Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಈ ಬಾಲಕನನ್ನು ನೋಡಲೆಂದೇ ಬರುತ್ತಿದ್ದಾರೆ...

ಈ ಬಾಲಕನನ್ನು ನೋಡಲೆಂದೇ ಬರುತ್ತಿದ್ದಾರೆ ಎಲ್ಲೆಡೆಯಿಂದ ಜನ

ಏನು ಅಂತಹಾ ವಿಶೇಷ ಈತನಲ್ಲಿ ?

ವಾರ್ತಾಭಾರತಿವಾರ್ತಾಭಾರತಿ29 Nov 2016 11:37 PM IST
share
ಈ ಬಾಲಕನನ್ನು ನೋಡಲೆಂದೇ ಬರುತ್ತಿದ್ದಾರೆ ಎಲ್ಲೆಡೆಯಿಂದ ಜನ

ಎಂಟು ವರ್ಷದ ದಕ್ಷಿಣ ಚೀನಾದ ಹುಡುಗನ ಮನೆ ಮುಂದೆ ದೇಶದಾದ್ಯಂತದಿಂದ ಜನ ಸೇರುತ್ತಿದ್ದಾರೆ. ಈ ಬಾಲಕ ಚೀನಾದ ಬಿಲಿಯನೇರ್ ಜಾಕ್ ಮಾನಂತೆಯೇ ಕಾಣುವುದು ಇದಕ್ಕೆ ಕಾರಣ.

ಕಳೆದ ಎರಡು ವಾರಗಳಿಂದ ಫ್ಯಾನ್ ಕ್ಸಿಯೋಕಿನ್ ಮನೆಗೆ ನಿತ್ಯವೂ ಕನಿಷ್ಠ 50 ಮಂದಿ ಭೇಟಿ ನೀಡುತ್ತಿದ್ದಾರೆ. ಈ ಬಾಲಕ ಅತ್ಯದ್ಭುತ ಎನ್ನುವಂತೆ ಚೀನಾದ ಅತೀ ಶ್ರೀಮಂತ ವ್ಯಕ್ತಿ ಜಾಕ್ ಮಾಗೆ ಹೋಲುತ್ತಾನೆ. ಜಾಕ್ ಮಾ ಚೀನಾದ ಇಕಾಮರ್ಸ್ ಕಂಪೆನಿ ಅಲಿಬಾಬದ ಸಂಸ್ಥಾಪಕ. ಜಾಕ್ ಮಾ ಈ ಬಾಲಕನ ಶಿಕ್ಷಣಕ್ಕೆ ಅನುದಾನ ನೀಡುವುದಾಗಿ ಹೇಳಿದ್ದಾರೆ ಎನ್ನುವ ಸುದ್ದಿಯೂ ಹರಡಿದೆ.

ಜಿಯಾನ್‌ಗ್ಸಿ ಪ್ರಾಂತದಲ್ಲಿ ನೆಲೆಸಿರುವ ಹುಡುಗನ ಕುಟುಂಬ ಬಡವರಾಗಿದ್ದು, ಸರಕಾರಿ ನೆರವನ್ನು ಅವಲಂಬಿಸಿದ್ದಾರೆ. ಜಿಯೋಕಿನ್‌ನ ತಂದೆ ಫಾನ್ ಜಿಯಾಫಾ ವಿಕಲಚೇತನರಾಗಿದ್ದು, ಅವರ ಬಲ ಕಾಲು ಊನವಾಗಿದೆ. ತಾಯಿ ಪೋಲಿಯೋ ಪೀಡಿತರು. 80ರ ವಯಸ್ಸಿನ ಅಜ್ಜಿಗೆ ಅಲ್ಜೀಮರ್ಸ್‌ ರೋಗವಿದೆ.

ಜಾಕ್ ಮಾ ಹುಡುಗನಿಗೆ ನೆರವಾಗುತ್ತಿದ್ದಾರೆಯೇ ಎನ್ನುವ ಪ್ರಶ್ನೆಗೆ ಅಲಿಬಾಬ ಸಂಸ್ಥೆ ನೇರ ಉತ್ತರ ನೀಡಿಲ್ಲ. “ಜಾಕ್ ಮಾರ ಎಲ್ಲಾ ಸುದ್ದಿಗಳನ್ನು ತಮಾಷೆ ಎಂದು ತಿಳಿದುಕೊಳ್ಳಬೇಡಿ. ಒಬ್ಬ ಬಾಲಕನ ಶಿಕ್ಷಣಕ್ಕೆ ನೆರವಾಗುವುದು ಸುಲಭ. ಆದರೆ ಲಕ್ಷಾಂತರ ಬಡ ಮಕ್ಕಳಿಗೆ ನೆರವಾಗಲು ಹೆಚ್ಚು ಸಂಪನ್ಮೂಲ ಅಗತ್ಯವಿದೆ” ಎಂದು ಅಧಿಕೃತ ಪ್ರಕಟನೆಯಲ್ಲಿ ಸಂಸ್ಥೆ ಹೇಳಿದೆ.

