ಪನ್ಸಾರೆ ಕೊಲೆ: ಕೇಸರಿ ನಾಯಕನ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

ಮುಂಬೈ,ನವೆಂಬರ್ 30: ಪ್ರಮುಖ ಸಾಮಾಜಿಕ ಕಾರ್ಯಕರ್ತ ಮಹಾರಾಷ್ಟ್ರ ಸಿಪಿಐ ನಾಯಕ ಗೋವಿಂದ್ ಪನ್ಸಾರೆಯವರನ್ನು ಹತ್ಯೆಗೈದ ಪ್ರಕರಣದಲ್ಲಿ ಹಿಂದೂ ಜನಜಾಗೃತಿ ಸಮಿತಿ ನಾಯಕ ಡಾ. ವೀರೇಂದ್ರ ತಾವ್ಡೆ ವಿರುದ್ಧ ವಿಶೇಷ ತನಿಖಾ ದಳ(ಎಸ್ಸೈಟಿ) ಕೋರ್ಟಿಗೆ ಆರೋಪ ಪಟ್ಟಿಯನ್ನು ಸಲ್ಲಿಸಿದೆ ಎಂದು ವರದಿಯಾಗಿದೆ. ಕಳೆದವರ್ಷ ಫೆಬ್ರವರಿ 16ರಂದು ಇಬ್ಬರು ಬೈಕ್ ಸವಾರರು ಪನ್ಸಾರೆ ಮತ್ತು ಅವರ ಪತ್ನಿಯ ಮೇಲೆ ಗುಂಡುಹಾರಿಸಿದ್ದರು. ಪತ್ನಿ ಉಮಾ ಪನ್ಸಾರೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಕೊನೆಗೂ ಗುಣಮುಖರಾಗಿದ್ದರು. ಸನಾತನ ಸಂಸ್ಥೆಯ ಕಾರ್ಯಕರ್ತರನ್ನು ಉಮಾಗುರುತಿಸಿದ್ದರು. ತೊಡೆ ಆರೋಪಿಯಾಗಿರುವ ಎರಡನೆ ಕೊಲೆಕೃತ್ಯ ಪ್ರಕರಣ ಇದುಎಂದು ವರದಿ ತಿಳಿಸಿದೆ.
Next Story





