಕ 200 ರನ್‌ಗೆ ಆಲೌಟ್

ಪಟಿಯಾಲ, ನ.29: ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದ ಮೊದಲ ದಿನದಾಟದಲ್ಲಿ ಕರ್ನಾಟಕ ತಂಡ ಸೌರಾಷ್ಟ್ರದ ವಿರುದ್ಧ ಕೇವಲ 200 ರನ್‌ಗೆ ಆಲೌಟಾಗಿದೆ.
ಮಂಗಳವಾರ ಇಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಜಯಿಸಿದ ಕರ್ನಾಟಕ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ಆಟಗಾರ ಮಯಾಂಕ್ ಅಗರ್‌ವಾಲ್(15) ಅಲ್ಪ ಮೊತ್ತಕ್ಕೆ ಔಟಾದರು. ಈ ಮೂಲಕ ಕಳಪೆ ಆಟ ಮುಂದುವರಿಸಿದರು.
ಮನೀಷ್ ಪಾಂಡೆ(75 ರನ್, 122 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಶ್ರೇಯಸ್ ಗೋಪಾಲ್(38) ಕರ್ನಾಟಕ ತಂಡ ಬರೋಬ್ಬರಿ 200 ರನ್ ಗಳಿಸಲು ಕಾರಣರಾದರು. ಉತ್ತಪ್ಪ 14 ರನ್, ಬಿನ್ನಿ 16 ರನ್, ಆರ್. ಸಮರ್ಥ್ 17 ರನ್ ಗಳಿಸಲಷ್ಟೇ ಶಕ್ತರಾದರು. ಸೌರಾಷ್ಟ್ರದ ಪರ ಚೌಹಾಣ್(3-52), ಜೀವ್‌ರಜನಿ(3-41) ತಲಾ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಉನದ್ಕಟ್(2-11) ಹಾಗೂ ಮಕ್ವಾನ(2-73) ತಲಾ ಎರಡು ವಿಕೆಟ್ ಉಡಾಯಿಸಿದರು.
ಮೊದಲ ಇನಿಂಗ್ಸ್ ಆರಂಭಿಸಿರುವ ಸೌರಾಷ್ಟ್ರ ತಂಡ ದಿನದಾಟದಂತ್ಯಕ್ಕೆ 19 ರನ್‌ಗೆ 2 ವಿಕೆಟ್ ಕಳೆದುಕೊಂಡಿದೆ. ನಾಯಕ ವಿನಯ್‌ಕುಮಾರ್(2-1) ಎರಡೂ ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಪ್ರಥಮ ಇನಿಂಗ್ಸ್: 200 ರನ್‌ಗೆ ಆಲೌಟ್
(ಮನೀಷ್ ಪಾಂಡೆ 75, ಗೋಪಾಲ್ 38, ಚೌಹಾಣ್ 3-52, ಜಿವ್‌ರಜನಿ 3-41)