ಆದರೆ ಮಿನಿ ಜಾಕ್ ಮಾ ಎಂದೇ ಜನಪ್ರಿಯವಾಗಿರುವ ಈ ಬಾಲಕನ ಜನಪ್ರಿಯತೆ ಏರುತ್ತಲೇ ಇದೆ. 2015ರಲ್ಲಿ ಆನ್‌ಲೈನ್ ಸೆನ್ಷೇಶನ್ ಆಗಿದ್ದ ಈ ಬಾಲಕನ ಬಗ್ಗೆ ಖಚಿತವಾಗದ ಸುದ್ದಿಗಳು, ಊಹಾಪೋಹಗಳು ಹರಡಿರುವ ಕಾರಣ ಜನರು ಆತನನ್ನು ಭೇಟಿಯಾಗುತ್ತಿದ್ದಾರೆ. ಕ್ಸಿಯೋಕಿನ್‌ಗೆ ಸಿನೆಮಾ ಮತ್ತು ಜಾಹೀರಾತಿನಲ್ಲಿ ನಟಿಸುವ ಅವಕಾಶವೂ ಬರುತ್ತಿದೆ. “ನನ್ನ ಮಗ ಜಾಕ್ ಮಾನಂತೆ ಕಾಣುತ್ತಿರುವುದು ಒಳ್ಳೆಯದೇ” ಎಂದು ಫ್ಯಾನ್ ಜಿಯಾಫಾ ಹೇಳಿದ್ದರೂ, ಆತನಿಗೆ ಬರುತ್ತಿರುವ ಅವಕಾಶಗಳ ಬಗ್ಗೆ ಹೆಚ್ಚು ಉತ್ಸುಕರಾಗಿಲ್ಲ. ನನ್ನ ಮಗ ಚಿತ್ರರಂಗಕ್ಕೆ ಹೋಗುವುದು ನನಗೆ ಬೇಡ. ಕ್ಸಿಯೋಕಿನ್ ಸ್ವತಂತ್ರವಾಗಿ ಬದುಕಬೇಕು ಮತ್ತು ಸ್ವಾವಲಂಬನೆ ಸಾಧಿಸಬೇಕು ಎಂದು ಬಯಸಿದ್ದೇನೆ. ಶಿಕ್ಷಣ ಮಾತ್ರ ಆತನ ಬದುಕನ್ನು ಸುಧಾರಿಸಬಹುದು ಎಂದು ಜಿಯಾಫ ಹೇಳಿದ್ದಾರೆ. ಆದರೆ ಈಗ ಕ್ಸಿಯೋಕಿನ್ ಶಾಲೆಗೆ ಹೋಗುವುದೇ ಕಷ್ಟವಾಗುತ್ತದೆ. ಬರೆಯಲು ಆತನಿಗೆ ಬರುವುದಿಲ್ಲ. “ನಾನು ಹೆಚ್ಚು ಓದಿಲ್ಲ. ಆದರೆ ಶಿಕ್ಷಣ ಅತೀ ಮುಖ್ಯ ಎಂದು ನನಗೆ ಗೊತ್ತು. ಕ್ಸಿಯೋಕಿನ್‌ಗೆ ಉತ್ತಮ ಶಿಕ್ಷಣ ಸಿಗಬೇಕು ಎಂದು ಬಯಸುತ್ತೇನೆ” ಎನ್ನುವುದು ತಂದೆಯ ಆಶಯವಾಗಿದೆ.

