Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹೊಸ ನೋಟುಗಳಲ್ಲಿ ದೇವನಾಗರಿ ಸಂಖ್ಯೆ...

ಹೊಸ ನೋಟುಗಳಲ್ಲಿ ದೇವನಾಗರಿ ಸಂಖ್ಯೆ ಎಷ್ಟು ಸಮಂಜಸ?

ಅಪೂರ್ವ ಶರ್ಮಾಅಪೂರ್ವ ಶರ್ಮಾ30 Nov 2016 12:12 AM IST
share
ಹೊಸ ನೋಟುಗಳಲ್ಲಿ ದೇವನಾಗರಿ ಸಂಖ್ಯೆ ಎಷ್ಟು ಸಮಂಜಸ?

ಸಂವಿಧಾನ ರಚನಾ ಸಮಿತಿ ಸಭೆಯ ಚರ್ಚೆಗೆ ಅನುಗುಣವಾಗಿ ರೂಪಿಸಿದ್ದ ಮುನ್ಶಿ-ಅಯ್ಯಂಗಾರ್ ಸೂತ್ರವನ್ನು ಗಾಳಿಗೆ ತೂರಿದ ಮೋದಿ ಸರಕಾರ ರಾಷ್ಟ್ರಭಾಷೆ ವಿಚಾರದಲ್ಲಿ ಐತಿಹಾಸಿಕ ರಾಜಿ ಮಾಡಿಕೊಂಡಿದೆ. ಹೊಸ ನೋಟುಗಳಲ್ಲಿ ದೇವನಾಗರಿಯನ್ನು ಬಳಸುವ ಮೂಲಕ ಸರಕಾರ ಈ ಪ್ರಮಾದ ಎಸಗಿದೆ.

ಇದೀಗ ಹೊಸ ರೂ.2000 ಹಾಗೂ 500 ನೋಟುಗಳ ಬಗ್ಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಅತ್ಯಂತ ಕುತೂಹಲಕಾರಿ ದಾವೆಯೊಂದು ಸಲ್ಲಿಕೆಯಾಗಿದೆ. ಹೊಸ ನೋಟುಗಳಲ್ಲಿ ಅಂತಾರಾಷ್ಟ್ರೀಯವಾಗಿ ಬಳಕೆಯಾಗುವ ಸಂಖ್ಯೆಯ ಜತೆಗೆ ದೇವನಾಗರಿ ಸಂಖ್ಯೆಯನ್ನು ಮುದ್ರಿಸಲಾಗಿದೆ. ಆದರೆ ಭಾರತದ ಸಂವಿಧಾನದ ಪ್ರಕಾರ ನೋಟಿನಲ್ಲಿ ದೇವನಾಗರಿ ಅಂಕಿ ಬಳಸಲು ಅವಕಾಶವಿಲ್ಲ. ಆದ್ದರಿಂದ ಇದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಈಗಾಗಲೇ ಕೆವಿನ್ ಆದಿತ್ಯನ್ ಹಾಗೂ ಸಾಹಿಲ್ ಮಾಥುರ್ ಅವರು ಪ್ರಕಟಿಸಿದ ಲೇಖನಗಳಲ್ಲಿ ಈ ನಡೆಯ ಕ್ರಮಬದ್ಧತೆಯೇ ಸಂದೇಹಾಸ್ಪದ ಎಂದು ಪ್ರತಿಪಾದಿಸಿದ್ದಾರೆ. 1960ರಲ್ಲಿ ರಾಷ್ಟ್ರಪತಿಗಳು ನೀಡಿದ ಆದೇಶ, ಅಧಿಕೃತ ಭಾಷೆೆ ಕಾಯ್ದೆ-1953 ಹಾಗೂ ಸಂವಿಧಾನದ 343ನೆ ವಿಧಿ ಅನ್ವಯ ದೇವನಾಗರಿ ಲಿಪಿಯ ಅಂಕೆಗಳನ್ನು ದಿಢೀರನೇ ಪರಿಚಯಿಸಿರುವುದು ಕ್ರಮಬದ್ಧವಲ್ಲ. ಆದರೆ ನ್ಯಾಯಾಲಯ, ಇದರ ಐತಿಹಾಸಿಕ ಸಂದರ್ಭ ಹಾಗೂ ಸಂಕೀರ್ಣತೆಯನ್ನು ಪರಿಶೀಲಿಸುತ್ತದೆಯೇ ಎನ್ನುವುದು ಕಾದುನೋಡಬೇಕಾದ ಅಂಶ.
ದೇವನಾಗರಿ ಅಂಕಿಯನ್ನು ಬಳಸುವ ಕುರಿತ ಬದಲಾವಣೆ ಕೇವಲ ಕ್ಷುಲ್ಲಕ ಎನಿಸಬಹುದು. ಆದರೆ ಈ ಸಂಖ್ಯೆಯನ್ನು ಪರಿಚಯಿಸುವ ಮೂಲಕ ಮೋದಿ ಸರಕಾರ, ಸಂವಿಧಾನ ರಚನಾ ಸಮಿತಿ ಸಭೆೆಯ ಚರ್ಚೆಗೆ ಅನುಗುಣವಾಗಿ ರೂಪಿಸಿದ್ದ ಮುನ್ಶಿ- ಅಯ್ಯಂಗಾರ್ ಸೂತ್ರವನ್ನು ಗಾಳಿಗೆ ತೂರಿದಂತಾಗಿದೆ.

