ಅಂತಾರಾಷ್ಟ್ರೀಯ ನೆನಪಿನ ಶಕ್ತಿಯ ಆಟ: ಭಾರತ ನಂ.1
ಹೊಸದಿಲ್ಲಿ, ನ.29: ಲಾಸ್ ವೇಗಸ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ನೆನಪಿನ ಶಕ್ತಿಯ ಆಟದಲ್ಲಿ ಭಾರತ 3 ಚಿನ್ನ ಸಹಿತ ಒಟ್ಟು 15 ಪದಕಗಳನ್ನು ಜಯಿಸುವ ಮೂಲಕ ಅಗ್ರ ಸ್ಥಾನಿಯಾಗಿ ಹೊರಹೊಮ್ಮಿದೆ.
‘ಹ್ಯೂಮನ್ ಕಂಪ್ಯೂಟರ್’ ಖ್ಯಾತಿಯ ಶಕುಂತಲಾದೇವಿ ನೆನಪಿನ ಶಕ್ತಿಯ ಗೇಮ್ಸ್‌ನಲ್ಲಿ ನಂ.1 ಸ್ಥಾನವನ್ನು ಕಾಯ್ದುಕೊಂಡರು.
ಕ್ಯಾಲೆಂಡರ್ ದಿನಾಂಕಗಳ ಲೆಕ್ಕದಲ್ಲಿ ಚಿನ್ನದ ಪದಕವನ್ನು ಜಯಿಸಿದ 14ರ ಹರೆಯದ ಜೈನುಮ್ ಶಾ, ‘‘ನನಗಿದು ಮೊದಲ ಸ್ಪರ್ಧೆಯಾಗಿತ್ತು. ಭಾರತಕ್ಕೆ ಪದಕ ಗೆದ್ದುಕೊಟ್ಟಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಭಾರತದ ಪರ 5 ವರ್ಷದ ಬಾಲಕನಿಂದ 42ರ ವರ್ಷದ ವಯೋಮಿತಿಯವರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು’’ ಎಂದರು.
‘‘ಭಾರತ 2012ರಿಂದ ಮೆಂಟಲ್ ಸ್ಪೋರ್ಟ್ಸ್‌ನಲ್ಲಿ ನಂ.1 ಸ್ಥಾನವನ್ನು ಕಾಯ್ದುಕೊಂಡಿದೆ. ಈ ತಂಡದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ ಎಂದು ಭಾರತ ತಂಡದ ಮತ್ತೋರ್ವ ಸದಸ್ಯೆ ಮೈತ್ರಿ ಮನಿಯರ್ ಹೇಳಿದ್ದಾರೆ.
8 ಅಂಕಿಯ ವರ್ಗಮೂಲ ಹಾಗೂ ಕ್ಯಾಲೆಂಡರ್ ದಿನಾಂಕಗಳ ಲೆಕ್ಕದಲ್ಲಿ ಭಾರತ ತಂಡ ಎರಡು ವಿಶ್ವ ದಾಖಲೆಯನ್ನು ಮುರಿದಿದೆ.