ಸಾಮಾಜಿಕ ತಾಣಗಳಲ್ಲೂ ಕುಟುಂಬಕ್ಕೆ ಸಾಕಷ್ಟು ಬೆಂಬಲ ಸಿಕ್ಕಿದೆ. “ಜನರೆಷ್ಟು ಅವಕಾಶವಾದಿಗಳು. ದೊಡ್ಡ ವಿಪರ್ಯಾಸ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. “ವಾಣಿಜ್ಯೀಕರಣ ನಿಲ್ಲಿಸೋಣವೇ, ಆತ ಇನ್ನೂ ಬಾಲಕ” ಎಂದು ಮತ್ತೊಬ್ಬರು ಹೇಳಿದ್ದಾರ. “ಈ ಬಾಲಕನ ಮೇಲೆ ಕ್ರೌರ್ಯವೆಸಗಲಾಗುತ್ತಿದೆ ಮತ್ತು ಆತನನ್ನು ಶೋಷಿಸಲಾಗುತ್ತಿದೆ. ಆತ ಬೆಳೆದು ಜಾಕ್ ಮಾನಂತೆ ಜೀವನ ನಡೆಸಲು ಸಾಧ್ಯವಾಗಲಿ. ಆತನಂತೆ ಕಾಣುವುದಲ್ಲ” ಎಂದು ಮತ್ತೊಬ್ಬರು ಹೇಳಿದ್ದಾರೆ.

ಹಾಗೆಂದು ಎಲ್ಲರೂ ಬಾಲಕನಿಂದ ಹಣ ಮಾಡುವ ಉದ್ದೇಶ ಹೊಂದಿಲ್ಲ. ಝಾಂಗ್ ಚೆಂಗ್ಲಿಯಾಂಗ್ ಅವರು ಕ್ರಿಯೋಕಿನ್ ಮತ್ತು ಆತನ ಸಹೋದರನನ್ನು ಹಾಂಗ್ಝೌ ಬೋರ್ಡಿಂಗ್ ಶಾಲೆಗೆ ಕಳುಹಿಸುವುದಾಗಿ ಮುಂದೆ ಬಂದಿದ್ದಾರೆ. ಈಗಾಗಲೇ 200 ಮಂದಿ ಮಕ್ಕಳಿಗೆ ನೆರವು ನೀಡಿರುವ ಝಾಂಗ್ ಸುಮಾರು ಎಂಟು ಗಂಟೆಗಳ ಕಾಲ ವಾಹನ ಚಲಾಯಿಸಿ ಕುಟುಂಬವನ್ನು ಭೇಟಿಯಾಗಲು ಬಂದಿದ್ದರು. “ಮಿನಿ ಜಾಕ್ ಮಾ ಮತ್ತು ಸಹೋದರನಿಗೆ ಉತ್ತಮ ಶಿಕ್ಷಣ ಪರಿಸರ ಕೊಡಲು ಬಯಸಿದ್ದೇನೆ. ಆತನನ್ನು ಮೊದಲು ನೋಡಿದಾಗ ಹೆಚ್ಚು ಬುದ್ಧಿವಂತ ಎಂದು ಅನಿಸಿಲ್ಲ. ಆದರೆ ಆತನಿಗೆ ಪೌಷ್ಠಿಕಾಂಶದ ಅಗತ್ಯವಿದೆ. ಮನೆಯಲ್ಲಿ ಬೆಳಕೇ ಇಲ್ಲ. ಓದಲು ಪರಿಸರವಿಲ್ಲ. ಆತನಿಗೆ ಓದಲು ಉತ್ತಮ ಸ್ಥಳವನ್ನು ಒದಗಿಸುತ್ತೇನೆ” ಎಂದು ಝಾಂಗ್ ಹೇಳಿದ್ದಾರೆ.

ಆದರೆ ಕ್ಸಿಯೋಕಿನ್‌ನ ತಂದೆಗೆ ಈಗ ಯಾರನ್ನು ನಂಬಬೇಕು ಎಂದೇ ತಿಳಿಯುತ್ತಿಲ್ಲ. ಕಳೆದ 10 ದಿನಗಳಲ್ಲಿ ಅವರಿಗೆ ನಗದು ದಾನವಾಗಿ 10,000 ಯುವಾನ್, ಬಟ್ಟೆಗಳು, ಆಹಾರ ಮತ್ತು ಮನೆಯ ವಸ್ತುಗಳು ಸಿಕ್ಕಿವೆ. ಸ್ಥಳೀಯ ಸರಕಾರ ನೆರವಾಗಿ ಸಲಹೆ ನೀಡಬೇಕು ಎಂದು ಅವರು ಬಯಸಿದ್ದಾರೆ.

ಕೃಪೆ: http://www.bbc.com/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X