ವಿಶ್ವ ಸೂಪರ್ ಸರಣಿಗೆ ಸಿಂಧು ಅರ್ಹತೆ

ಹೊಸದಿಲ್ಲಿ, ನ.29: ಇತ್ತೀಚೆಗೆ ನಡೆದ ಎರಡು ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ.ಸಿಂಧು ಪ್ರತಿಷ್ಠಿತ ವರ್ಲ್ಡ್ ಸೂಪರ್ ಸರಣಿಗೆ ಇದೇ ಮೊದಲ ಬಾರಿ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ಟೂರ್ನಿಯು ಡಿ.14 ರಿಂದ 18ರ ತನಕ ದುಬೈನಲ್ಲಿ ನಡೆಯಲಿದೆ.
ವರ್ಷಾಂತ್ಯದಲ್ಲಿ ನಡೆಯುವ ವರ್ಲ್ಡ್ ಸೂಪರ್ ಸಿರೀಸ್‌ನಲ್ಲಿ ವಿಶ್ವ ಶ್ರೇಷ್ಠ 8 ಸಿಂಗಲ್ಸ್ ಹಾಗೂ ಡಬಲ್ಸ್ ಆಟಗಾರರು ಭಾಗವಹಿಸುತ್ತಾರೆ. ಹಾಂಕಾಂಗ್ ಓಪನ್ 1 ಮಿಲಿಯನ್ ಡಾಲರ್ ಬಹುಮಾನ ಮೊತ್ತದ ವಿಶ್ವ ವರ್ಲ್ಡ್ ಟೂರ್ನಿಗೆ ಅರ್ಹತೆ ಪಡೆಯಲು ಇದ್ದ ಕೊನೆಯ ಟೂನಿಯಾಗಿತ್ತು.
ಚೀನಾ ಓಪನ್‌ನ್ನು ಜಯಿಸಿ 11,000 ಅಂಕ ಗಳಿಸಿದ ಸಿಂಧು ವರ್ಲ್ಡ್ ಸೂಪರ್ ಸಿರೀಸ್‌ನಲ್ಲಿ ಆಡುವ ಅವಕಾಶ ಪಡೆದಿದ್ದರು. ಹಾಂಕಾಂಗ್ ಓಪನ್‌ನಲ್ಲಿ ರನ್ನರ್ ಅಪ್ ಪ್ರಶಸ್ತಿ ಜಯಿಸಿದ್ದ ಸಿಂಧು ದುಬೈ ಸೂಪರ್ ಸರಣಿಯಲ್ಲಿ ಆಡುವ ಅವಕಾಶ ಪಡೆದಿದ್ದರು.
ಸಿಂಧು ಟೂರ್ನಿಗೆ ಅರ್ಹತೆ ಪಡೆದಿರುವ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ. ಟೂರ್ನಿಯಲ್ಲಿ 2016ರ ಒಲಿಂಪಿಕ್ಸ್ ಚಾಂಪಿಯನ್ ಸ್ಪೇನ್‌ನ ಕ್ಯಾರೊಲಿನ್ ಮರಿನ್, ತೈ ಝು ಯಿಂಗ್(ಚೈನೀಸ್‌ತೈಪೆ), ಜಪಾನ್‌ನ ಅಕಾನೆ ಯಮಗುಚಿ, ಚೀನಾದ ಸನ್ ಯೂ ಹಾಗೂ ಹೀ ಬಿಂಗ್‌ಜಿಯಾವೊ ಭಾಗವಹಿಸಲಿದ್ದಾರೆ.







