ಬಾಲ ಸಂರಕ್ಷಣಾ ಕೇಂದ್ರಕ್ಕೆ ಪ್ರಶಸ್ತಿ

ಮಂಗಳೂರು, ನ.30: ರೋಟರಿ ಮಂಗಳೂರು ಸೆಂಟ್ರಲ್ ಹಾಗೂ ರೋಟರ್ಯಾಕ್ಟ್ ಮಂಗಳೂರು ಸಿಟಿ ಇದರ ಜಂಟಿ ಆಶ್ರಯದಲ್ಲಿ ಅನಾಥಾಶ್ರಮ ಮಕ್ಕಳಿಗಾಗಿ ಶಾರದಾ ವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಅನಾಥಾಶ್ರಮ ಮಕ್ಕಳ ಒಲಂಪಿಕ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕುತ್ತಾರ್ ಪದವು ಬಾಲಸಂರಕ್ಷಣಾ ಕೇಂದ್ರದ ತಂಡಕ್ಕೆ ಪ್ರಥಮ ಪ್ರಶಸ್ತಿ ಲಭಿಸಿದೆ.
ರೋಟರಿ ಜಿಲ್ಲಾ ಗವರ್ನರ್ ರೊ.ಡಾ. ಆರ್.ಎಸ್ ನಾಗಾರ್ಜುನ್, ಸಂಘಟನಾ ಅಧ್ಯಕ್ಷ ರೊ. ಡಾ. ದೇವದಾಸ್ ರೈ, ರೋಟರಿ ಸಂಸ್ಥೆಯ ಅಧ್ಯಕ್ಷ ರೋ. ಅನಿಲ್ ಗೊನ್ಸಲ್‌ೀಸ್, ಕಾರ್ಯದರ್ಶಿ ರೊ. ರೇಮಂಡ್ ಡಿಕುನ್ಹ, ರೋಟರ್ಯಾಕ್ಟ್ ಸಂಸ್ಥೆಯ ಅಧ್ಯಕ್ಷ ರೋ. ಯತೀಶ್ ಸಾಲ್ಯಾನ್, ಕಾರ್ಯದರ್ಶಿ ರೊ. ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು.
Next Story