ಮುನ್ಶಿ- ಅಯ್ಯಂಗಾರ್ ಸೂತ್ರ


ಸಂವಿಧಾನ ರಚನಾ ಸಮಿತಿಯ ಸದಸ್ಯರಾದ ಕೆ.ಎಂ.ಮುನ್ಶಿ ಹಾಗೂ ಎನ್.ಗೋಪಾಲಸ್ವಾಮಿ ಅಯ್ಯಂಗಾರ್ ಅವರ ನಡುವಿನ ರಾಷ್ಟ್ರಭಾಷೆೆ ಕುರಿತ ಸಂಧಾನಸೂತ್ರವನ್ನು ‘ಮುನ್ಶಿ-ಅಯ್ಯಂಗಾರ್ ಸೂತ್ರ’ ಎಂದು ಕರೆಯಲಾಗುತ್ತದೆ. ಈ ಕುರಿತ ಚರ್ಚೆಯನ್ನು ಸಂವಿಧಾನ ರಚನಾ ಸಮಿತಿಯ ಪ್ರಮುಖ ಚರ್ಚೆಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಗಾಂಧೀಜಿ ನಿಧನದ ಬಳಿಕ, ಯಾರಿಗೆ ಹಿಂದಿಯನ್ನು ಹೋಲುವ ಹಿಂದೂಸ್ಥಾನಿ ಭಾಷೆೆ ಅರ್ಥವಾಗುವುದಿಲ್ಲವೋ ಅಂಥವರನ್ನು ಭಾರತೀಯ ಎಂದು ಪರಿಗಣಿಸಬಾರದು ಎಂಬ ಧ್ವನಿ ದಟ್ಟವಾಗಿ ಕೇಳಿಬಂದಿತ್ತು. ಈ ಸಂದರ್ಭದಲ್ಲಿ ದಕ್ಷಿಣ ಭಾರತದ ಹಲವಾರು ಮಂದಿ ಹಿಂದಿ ಭಾಷೆೆಯ ಸಾಮ್ರಾಜ್ಯಶಾಹಿ ಪ್ರಭುತ್ವದ ಬಗ್ಗೆ ಆತಂಕ ಹೊಂದಿದ್ದರು. ಇದು ಹಿಂದಿ ಮಾತನಾಡದ ದೇಶಗಳ ನಡುವೆ ಕಂದಕಕ್ಕೆ ಕಾರಣವಾಗುತ್ತದೆ ಎಂಬ ಭೀತಿ ವ್ಯಕ್ತವಾಗಿತ್ತು.
ಆದರೆ ಈ ಹೊಸ ಸೂತ್ರದಂತೆ, ದೇಶದ ಅಧಿಕೃತ ಭಾಷೆೆ ದೇವನಾಗರಿ ಲಿಪಿಯಲ್ಲಿರುವ ಹಿಂದಿ. ಆದರೆ ಅಂಕೆಗಳನ್ನು ಬಳಸುವ ವಿಚಾರದಲ್ಲಿ ಭಾರತೀಯ ಅಂಕಿಗಳನ್ನು ಅಂತಾರಾಷ್ಟ್ರೀಯ ರೂಪದಲ್ಲಿ ಮುದ್ರಿಸಬೇಕು ಎಂದು ನಿರ್ಣಯಕ್ಕೆ ಸಂವಿಧಾನ ರಚನಾ ಸಮಿತಿ ಸಭೆ ಬಂದಿತ್ತು. ಈ ರಾಜಿ ಸೂತ್ರದ ಪ್ರಕಾರ, ರಾಷ್ಟ್ರಭಾಷೆೆ ಎಂದು ಯಾವುದನ್ನೂ ಮಾನ್ಯ ಮಾಡುತ್ತಿಲ್ಲ ಹಾಗೂ ಹಿಂದಿ ಬಳಕೆ ಮಾಡದ ರಾಜ್ಯಗಳು ಅಂತಾರಾಷ್ಟ್ರೀಯ ಅಂಕಿಗಳನ್ನೇ ಮುಂದುವರಿಸಬಹುದು.

