ಕನ್ನಡ ಸಮೃದ್ಧ ಭಾಷೆ: ಜಯ ಕುಮಾರ್ ಗರ್ಗ್

ಮಂಗಳೂರು, ನ.30: ಸಿರಿಗಂಧ ಕಾರ್ಪೊರೇಶನ್ ಬ್ಯಾಂಕ್ ಕನ್ನಡ ಬಳಗ ಹಾಗೂ ಕಾರ್ಪೊರೇಶನ್ ಬ್ಯಾಂಕ್ ನೌಕರರ ಕ್ರೀಡಾ ಹಾಗೂ ಮನೋರಂಜನಾ ಸಂಘದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಸಿರಿಗಂಧ ಬಳಗದ ವಾರ್ಷಿಕೋತ್ಸವವು ಪಾಂಡೇಶ್ವರದ ಕಾರ್ಪೊರೇಶನ್ ಬ್ಯಾಂಕ್‌ನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಜರಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಯ್ ಕುಮಾರ್ ಗರ್ಗ್ ಭಾರತೀಯ ಭಾಷೆಗಳಲ್ಲೇ ಕನ್ನಡ ಸಮೃದ್ಧ ಭಾಷೆಯಾಗಿದೆ ಎಂದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಮೆಹ್ತಾ, ಗೋಪಾಲ್ ಮುರಳಿ ಭಗತ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ‘ಸಿರಿಗಂಧ’ ವಾರ್ಷಿಕ ಸಂಚಿಕೆ ಬಿಡುಗಡೆ, ರಾಜ್ಯೋತ್ಸವಕ್ಕೆ ಸಂಬಂಧಿಸಿ ನಡೆದ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಿತು.
ಸಿರಿಗಂಧ ಬಳಗ ಹಾಗೂ ಕಾರ್ಪೊರೇಶನ್ ಬ್ಯಾಂಕ್ ನೌಕರರ ಕ್ರೀಡಾ ಹಾಗೂ ಮನೋರಂಜನಾ ಸಂಘದ ಅಧ್ಯಕ್ಷ ಲಕ್ಷ್ಮಿನಾಥ ರೆಡ್ಡಿ ಸ್ವಾಗತಿಸಿದರು. ಉಷಾ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಬಳಗದ ಕಾರ್ಯದರ್ಶಿ ಶ್ರೀರಂಗ ಹೊಸಬೆಟ್ಟು ವಂದಿಸಿದರು







