ಸೋನಿಯಾ ಆಸ್ಪತ್ರೆಗೆ
ಹೊಸದಿಲ್ಲಿ, ನ.29: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ದಿಲ್ಲಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಅವರು ವೈರಾಣು ಜ್ವರದ ಚಿಕಿತ್ಸೆ ಪಡೆಯುತ್ತಿದ್ದಾರೆನ್ನಲಾಗಿದೆ. ಸೋನಿಯಾ ಗಾಂಧಿ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಹಲವು ದಿನ ಗೈರು ಹಾಜರಾಗಿದ್ದರು.
69ರ ಹರೆಯದ ಸೋನಿಯಾ ಇತ್ತೀಚೆಗೆ ವಾರಣಾಸಿಯಲ್ಲಿ ರೋಡ್‌ಶೋ ನಡೆಸುತ್ತಿದ್ದ ವೇಳೆ ಕುಸಿದುಬಿದ್ದು ಭುಜದಲ್ಲಿ ಮುರಿತ ಉಂಟಾಗಿತ್ತು. ಕೂಡಲೇ ಅವರನ್ನು ದಿಲ್ಲಿಗೆ ಕರೆತಂದಿದ್ದು, ಹಲವು ವಾರಗಳ ಕಾಲ ಆಸ್ಪತ್ರೆಯಲ್ಲಿರಬೇಕಾಯಿತು.
ಈ ಹಿಂದೆ ಸೋನಿಯಾ ಗಾಂಧಿ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿದ್ದರು. ಆದರೆ, ಅವರ ಕಾಯಿಲೆ ಹಾಗೂ ಪರಿಸ್ಥಿತಿಯ ವಿವರವನ್ನು ಕಾಂಗ್ರೆಸ್ ಬಹಿರಂಗಪಡಿಸಿರಲಿಲ್ಲ.
Next Story