ಅಂಕಿ ಬಗ್ಗೆ ಚರ್ಚೆ
ಆಧುನಿಕ ದೃಷ್ಟಿಕೋನದಿಂದ, ಸಂವಿಧಾನ ರೂಪಿಸುವ ವೇಳೆ ದೇವನಾಗರಿ ಅಂಕಿಗಳನ್ನು ಬಳಸುವುದು ಎಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತು ಎನ್ನುವುದನ್ನು ಊಹಿಸುವುದೂ ಕಷ್ಟ. ದೇವನಾಗರಿ ಲಿಪಿಯ ಹಿಂದಿಯನ್ನು ಬಳಸುವುದು ಹಿಂದಿಯೇತರ ಭಾಷೆೆಗಳನ್ನಾಡುವ ರಾಜ್ಯಗಳ ಪಾಲಿಗೆ ನುಂಗಲಾರದ ಗುಳಿಗೆಯಾಯಿತು. ಈ ಭಾಗಕ್ಕೆ ತೀರಾ ಅಪರಿಚಿತವಾಗಿರುವ ಹೊಸ ಭಾಷೆೆಯನ್ನು ಕಲಿಯುವ ಹೊರೆಯನ್ನು ನಮ್ಮ ಮೇಲೆ ಹೇರಿದಂತೆ ಎಂದು ಈ ಜನ ಭಾವಿಸಿದರು. ಆದ್ದರಿಂದ ಅಂತಾರಾಷ್ಟ್ರೀಯವಾಗಿ ಬಳಕೆಯಲ್ಲಿರುವ ಅಂಕಿಗಳನ್ನೇ ಬಳಸುವುದನ್ನು ರಾಜಿಸೂತ್ರವಾಗಿ ಜಾರಿಗೆ ತರಲು ನಿರ್ಧರಿಸಲಾಯಿತು. ಹಿಂದಿ ಮಾತನಾಡುವವರ ಪ್ರಾಬಲ್ಯ ಇದ್ದರೂ, ಅದೊಂದೇ ಕಾರಣಕ್ಕಾಗಿ ಇತರ ದೇಶಿ ಭಾಷೆೆಗಳನ್ನು ಬಲಿಕೊಡುವುದಿಲ್ಲ ಎಂದು ಸ್ಪಷ್ಟಪಡಿಸಲಾಯಿತು.
1949ರ ಸೆಪ್ಟಂಬರ್ 13 ಮತ್ತು 14ನ್ನು ದೇಶಭಾಷೆೆ ಹಾಗೂ ಸಂಖ್ಯೆಯ ಬಗ್ಗೆ ಇರುವ ಪ್ರಶ್ನೆಗಳನ್ನು ಇತ್ಯರ್ಥಪಡಿಸುವ ಸಲುವಾಗಿಯೇ ಮೀಸಲಿಡಲಾಯಿತು. ಈ ದಿನಗಳಲ್ಲಿ ವಿಭಿನ್ನ ಹಿನ್ನೆಲೆಯ ಮೂವರು ಸದಸ್ಯರಿಗೆ ಹೆಚ್ಚು ಮಾತನಾಡಲು ಅವಕಾಶ ನೀಡಲಾಯಿತು. ಮೊಟ್ಟಮೊದಲನೆಯದಾಗಿ ಜವಾಹರಲಾಲ್ ನೆಹರೂ. ಬುದ್ಧಿಜೀವಿ ಎನಿಸಿಕೊಂಡಿದ್ದ ಅವರು, ಅಂತಾರಾಷ್ಟ್ರೀಯ ಅಂಕೆಗಳನ್ನು ಉಳಿಸಿಕೊಳ್ಳುವ ಅಗತ್ಯತೆಯನ್ನು ಪ್ರತಿಪಾದಿಸಿದರು. ಆ ಮೂಲಕ ಭಾರತ ಅಂತಾರಾಷ್ಟ್ರೀಯವಾಗಿ ಅತ್ಯಾಧುನಿಕ ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಾಧ್ಯ ಎನ್ನುವುದು ಅವರ ವಾದವಾಗಿತ್ತು. ದೇಶದ ಪ್ರಗತಿಯಲ್ಲಿ ಇದು ಅನಿವಾರ್ಯ ಎಂದು ಅವರು ಅಭಿಪ್ರಾಯಪಟ್ಟರು.
ಮತ್ತೊಬ್ಬ ಪ್ರಮುಖ ಹಕ್ಕುದಾರರು ವೌಲಾನಾ ಅಬ್ದುಲ್ ಕಲಾಂ ಆಝಾದ್. ಅವರು ಅಂತಾರಾಷ್ಟ್ರೀಯ ಅಂಕಿ, ಅರೆಬಿಕ್ ಮತ್ತು ಭಾರತೀಯ ಇತಿಹಾಸದ ನಡುವೆ ಸಂಪರ್ಕ ಕಲ್ಪಿಸುವ ಪ್ರಯತ್ನ ಮಾಡಿದರು. ಈ ಅಂಕಿಗಳು ವೇದಕಾಲದಿಂದ ಭಾರತದಿಂದ ಹೊರಟು ಇಡೀ ವಿಶ್ವದಲ್ಲಿ ಜನಪ್ರಿಯವಾಗಿವೆ ಎಂದು ಅವರು ಹೇಳಿದರು. ಅವರ ಉದ್ದೇಶ ಸ್ಪಷ್ಟವಾಗಿತ್ತು. ಬಹುಸಂಖ್ಯಾತ ಹಿಂದೂಗಳು ಹಾಗೂ ಅಲ್ಪಸಂಖ್ಯಾತ ಮುಸ್ಲಿಮರಿಗೆ ಸರ್ವಸಮ್ಮತವಾಗಿ ಅಂತಾರಾಷ್ಟ್ರೀಯ ಅಂಕಿ ಬಳಕೆಯಾಗಬೇಕು ಎನ್ನುವುದು ಅವರ ಆಶಯವಾಗಿತ್ತು.
ಮೂರನೆ ಹಕ್ಕುದಾರರು ಸಮಿತಿ ಅಧ್ಯಕ್ಷರಾಗಿದ್ದ ಡಾ.ಬಾಬು ರಾಜೇಂದ್ರ ಪ್ರಸಾದ್. ನಿರ್ಣಯ ಅಂಗೀಕರಿಸಿದ ಬಳಿಕ ಮಾತನಾಡಿದ್ದರಿಂದ ಅವರು ತಟಸ್ಥರಾಗಿ ಉಳಿಯುವುದು ಅನಿವಾರ್ಯವಾಗಿತ್ತು. ಆದರೂ ಅದು ವೌಲ್ಯಯುತ. ಏಕೆಂದರೆ ಅದು ಆ ಸಂಬಂಧ ನಡೆದ ಸಮಗ್ರ ಚರ್ಚೆಯ ಸಾರವಾಗಿತ್ತು. ಇದು ಎಷ್ಟು ಐತಿಹಾಸಿಕ ಮತ್ತು ಮಹತ್ವಪೂರ್ಣ ಎಂದು ಅವರು ವಿವರಿಸಿದರು. ಇದಕ್ಕೆ ಒಂದು ಉಪಮೆಯನ್ನೂ ನೀಡಿದರು.
‘‘ಕೆಲ ಸ್ನೇಹಿತರು ನಮ್ಮನ್ನು ಆಹ್ವಾನಿಸಬೇಕು ಎಂದು ನಾವು ಬಯಸುತ್ತೇವೆ. ಅವರು ನಮಗೆ ಆಮಂತ್ರಣ ನೀಡುತ್ತಾರೆ. ನೀವು ನಮ್ಮ ಮನೆಗೆ ಬಂದು ಉಳಿಯಬಹುದು ಎಂದು ಅವರು ಹೇಳುತ್ತಾರೆ. ನಿಮಗೆ ಸದಾ ಸ್ವಾಗತ ಎಂದು ಹೇಳುತ್ತಾರೆ. ಆದರೆ ನಮ್ಮ ಮನೆಗೆ ಬರುವಾಗ ದಯವಿಟ್ಟು ಇಂಗ್ಲಿಷ್ ಮಾದರಿಯ ಶೂ ಧರಿಸಿ. ನಿಮ್ಮ ಮನೆಯಲ್ಲಿ ಬಳಸುವ ಭಾರತೀಯ ಮಾದರಿಯ ಚಪ್ಪಲಿ ಬೇಡ ಎಂದು ಹೇಳುತ್ತಾರೆ. ಆದರೆ ಅವರ ಆಹ್ವಾನವನ್ನು ತಿರಸ್ಕರಿಸುವಷ್ಟು ಜಾಣತನ ನನ್ನಲ್ಲಿಲ್ಲ. ಹಾಗೆಂದು ನನ್ನ ಚಪ್ಪಲಿ ತ್ಯಜಿಸುವ ಇಚ್ಛೆಯೂ ನನಗಿಲ್ಲ ಎಂದು. ನಾನು ಆಂಗ್ಲ ಮಾದರಿಯ ಶೂ ಒಪ್ಪಿಕೊಂಡು ಆಹ್ವಾನ ಒಪ್ಪಿಕೊಳ್ಳುತ್ತೇನೆ. ಹೀಗೆ ಕೊಡು- ಕೊಳ್ಳುವಿಕೆಯಿಂದ ನಾವು ದೇಶದ ಸಮಸ್ಯೆಗಳನ್ನು ಬಗೆಹರಿಸಬಹುದು’’
ಈ ಉಪಮೆಯು ರಾಷ್ಟ್ರನಿರ್ಮಾಣದಲ್ಲಿ ಸಂವಿಧಾನಾತ್ಮಕ ಹಾಗೂ ರಾಷ್ಟ್ರೀಯ ಹೊಂದಾಣಿಕೆಯ ಮಹತ್ವವನ್ನು ಪ್ರತಿಪಾದಿಸಿತ್ತು. ಜತೆಗೆ ಹಿಂದಿಯೇತರ ರಾಜ್ಯಗಳ ಜನರು ಅಂತಾರಾಷ್ಟ್ರೀಯ ಅಂಕಿಯನ್ನು ಉಳಿಸುವುದನ್ನು ಎಷ್ಟು ಪ್ರಮುಖ ಎಂದು ಭಾವಿಸಿದ್ದರು ಎನ್ನುವುದನ್ನೂ ಇದು ಸ್ಪಷ್ಟಪಡಿಸುತ್ತದೆ.

ಹೊಸ ನೋಟು
ಈ ಚರ್ಚೆಯು ಸಹಜವಾಗಿಯೇ ದೇವನಾಗರಿ ಅಂಕಿಯನ್ನು ಪರಿಚಯಿಸಿರುವ ನಿರ್ಧಾರದ ಐತಿಹಾಸಿಕ ಮಹತ್ವವನ್ನು ಹೇಳುತ್ತದೆ. ಆದ್ದರಿಂದ ಮದ್ರಾಸ್ ಹೈಕೋರ್ಟ್‌ನಲ್ಲಿ ದಾವೆ ಸಲ್ಲಿಸಿದವರ ಕ್ರಮ ಖಂಡಿತವಾಗಿಯೂ ಸರಕಾರವನ್ನು ಇಷ್ಟಪಡದವರು ಮಾಡಿದ ವೃಥಾ ಪ್ರಯತ್ನವಲ್ಲ. ಅಥವಾ ಕಾಳಧನ ಹೊಂದಿರುವವರ ಬಗೆಗಿನ ಕರುಣೆಯಿಂದಲೂ ಸಲ್ಲಿಸಿದ್ದಲ್ಲ. ಇದು ಉತ್ತರದ ಹಿಂದಿ ಮಾತನಾಡುವ ಜನತೆ ಹಾಗೂ ದಕ್ಷಿಣ ಭಾರತದ ಜನರ ನಡುವಿನ ಒಪ್ಪಂದವನ್ನು ಉಳಿಸಬೇಕು ಎನ್ನುವ ಮನವಿಯಾಗಿದೆ.
ಜತೆಗೆ ಈ ಚರ್ಚೆಯು, ವೈವಿಧ್ಯಮಯ ಸಮಾಜದಲ್ಲಿ ಚರ್ಚಾಮಹತ್ವವನ್ನು ಹಾಗೂ ಪರಸ್ಪರ ಸಲಹೆ ಪಡೆಯುವುದರ ಅಗತ್ಯವನ್ನು ಪ್ರತಿಪಾದಿಸಿದೆ. ಇಂಥ ದೀರ್ಘಾವಧಿ ಹೊಂದಾಣಿಕೆಯನ್ನು ಅನಿಶ್ಚಿತ ಪರಿಸ್ಥಿತಿಯಲ್ಲಿ ಉಲ್ಲಂಘಿಸುವುದು ಅಪಾಯಕಾರಿ ಪರಿಣಾಮ ಉಂಟುಮಾಡಬಲ್ಲದು.

ಕೃಪೆ: thewire.in

share
ಅಪೂರ್ವ ಶರ್ಮಾ
ಅಪೂರ್ವ ಶರ್ಮಾ
Next Story
X